ವಿದ್ಯಾರ್ಥಿಗಳು ಪುಸ್ತಕ ಓದಿನ ಮೂಲಕ ಜ್ಞಾನಾರ್ಜನೆ ಮಾಡಿಕೊಳ್ಳಬೇಕು ಹಾಗೂ ಅದನ್ನು ಮಸ್ತಕದಲ್ಲಿ ನೆನಪಿಟ್ಟುಕೊಳ್ಳಬೇಕು. ಆದರೆ ಇಂದು ಹೆಚ್ಚಿನವರು ಯಾವುದೇ ಸಾಮಾನ್ಯ ಜ್ಞಾನ ಪ್ರಶ್ನೆಗಳಿಗೂ ಗೂಗಲ್ ನ ಅವಲಂಬಿತರಾಗುತ್ತಿದ್ದಾರೆ. ಇದು ಒಳ್ಳೆಯದಲ್ಲ. ಸಾಮಾನ್ಯ ಜ್ಞಾನ ಜೀವನದ ಎಲ್ಲಾ ಹಂತಗಳಲ್ಲೂ ಉಪಯೋಗಕ್ಕೆ ಬರುತ್ತವೆ. ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳ ಜೊತೆಗೆ ಸಾಮಾನ್ಯ ಜ್ಞಾನ ಕ್ಕೂ ಹೆಚ್ಚು ಮಹತ್ವ ಕೊಡಬೇಕು ಎಂದು ವಿದ್ಯಾರ್ಥಿನಿ ಶಿವಪ್ರಿಯ ಹೇಳಿದರು.
ಅವರು ದುರ್ಗಿಗುಡಿಯ ಚೆನ್ನುಡಿ ಬಳಗ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನವೆಂಬರ್ ಮಾಸವಿಡಿ ನಡೆಸುವ ಕನ್ನಡ ನಾಡು ನುಡಿ ಪ್ರಶ್ನೋತ್ತರ ಕಾರ್ಯಕ್ರಮ ‘ ತಿಳಿ – ತಿಳಿಸಿ ‘ ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಮಕ್ಕಳ ದಿನಾಚರಣೆ ಪ್ರಯುಕ್ತ ಸಭಾ ಕಾರ್ಯಕ್ರಮ ಸೇರಿದಂತೆ ಸಂಪೂರ್ಣ ಕಾರ್ಯಕ್ರಮ ಮಕ್ಕಳೇ ನಿರ್ವಹಿಸಿ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು. ಸಭೆಯ ಅಧ್ಯಕ್ಷತೆಯನ್ನು 8 ನೇ ತರಗತಿ ವಿದ್ಯಾರ್ಥಿ ಯಶಸ್ ವಹಿಸಿದ್ದರು. ಕುಮಾರಿ ಮಮತಾ ಮತ್ತು ಪ್ರತಿಕ್ಷಾ ಪ್ರಾರ್ಥನೆ,ಸ್ಕಂದ ಪೂಜಾರಿ ಸ್ವಾಗತ, ಕುಮಾರಿ ರಕ್ಷಾ ವಂದನಾರ್ಪಣೆ ನಡೆಸಿಕೊಟ್ಟರೆ ಕುಮಾರಿ ಸುಷ್ಮ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
ಚೆನ್ನುಡಿ ಬಳಗದ ತ್ಯಾಗರಾಜ ಮಿತ್ಯಾಂತ, ಡಾ. ಬಾಲಕೃಷ್ಣ ಹೆಗಡೆ, ಮೆಡಿಕಲ್ ಜಗದೀಶ್ ಉಪಸ್ಥಿತರಿದ್ದರು.