ಶಿವಮೊಗ್ಗ ನಗರದಲ್ಲಿ ಮಾನ್ಯ ಕ್ರೀಡಾ ಸಚಿವರಾದ ಶ್ರೀ ಕೆ ಸಿ ನಾರಾಯಣಗೌಡ ರವರಿಗೆ ಶಿವಮೊಗ್ಗ ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಶನ್ ವತಿಯಿಂದ ಭೇಟಿಯಾಗಿ ಈ ಹಿಂದೆ ಬಾಕ್ಸಿಂಗ್ ಕ್ರೀಡಾಪಟುಗಳು ಬೆಂಗಳೂರಿಗೆ ಹೋಗಿ ಬಾಕ್ಸಿಂಗ್ ತರಬೇತಿಯನ್ನು ಪಡೆದು ಮಿನಿ ಒಲಿಂಪಿಕ್ಸ್ ಮತ್ತು ಮತ್ತು ರಾಜ್ಯ ಮಟ್ಟದ ಬಾಕ್ಸಿಂಗ್ ಕ್ರೀಡಾಕೂಟದಲ್ಲಿ ಪದಕಗಳನ್ನು ಪಡೆದಿರುವ ಬಗ್ಗೆ ತಮ್ಮ ಗಮನಕ್ಕೆ ತಂದು ಜಿಲ್ಲೆಯಲ್ಲಿ ಬಾಕ್ಸಿಂಗ್ ಶೆಡ್ ನಿರ್ಮಾಣ ಮಾಡಿ ಬಾಕ್ಸಿಂಗ್ ರಿಂಗ್ ವ್ಯವಸ್ಥೆಯನ್ನು ಮಾಡಿಕೊಡಬೇಕಾಗಿ ವಿನಂತಿ ಮಾಡಲಾಗಿತ್ತು ಎಂದು ಹೇಳಲಾಯಿತು.
ಅದರಂತೆ ಇಲಾಖೆಯಿಂದ ಪ್ರಸ್ತಾವನೆಯನ್ನು ಸಹ ಕಳುಹಿಸಿ ನಿರ್ಮಿತಿ ಕೇಂದ್ರದವರು ಪ್ಲಾನಿಂಗ್ ಅನ್ನು ಸಿದ್ಧಪಡಿಸಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಕಳುಹಿಸಿ 6 ತಿಂಗಳಾಯಿತು
ನಂತರ ಸದರಿ ಪ್ರಸ್ತಾವನೆಗೆ ಅನುಮೋದನೆ ನೀಡಲು ಕ್ರೀಡಾ ಇಲಾಖೆ ಅಪರ ಕಾರ್ಯದರ್ಶಿ ಗಳಿಗೆ ಭೇಟಿಯಾಗಿ ಮನವಿ ಸಲ್ಲಿಸಿದಾಗ ಅವರು ಸಹ ಅನುಮೋದನೆ ನೀಡಲು ಸಹಿಯನ್ನು ಮಾಡಿದರು.
ಇದಾದರೂ ಈವರೆಗೂ ಇಲಾಖೆಯಿಂದ ಯಾವುದೇ ಹಣ ಬಿಡುಗಡೆಯಾಗಿ ಜಿಲ್ಲೆಯ ಕ್ರಿಡಾಪಟುಗಳಿಗೆ ಬಾಕ್ಸಿಂಗ್ ಶೆಡ್ ಹಾಗೂ ಬಾಕ್ಸಿಂಗ್ ರಿಂಗ್ ವ್ಯವಸ್ಥೆಯಾಗಿಲ್ಲ ಎಂದು ಸಚಿವರಿಗೆ ತಿಳಿಸಿ
ಯಾವುದಾದರೊಂದು ಅನುದಾನದಡಿ ಈಗಾಗಲೇ ಸಲ್ಲಿಸಿರುವ ಪ್ರಸ್ತಾವನೆಗೆ ಅನುಮೋದನೆ ನೀಡಿ ಹಣ ಬಿಡುಗಡೆ ಮಾಡಿ ಕೂಡಲೇ ಬಾಕ್ಸಿಂಗ್ ಶೆಡ್ ನಿರ್ಮಾಣ ಕಾರ್ಯವನ್ನು ಆರಂಭಿಸಿ ಕ್ರೀಡಾಪಟುಗಳಿಗೆ ಅನುಕೂಲ ಮಾಡಿಕೊಡಬೇಕಾಗಿ ಮನವಿ ಮಾಡಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಶರವಣ ಕೋಚ್ ವೆಂಕಟೇಶ್ ಉಪಸ್ಥಿತರಿದ್ದರು.