ಶಿವಮೊಗ್ಗ ನಗರದ ನೆಹರು ಕ್ರೀಡಾಂಗಣದಲ್ಲಿ ಪೃಥ್ವಿ ಪಾಂಡವಸ್ ಟೀಮ್ ವತಿಯಿಂದ ನಡೆದ ಫುಟ್ಬಾಲ್ ಪಂದ್ಯಾವಳಿಗೆ ಶಾಸಕ ಕೆಎಸ್ ಈಶ್ವರಪ್ಪ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಬಿಜೆಪಿ ಯೂಥ್ ಐಕಾನ್ ಕೆ ಈ ಕಾಂತೇಶ್ ಮತ್ತು ಪಾಲಿಕೆ ಸದಸ್ಯರಾದ ಹೆಚ್ ಸಿ ಯೋಗೇಶ್ ರವರು ಪಾಲ್ಕೊಂಡಿದ್ದರು. ನವಂಬರ್ 12 ಮತ್ತು 13 ರಂದು ಪೃಥ್ವಿ ಪಾಂಡವಾಸ್ ಟೀಮ್ ವತಿಯಿಂದ ಜಿಲ್ಲಾ ಮಟ್ಟದ ಹೊನಲು ಬೆಳಗಿನ ಫುಟ್ಬಾಲ್ ಪಂದ್ಯಾವಳಿಯನ್ನು ಏರ್ಪಡಿಸಿದ್ದರು. ಜಿಲ್ಲೆಯಿಂದ 20 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.
ಫೈನಲ್ ಪಂದ್ಯಾವಳಿಯಲ್ಲಿ ಪ್ರಮೋದ್ ಎಫ್ ಸಿ ತಂಡವು ಪ್ರಥಮ ಸ್ಥಾನ ಪಡೆದು 25000 ನಗದು ಮತ್ತು ಟ್ರೋಪಿಯನ್ನು ಪಡೆದಿದ್ದಾರೆ. ದ್ವಿತೀಯ ಸ್ಥಾನದಲ್ಲಿ ಎ ಅರ್ ಎಫ್ ಸಿ ತಂಡ ಪಡೆದು 15000 ನಗದು ಮತ್ತು ಟ್ರೋಪಿಯನ್ನು ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಮಹೇಶ್ , ಪ್ರಧಾನ ಕಾರ್ಯದರ್ಶಿಯಾದ ಮಂಜುನಾಥ್ , ಸಹಕರಿಸಿ ಆನಂದ್ , ಖಜಾಂಚಿ ಮಂಜುನಾಥ್ ಡಿ. ಜಿ ವಿಜಯಕುಮಾರ್ ಮತ್ತು ತಂಡದ ಸದಸ್ಯರುಗಳು ಉಪಸ್ಥಿತರಿದ್ದರು.