2023 ರ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಶಿವಮೊಗ್ಗ ನಗರ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿಯಾಗಿ ಇಂದು ಕೆಪಿಸಿಸಿ ಕಚೇರಿ ಬೆಂಗಳೂರಿನಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯ ಸತತ ಮೂರು ಬಾರಿ ಸದಸ್ಯರಾಗಿ ಆಯ್ಕೆಯಾಗಿರುವ, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕರಾಗಿದ್ದಂತಹ ರಾಜಕೀಯ ಕುಟುಂಬದವರು ಆದಂತಹ ತರೀಕೆರೆ ಕ್ಷೇತ್ರದ ಮಾಜಿ ಶಾಸಕರಾದ ಹೆಚ್ ಎಂ ಮಲ್ಲಿಕಾರ್ಜುನಪ್ಪನವರ ಮೊಮ್ಮಗ, ಶಿವಮೊಗ್ಗ ನಗರದ ಮಾಜಿ ಶಾಸಕರಾದ ಹೆಚ್ ಎಂ ಚಂದ್ರಶೇಖರಪ್ಪ ಅವರ ಮಗನಾದ ಹೆಚ್ ಸಿ ಯೋಗೇಶ್ ರವರು ಅಪಾರ ಅಭಿಮಾನಿಗಳು ಕಾಂಗ್ರೆಸ್ ಪಕ್ಷದ ಮುಖಂಡರುಗಳು ಜೊತೆಯಾಗಿ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ನಗರ ಮಾಜಿ ಶಾಸಕರಾದ ಹೆಚ್ಎಂ ಚಂದ್ರಶೇಖರಪ್ಪನವರು, ಕೆಪಿಸಿಸಿ ಕಾರ್ಯದರ್ಶಿಗಳಾದ ಕೆ ದೇವೇಂದ್ರಪ್ಪನವರು, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ವಿಶ್ವನಾಥ್ ಕಾಶಿರವರು, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾಗರಾಜ್ ರವರು, ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ ಪಿ ಗಿರೀಶ್ ರವರು, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಎಂ ಪ್ರವೀಣ್ ರವರು, ಮಾಜಿ ನಗರಸಭೆ ಸದಸ್ಯರಾದ ಉಮೇಶ್ ರವರು, ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ರವರು, ಶಾಂತಿನಗರ ಕುಮಾರ್ ರವರು, ಶಾದ್ ನಗರ ಬಾಬಣ್ಣ ರವರು, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಶಿವುರವರು, ನೂರ್ ಅಹಮದ್ ರವರು, ರೈಸ್ ಮಿಲ್ ಶಿವಣ್ಣ ರವರು, ಅಬ್ದುಲ್ ಸಲಾಂ ರವರು, ಪಿ ಎಂ ಮಾಲತೇಶ್ ರವರು, ವಿನೋಬನಗರ ಶರತ್ ರವರು, ನೇತಾಜಿ ಇಕ್ಬಾಲ್ ರವರು, ವಾರ್ಡ್ ಅಧ್ಯಕ್ಷರಾದ ಮಹದೇವ್ ರವರು, ಮಂಜುರವರು, ಹಾಗೂ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಬಂದು ಮಿತ್ರರು ಉಪಸ್ಥಿತರಿದ್ದರು.