ಕಿತ್ತೂರು ರಾಣಿ ಚೆನ್ನಮ್ಮ ವೀರಮಾತೆ ಎಂದು ಯಾಕೆ ಕರೆಯಲಾಯಿತು ಎಂಬುದರ ಬಗ್ಗೆ ಯುವಪೀಳಿಗೆ ತಿಳಿದುಕೊಳ್ಳಬೇಕು ಎಂದು ಶಾಸಕ ಡಿ ಎಸ್ ಅರುಣ್ ಹೇಳಿದ್ದಾರೆ.
ನಗರದ ಕುವೆಂಪುರಂಗ ಮಂದಿರದಲ್ಲಿ ಜಿಲ್ಲಾ ಪಂಚಾಯತ್ ಜಿಲ್ಲಾಡಳಿತ ಮಹಾನಗರ ಪಾಲಿಕೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ರಾಜ್ಯ ವೀರಶೈವ ಲಿಂಗಾಯತ ಪಂಚಮಶಾಲಿ ಸಂಘದ ಆಶ್ರಯದಲ್ಲಿ ನಡೆದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
ವೀರರಾಣಿ ಚೆನ್ನಮ್ಮನ ಶೌರ್ಯ ಮತ್ತು ಅವರ ವೀರತನ ಯುವ ಪೀಳಿಗೆಗೆ ಪ್ರೇರಣೆಯಾಗಬೇಕು. ಇತಿಹಾಸ ಕೇಳುವ ಪರಿಸ್ಥಿತಿ ಮತ್ತು ತಾಳ್ಮೆ ಕಡಿಮೆಯಾಗುತ್ತಿದೆ. ಆಸಕ್ತಿ ಇಲ್ಲವಾಗಿದೆ ಇತಿಹಾಸ ಪುರುಷರ ಚರಿತ್ರೆಯನ್ನು ತಿಳಿಸುವ ಕೆಲಸ ಶಿಕ್ಷಣ ಪದ್ಧತಿಯಲ್ಲಿ ಕಡ್ಡಾಯವಾಗಿ ಆಗಬೇಕಿದೆ. ಶಿಕ್ಷಣ ಪದ್ಧತಿಯಲ್ಲಿ ಬದಲಾವಣೆಯೂ ಮಾಡಬೇಕಿದೆ. ಸಮಸ್ಯೆಗಳು ಬಂದಾಗ ಹಿಂದಿನ ಇತಿಹಾಸ ಪುರುಷರು. ಮತ್ತು ಮಹಾಪುರುಷರು ಯಾವ ರೀತಿ ಎದುರಿಸಿದರು ಎಂಬ ಅರಿವು ಯುವ ಪೀಳಿಗೆಗೆ ಬೇಕಾಗಿದೆ ಸಮಾಜ ಕೂಡ ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕರ್ತವ್ಯ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ. ಜಿಲ್ಲಾ ಪಂಚಾಯತ್ ಸಿಇಒ ಎನ್ ಡಿ ಪ್ರಕಾಶ್ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಉಮೇಶ್ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಸಂಘಟನಾ ಕಾರ್ಯದರ್ಶಿ ಎಂ ಸಿದ್ದೇಶ್ ಬೇಗೂರು ಮಾತನಾಡಿ ರಾಣಿ ಚೆನ್ನಮ್ಮ ಜಯಂತಿ ಶಾಲಾ ಕಾಲೇಜುಗಳಲ್ಲಿ ಮತ್ತು ಸರ್ಕಾರಿ ಕಚೇರಿಗಳಲ್ಲಿ ಕೂಡ ಆಚರಣೆ ಮಾಡಬೇಕು ಮತ್ತು ರಾಣಿ ಚೆನ್ನಮ್ಮನ ಜೀವನದರ್ಶನವನ್ನು ಮತ್ತು ಅವರ ಶೌರ್ಯವನ್ನು ತಿಳಿಸುವ ಕೆಲಸವಾಗಬೇಕು ಎಂದು ಸರ್ಕಾರಕ್ಕೆ ಮನವಿ ನೀಡಲಿದ್ದೇವೆ, ಜನ ಪ್ರತಿನಿಧಿಗಳು ಸರ್ಕಾರದ ಗಮನಕ್ಕೆ ತರಬೇಕು ಎಂದರು. ಜಿಲ್ಲಾಧ್ಯಕ್ಷ ಚಂದ್ರಪ್ಪ ಮೆಡ್ಲೇರಿ. ನಗರಾಧ್ಯಕ್ಷ ಟಿ ಎಂ ಕುಮಾರ್.ಚೆನ್ನಪ್ಪ. ಹಾಗೂ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
.