ಶಿವಮೊಗ್ಗ ನಗರದ ಆಶ್ರಯ ಸಮಿತಿಯು ಹಿಂದೆ ಬೊಮ್ಮನ ಕಟ್ಟೆಯಲ್ಲಿ ನಿರ್ಮಿಸಿದ್ದ ಆಶ್ರಯ ನಿವೇಶನಗಳಲ್ಲಿ ೨೦ ವರ್ಷ ಕಳೆದರು ಮನೆ ಕಟ್ಟಿಕೊಳ್ಳದಿರುವುದರ ಬಗ್ಗೆ ಆಕ್ಷೇಪಿಸಿ ಅವುಗಳನ್ನು ರದ್ದು ಪಡಿಸಲು ತೀರ್ಮಾನಿಸಿತ್ತು. ಈಗ ಅಂತಿಮ ಹಂತದ ಮೂರು ತಿಂಗಳ ಕಾಲಾವಕಾಶ ನೀಡಲಾದರೂ ಸಹ ೫೪ ನಿವೇಶನಗಳಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದರೆ ಅವುಗಳನ್ನು ತೆರವುಗೊಳಿಸಲಾಗುತ್ತದೆ ಎಂದು ನಗರ ಆಶ್ರಯ ಸಮಿತಿ ಅಧ್ಯಕ್ಷ ಹೆಚ್.ಶಶಿಧರ್ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಅವರು ಬೊಮ್ಮನಕಟ್ಟೆ ಎ ಬ್ಲಾಕ್‌ನ ನಿವೇಶನ ಸಂಖ್ಯೆ, ೪೨, ೫೫, ೬೯, ೭೦, ೧೩೭, ೧೪೮, ೧೮೦, ೧೮೫, ೧೮೯, ೧೯೯, ೨೧೦, ೨೧೨, ೨೫೮, ೨೬೨, ೨೮೪, ೩೦೩, ೩೩೨, ೩೩೬, ೩೪೫, ೩೫೫, ೩೬೪, ೩೬೯, ೩೭೧, ೩೭೨, ೩೯೦, ೪೦೭, ೪೧೯, ೪೩೬, ೪೩೮, ೪೪೧, ೪೫೯, ೪೬೫, ೪೬೮, ೪೭೭, ೪೮೫, ಬಿ ಬ್ಲಾಕ್ ನಿವೇಶನ ಸಂಖ್ಯೆ ೨೨೨, ೨೨೬, ೨೮೨, ಡಿ ಬ್ಲಾಕ್‌ನ ನಿವೇಶನ ಸಂಖ್ಯೆ ೫೬, ೧೭೨, ೩೦೭, ೩೧೨, ೩೧೩, ೩೨೫, ೩೭೯, ೪೦೧, ೪೨೬, ೪೩೧, ೪೩೨, ೪೩೩, ೪೪೭, ಹಾಗೂ ಇ ಬ್ಲಾಕ್‌ನ ನಿವೇಶನ ಸಂಖ್ಯೆ ೧೭೭, ೧೭೮, ೧೭೯ ಪಟ್ಟಿಯಲ್ಲಿ ಹೊಂದಿರುತ್ತದೆ.
ರೈತರಿಗೆ ನೀಡಿರುವ ನಿವೇಶನಗಳಲ್ಲಿ ಯಾರಾದರೂ ಅಕ್ರಮವಾಗಿ ಮನೆ ಕಟ್ಟಿಕೊಂಡಲ್ಲಿ ಅವುಗಳನ್ನು ತೆರವುಗೊಳಿಸಲಾಗುತ್ತದೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ.
ಈ ಹಿಂದೆ ಆಶ್ರಯ ಯೋಜನೆಗೆ ಕ್ರಯಕ್ಕೆ ಕೊಟ್ಟ ಜಮೀನುದಾರರಿಗೆ ಎಕರೆಗೆ ೧ ನಿವೇಶನ ಎಂಬಂತೆ ಈ ಮೇಲಿನ ಪಟ್ಟಿಯಂತೆ ರೈತರಿಗೆ ಹಂಚಿಕೆ ಮಾಡಲಾಗಿತ್ತು. ಇಂತಹ ಹಂಚಿಕೆಯಾದ ನಿವೇಶನಗಳನ್ನು ಹೊರತುಪಡಿಸಿ ಉಳಿದ ಮೂಲ ಫಲಾನುಭವಿಗಳು ಮತ್ತು ಅವರಿಂದ ಅಧಿಕಾರ ಪಡೆದವರಿಗೆ ಮಾತ್ರ ಮನೆ ನಿರ್ಮಾಣ ಮಾಡಲು ೩ ತಿಂಗಳ ಕಾಲವಕಾಶವನ್ನು ನೀಡಲಾಗಿದೆ. ಇದನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಬೇಕೆಂದು ಅಧ್ಯಕ್ಷರು ತಿಳಿಸಿದ್ದಾರೆ.