ಶಿವಮೊಗ್ಗ: ಆರೋಗ್ಯ ಕ್ಷೇತ್ರಕ್ಕೆ ಆಯುರ್ವೇದ ಕೊಡುಗೆ ಅಪಾರ. ಇಂದಿಗೂ ಅತಿ ಹೆಚ್ಚು ಜನರು ನಂಬಿಕೆ ಇಟ್ಟು ಆರೋಗ್ಯ ಚಿಕಿತ್ಸೆಗೆ ಬರುವ ವಿದ್ಯೆಯೇ ಆಯುರ್ವೇದ ಎಂದು ಟಿಎಂಎಇಎಸ್ ಆಯುರ್ವೇದ ಮಹಾವಿದ್ಯಾಲಯ ಮತ್ತು ಅತ್ರೇಯ ಆಯುರ್ವೇದಾಲಯ ಉಪನ್ಯಾಸಕ ಡಾ. ನಾಗರಾಜ ಎಸ್.ಅಂಗಡಿ ಹೇಳಿದರು.

ಶಿವಮೊಗ್ಗ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಯುರ್ವೇದ ಕುರಿತು ಮಾತನಾಡಿ, ಶತಮಾನಗಳಿಂದ, ಸಾವಿರಾರು ವರ್ಷಗಳಿಂದ ಏನೇ ಆರೋಗ್ಯ ಸಮಸ್ಯೆ ಬಂದರೂ ಮನೆ ಮನೆಯಲ್ಲೂ, ಅಜ್ಜನ ರೂಪದಲ್ಲೂ, ಪಂಡಿತರ ರೂಪದಲ್ಲೂ, ಅಪ್ಪನ ರೂಪದಲ್ಲಿ, ಅಮ್ಮನ ರೂಪದಲ್ಲಿ, ವೈದ್ಯರ ರೂಪದಲ್ಲೂ ಆಯುರ್ವೇದ ವೈದ್ಯ ಉಪಯುಕ್ತವಾಗುತ್ತಿದೆ ಎಂದು ತಿಳಿಸಿದರು.

ಇಂದಿಗೂ ಆರೋಗ್ಯ ಬಲಿಷ್ಠವಾಗಿ ಇರಲು ಮತ್ತು ಇಂಥ ಕೆಟ್ಟ ದಿನಗಳಲ್ಲೂ ಅತಿ ಹೆಚ್ಚು ವಿಶ್ವಾಸವನ್ನು, ನಂಬಿಕೆಯನ್ನು ಉಳಿಸಿಕೊಂಡಿರುವ ವಿಜ್ಞಾನವೇ ಆಯುರ್ವೇದ. ಆರೋಗ್ಯ ಕ್ಷೇತ್ರಕ್ಕೆ ಆಯುರ್ವೇದದ ಕೊಡುಗೆ ಅಪಾರ ಎಂದರು.
ಅAತರಾಷ್ಟ್ರೀಯ ಮಟ್ಟದಲ್ಲಿ ಆಯುರ್ವೇದ ಮತ್ತು ಯೋಗ ಬಹಳ ಪ್ರಚಲಿತವಾಗಿದೆ. ದೊಡ್ಡ ಮಟ್ಟದಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿವೆ. ಭಾರತದಲ್ಲೂ ಕೋವಿಡ್ ನಂತರ ಆಯುರ್ವೇದ ಔಷಧಿಗಳ ಬಳಕೆ ಹೆಚ್ಚುತ್ತಿದ್ದು, ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎಂದು ತಿಳಿಸಿದರು.

ಆಯುರ್ವೇದ ಮತ್ತು ಧನ್ವಂತರಿಯ ದಿನಾಚರಣೆಯ ಪ್ರಯುಕ್ತ ನಮ್ಮ ಟಿವಿ ಶಿವಮೊಗ್ಗ ವತಿಯಿಂದ ಆಯುರ್ವೇದ ವೈದ್ಯ ಡಾ. ನಾಗರಾಜ ಅಂಗಡಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಈ ಸಮಯದಲ್ಲಿ ನಮ್ಮ ಟಿವಿ ನಿರೂಪಕ ಮತ್ತು ವರದಿಗಾರ ಜಿ.ವಿಜಯ್ ಕುಮಾರ್, ಪ್ರಮುಖರಾದ ಶ್ರೀಕಾಂತ್, ನಾಗರಾಜ ಹಾದ್ರಿಹಳ್ಳಿ, ಅನಿತಾ ಮತ್ತು ಇತರರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…