ಶಿವಮೊಗ್ಗ ಜಿಲ್ಲಾದ್ಯಂತ ಸರಿ ಸುಮಾರು 22.000 SSLC ವಿದ್ಯಾರ್ಥಿಗಳಿದ್ದು ಇವರಿಗೆ ಈ ಬಾರಿ ಪರೀಕ್ಷೆಯಲ್ಲಿ ಮಲ್ಟಿಪಲ್ ಅಪ್ಷನಲ್ ಪರೀಕ್ಷೆ ಇರುತ್ತದೆ. ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 22.000 SSLC ವಿದ್ಯಾರ್ಥಿಗಳಿರುತ್ತಾರೆ, ಅವರಿಗೆ 6 ವಿಷಯಗಳ ಪರೀಕ್ಷೆ ಇರುತ್ತದೆ. ಈ ಬಾರಿ SSLC ಪರೀಕ್ಷೆಯು OMR ಶೀಟಿನಲ್ಲಿ ಪರೀಕ್ಷೆ ಬರಿಯಲಾಗುತ್ತದೆ. ಈ OMR ಶೀಟ್ ಹೊಸದಾಗಿರುವುದರಿಂದ ವಿದ್ಯಾರ್ಥಿಗಳಿಗೆ ಬಹಳಷ್ಟು ಗೊಂದಲವುಂಟು ಮಾಡಿರುವುದರಿಂದ ಮಾದರಿ OMR ಅನ್ನು ವಿದ್ಯಾರ್ಥಿಗಳಿಗೆ ತಲುಪಿಸಲಾಗಿದೆ. ಈ OMR ಶೀಟಿನ ಹಿಂಬದಿಯಲ್ಲಿ ಖಾಸಗಿ ಶಾಲೆಯ ಜಾಹಿರಾತು ಇರುತ್ತದೆ. ಈ ಜಾಹಿರಾತಿನಲ್ಲಿ ಖಾಸಗಿ ಶಾಲೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ವಿವರ ಹಾಗೂ PUC ಯಲ್ಲಿ ತಮ್ಮ ಶಾಲೆಯಲ್ಲಿ ಅನುಕೂಲವಿರುವ ಸೌಲಭ್ಯಗಳ ಬಗ್ಗೆ ಹಾಗೂ PUC ಯಲ್ಲಿ ಅತಿ ಹೆಚ್ಚು ಮಾರ್ಕ್ಸ್ ಅನ್ನು ತೆಗೆಯಲು ಅನುಕೂಲ ಮಾಡಿಕೊಡುತ್ತೇವೆ ಎಂಬ ಹಾಗೂ ಪ್ರಥಮ PUC ಪರೀಕ್ಷೆ ಪ್ರಾರಂಭವಾಗಿದೆ ಎಂಬ ಜಾಹಿರಾತನ್ನು ನೀಡಲಾಗಿದೆ ಸರ್ಕಾರದಿಂದ ಕೊಟ್ಟಿರುವ OMR ಶೀಟಿನಲ್ಲಿ ಖಾಸಗಿ ಶಾಲೆಯ ಜಾಹಿರಾತು ಬೇಕೆ ಇದು ಕಾನೂನು ಬಾಹಿರವಾಗಿದೆ ಕೂಡ ಆದ್ದರಿಂದ ಹೊಸದಾಗಿ OMR ಶೀಟ್ ಅನ್ನು ಕೊಡಬೇಕು.
ಇದನ್ನೆಲ್ಲಾ ನೋಡಿದರೆ ಸರ್ಕಾರದಲ್ಲಿ ಪರೀಕ್ಷೆ ಮಾಡಲು ಹಣವಿಲ್ಲವೆಂದು ಎದ್ದು ಕಾಣುತ್ತಿದೆ ಆದ್ದರಿಂದ ಸರ್ಕಾರವು ಹೊಸ OMR ಶೀಟನಲ್ಲಿ ಸರ್ಕಾರಿ ಶಾಲೆ ಕಾಲೇಜುಗಳಿಗೆ ಸಂಬಂಧಿಸಿದ ಜಾಹಿರಾತುಗಳನ್ನು ನೀಡಿ ಕೊಡಬೇಕಾಗಿ ಮನವಿಯನ್ನು ನೀಡಲಾಯಿತು.ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಕೆ ದೇವೇಂದ್ರಪ್ಪ ರವರು, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ರಂಗನಾಥ್ ಅವರು, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ ಪ್ರವೀಣ್ ರವರು, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಗಿರೀಶ್ ಹಾಗೂ ಅನೇಕರಿದ್ದರು.
ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ
CCTV SALES & SERVICE
9880074684
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153