ಇತ್ತೀಚಿಗೆ ಕೊರೋನಾ ಹೆಮ್ಮಾರಿ ನೂರಾರು ಕುಟುಂಬಗಳ ನೆಮ್ಮದಿಯನ್ನು ಕಸಿದುಕೊಂಡಿದೆ ಈ ನಡುವೆ ಮೃತಪಟ್ಟ ಕುಟುಂಬಸ್ಥರಿಗೆ ಸಮ ಯಕ್ಕೆ ಸರಿಯಾಗಿ ಅಗತ್ಯ ಸೌಲಭ್ಯಗಳು ಸಿಗದೆ ಪರದಾಡುತ್ತಿರುವ ದೃಶ್ಯ ಜಿಲ್ಲೆಯಲ್ಲಿ ಸಾಮಾನ್ಯವಾಗಿವೆ .ಅನೇಕರಿಗೆ ಕುಟುಂಬಕ್ಕೆ ಆಧಾರವಾಗಿದ್ದವರನ್ನು ಕಳೆದುಕೊಂಡ ನೋವು ಒಂದೆಡೆಯಾದರೆ , ತ್ವರಿತಗತಿಯಲ್ಲಿ ಅಗತ್ಯ ಸೌಲಭ್ಯ ಸಿಗದೆ ಬೇಸರ ಮತ್ತೊಂದೆಡೆ , ಮೊದಲೇ ನೊಂದಿರುವ ಕುಟುಂಬಸ್ಥರಿಗೆ ಅಧಿಕಾರಿಗಳು ಹಾಗೂ ಸರ್ಕಾರ ಗಾಯದ ಮೇಲೆ ಬರೆ ಎಳೆಯುತ್ತಿದೆ . ಸರ್ಕಾರ ಕೊರೋನಾ ದಿಂದ ಮೃತಪಟ್ಟವರಿಗೆ 1 ಲಕ್ಷ ಹಣ ನೀಡುವುದಾಗಿ ಹೇಳಿ ಹಲವು ದಿನಗಳೇ ಕಳೆದಿದ್ದರೂ ಈವರೆಗೂ ಹಣ ಕುಟುಂಬಸ್ಥರಿಗೆ ತಲುಪಿಲ್ಲ.ಇನ್ನೂ ಮೃತಪಟ್ಟವರ ಮರಣ ಪ್ರಮಾಣಪತ್ರ ಪಡೆಯಲು ಕುಟುಂಬಸ್ಥರು ವಾರಗಟ್ಟಲೆ ಕಚೇರಿಗೆ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ .ಶೀಘ್ರವೇ ಜಿಲ್ಲಾಡಳಿತ ಹಾಗೂ ಸರ್ಕಾರ ಈ ಬಗ್ಗೆ ಕ್ರಮ ವಹಿಸಿ ಕೊರೋನಾ ದಿಂದ ಮೃತಪಟ್ಟವರ ಕುಟುಂಬಗಳ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.

ಪ್ರಮುಖ ಒತ್ತಾಯಗಳು.

1.ಕೊರೋನಾದಿಂದ ಮೃತಪಟ್ಟವರ ಮರಣ ಪ್ರಮಾಣ ಪತ್ರವನ್ನು ಶೀಘ್ರವೇ ಕುಟುಂಬಸ್ಥರಿಗೆ ತಲುಪಿಸಬೇಕು.
2.ಸರ್ಕಾರದಿಂದ ನೀಡುವುದಾಗಿ ಹೇಳಿರುವ ಪರಿಹಾರ ಹಣವನ್ನು ಶೀಘ್ರವೇ ಕುಟುಂಬಸ್ಥರಿಗೆ ನೀಡಬೇಕು .
3.ಸರ್ಕಾರಿ ಉದ್ಯೋಗಿಗಳು ನೀಡುವುದಾಗಿ ಹೇಳಿರುವ ಪರಿಹಾರ ಹಣವನ್ನು ಶೀಘ್ರವೇ ಕುಟುಂಬಸ್ಥರಿಗೆ ನೀಡಬೇಕು ಮೃತಪಟ್ಟಿದ್ದರೆ ಶೀಘ್ರವೇ ಅವರ ಕುಟುಂಬಸ್ಥರಿಗೆ ಉದ್ಯೋಗ ನೀಡಬೇಕು
4.ಮೃತಪಟ್ಟವರ ಹೆಸರಿನಲ್ಲಿದ್ದ ಖಾತೆ ಇನ್ನಿತರೆ ದಾಖಲೆಗಳನ್ನು ಕುಟುಂಬಸ್ಥರಿಗೆ ಶೀಘ್ರ ಬದಲಾವಣೆ ಮಾಡಿಕೊಡಬೇಕು .
5.ಸರ್ಕಾರದ ಇನ್ನಿತರೆ ಸೌಲಭ್ಯಗಳನ್ನು ಅತಿಶೀಘ್ರವೇ ತಲುಪಿಸಬೇಕು .
6.ನೊಂದ ಕುಟುಂಬಗಳ ಸದಸ್ಯರನ್ನು ಅಲೆದಾಡಿಸದೆ ಸರ್ಕಾರ ಹಾಗೂ ಜಿಲ್ಲಾಡಳಿತ ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶಿಸಬೇಕು ಎಂದು ಒತ್ತಾಯಿಸುತ್ತಿದ್ದೇವೆ.
ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153