ಶಿವಮೊಗ್ಗ ನಗರದ, ಬಿ.ಹೆಚ್.ರಸ್ತೆ, ಪ್ರವಾಸಿ ಮಂದಿರ, ಮಲನಾಡ ಸಿರಿ, ಆಯನೂರು ಗೇಟ್, ದ್ವಾರಕ ಕನ್ವೆನ್ಸಲ್ ಹಾಲ್ ಎದುರು, ಭಾರ್ಗವಿ ಪೆಟ್ರೋಲ್ ಬಂಕ್, ಎಪಿಎಂಸಿ, ಆಲ್ಕೋಳ ಸರ್ಕಲ್, ಹೊಸಮನೆ ಇನ್ನೂ ಹಲವು ಕಡೆ, ಪಾಲಿಕೆ ಸಿಬ್ಬಂದಿಗಳಿಂದ ಪುಟ್ ಪಾತ್, ಹಾಗೂ ರಸ್ತೆ ಅಕ್ರಮಿಸಿಕೊಂಡವರ ತೆರವು ಕಾರ್ಯಾಚರಣೆ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ಮುಂದುವರಿಸಿದ್ದಾರೆ.
ಪಾಲಿಕೆ ಸಿಬ್ಬಂದಿಗಳು ತೆರವು ಮಾಡಿ ಹೋದ ನಂತರ ಪುನ ಸಂಜೆಯ ಮೇಲೆ ತಮ್ಮ ಸಾಮಾಗ್ರಿಯ ರಸ್ತೆಗೆ ಹರಡಿ ವ್ಯಾಪಾರ ಮಾಡತೊಡಗಿದರ ವೀಕ್ಷಣೆಗೆ ಸ್ವತ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ರವರು ರಾತ್ರಿಯ ವೇಳೆ ನಾಗರೀಕರಂತೆ ಬೈಕ್ ನಲ್ಲಿ ನಗರದ ಎಲ್ಲಾ ಕಡೆ ವೀಕ್ಷಿಸುತ್ತಾ ರಸ್ತೆಗೆ ಹರಡಿ ವ್ಯಾಪಾರ ಮಾಡುತ್ತಿರುವರನ್ನು ಕಂಡು ರಾತ್ರಿಯು ಪಾಲಿಕೆ ಸಿಬ್ಬಂದಿಗಳನ್ನು ಕರಸಿ ಅಂಗಡಿಯ ಮಾಲೀಕರ ಲೈಸೆನ್ಸ್ ರದ್ದು ಮಾಡಲು ಹಾಗೂ ಬೀದಿ ಬದಿ ವ್ಯಾಪಾರಗಳ ಸಾಮಾಗ್ರಿಯ ವಶಪಡಿಸಿಕೊಳ್ಳಲು ತಿಳಿಸಿದರು.
ರಾತ್ರಿಯ ವೇಳೆ ನಗರವನ್ನು ವೀಕ್ಷಿಸುತ್ತಾ ಆಲ್ಕೋಳ ಸರ್ಕಲ್ ಗೆ ಬೈಕ್ ನಲ್ಲಿ ಬಂದು ನಿಂತ್ತರು. ಬೀದಿ ಬದಿಯ ತಿಂಡಿ ತಿನಸು ವ್ಯಾಪಾರಿಯು ಸರ್ ಎನೂ ಬೇಕು ಸರ್ ಎಂದು ಕೇಳಿದರಂತೆ ಪುಟ್ ಪಾತ್ ಗೆ ಹರಡಿದ ಅಷ್ಟು ಸಾಮಗ್ರಿಯ ಬೇಕು ಎಂದಾಗ, ವ್ಯಾಪಾರಿ ಮಾಲೀಕರಿಗೆ ಕರೆದಾಗ ಮಾಲೀಕ ಬಂದು ನೋಡಿ ಗಾಬರಿಯಾದರು ಎದುರಿಗೆ ನಿಂತ್ತವರು, ಗ್ರಾಹಕವಲ್ಲ, ಅವರು ನಗರದ ಆಯುಕ್ತರು ಎಂದು ತಿಳಿಸಿದರು.
ವ್ಯಾಪಾರಿಗಳು ನಗರದ ಸ್ವಚ್ಛತೆ ಕಾಪಾಡ ಬೇಕು, ತ್ಯಾಜ್ಯಾವನ್ನು ಘಂಟೆಗಾಡಿಗೆ ಹಾಕಿ, ವ್ಯಾಪಾರದ ಸ್ಥಳ ಸದಾ ಸ್ವಚ್ಛತೆ ಇರಬೇಕು, ರಾತ್ರಿ ಹತ್ತರ ಒಳಗೆ ವ್ಯಾಪಾರ ವಹಿವಾಟು ಬಂದು ಮಾಡಬೇಕು, ಏಫ್ರಾನ್ ಧರಿಸಬೇಕು, ಬೀದಿ ಬದಿಯ ಗುರುತಿನ ಚೀಟಿ ಹಾಗೂ ಆಹಾರ ಸುರಕ್ಷತೆ ಪ್ರಮಾಣ ಪತ್ರ, ಅಧಿಕಾರಿಗಳಿಗೆ ಕಾಣುವಂತೆ ಇಡಬೇಕು ಕಾರ್ಡ್ ನಲ್ಲಿ ಇರುವ ವ್ಯಾಪಾರಿ ಮಾತ್ರ ಪಾಲಿಕೆ ನೀಡಿದ ಸ್ಥಳದಲ್ಲಿ ವ್ಯಾಪಾರ ಮಾಡಬೇಕು ಪುಟ್ ಪಾತ್, ಆಕ್ರಮಿಸಿಕೊಳ್ಳಬಾರದು ಎಂದು ಆಲ್ಲೋಳ ವೃತ್ತದಿಂದ ವಿಶಾಲ್ ಮಾರ್ಟ್, ಗೋಪಾಳ ವೃತ್ತದ ವ್ಯಾಪಾರಿಗಳಿಗೆ ಎಚ್ಚರಿಗೆ ನೀಡಿದರು. ಈ ವೇಳೆಯಲ್ಲಿ ಪಾಲಿಕೆ ಅಧಿಕಾರಿ ವರ್ಗದವರು ಹಾಗೂ ಬೀದಿಬದಿ ವ್ಯಾಪಾರಿಗಳು ಉಪಸ್ಥಿತರಿದ್ದರು.