ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಬಹುತೇಕ ರಾಜಕಾಲುವೆಗಳಲ್ಲಿ ಹೂಳು ತುಂಬಿರುವುದರಿಂದ ಸದ್ಯದಲ್ಲಿಯೇ ಮಳೆಗಾಲ ಆರಂಭವಾಗಲಿದ್ದು ರಾಜಕಾಲುವೆಗಳು ತುಂಬಿ ಬಡಾವಣೆಗಳಲ್ಲಿರುವ ಮನೆಗಳ ಒಳಗೆ ಕೊಳಚೆ ನೀರು ನುಗ್ಗಿ ಹಾನಿ ಉಂಟು ಮಾಡುವ ಸಾಧ್ಯತೆಗಳು ಹೆಚ್ಚಾಗಿದ್ದು ಹಾಗೂ ಮಾರಣಾಂತಿಕ ಸಾಂಕ್ರಾಮಿಕ ರೋಗ ರುಜಿನಿಗಳು ಹರಡುವುದರಿಂದ ಮಾನ್ಯ ಆಯುಕ್ತರು ರಾಜಕಾಲುವೆಗಳಲ್ಲಿರುವ ಹೂಳು ತೆಗೆಯಲು ತತ್ ಕ್ಷಣ ನಿರ್ದಿಷ್ಟ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯವನ್ನು ಅಣ್ಣಾ ಹಜಾರೆ ಸಮಿತಿ ವತಿಯಿಂದ ಹೋರಾಟ ಮಾಡಿದ್ದಾರೆ .
ಭಾರತಿ ಕಾಲೋನಿಯಲ್ಲಿ ಹಾದುಹೋಗಿರುವ ರಾಜಕಾಲುವೆಯಲ್ಲಿ ಸಂಪೂರ್ಣ ಹೂಳು ತುಂಬಿದ್ದು ಸದರಿ ವಿಚಾರಕ್ಕೆ ಸಂಬಂಧಪಟ್ಟಂತೆ 2 ತಿಂಗಳ ಹಿಂದೆ ಉಪ ಮಹಾಪೌರರ ಗಮನಕ್ಕೆ ತಂದಾಗ ಪಾಲಿಕೆ ಎಂಜಿನಿಯರ್ ಗಳಾದ ಲೋಕೇಶ್ ಮತ್ತು ತ್ರಿವೇಣಿ ಅವರು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಸಂಪೂರ್ಣವಾಗಿ ಹೂಳನ್ನು ತೆಗೆದುಕೊಡುವುದಾಗಿ ಮೌಖಿಕವಾಗಿ ಭರವಸೆ ಕೊಟ್ಟಿದ್ದರೂ ಸದರಿ ವಿಚಾರಕ್ಕೆ ಸಂಬಂಧಪಟ್ಟಂತೆ ರಾಜಕಾಲುವೆ ಹೂಳು ತೆಗೆಯಲು ಕಾಮಗಾರಿ ಆರಂಭಿಸಿದ್ದು ಕಾಲುವೆ ಮೇಲೆ ಇರುವಂತಹ ಆರ್ ಸಿಸಿ ಸ್ಲ್ಯಾಬ್ ಗಳನ್ನು 2ತಿಂಗಳು ಹಿಂದೆ ತೆರೆದಿಟ್ಟಿರುತ್ತಾರೆ ಮತ್ತು ಕೇವಲ 1ಅಡಿ ಮಾತ್ರ ಕಾಲುವೆಯ ಹೂಳನ್ನು ಮಾತ್ರ ತೆಗೆದಿರುತ್ತಾರೆ ಉಳಿದಂತೆ ಕೆಳಭಾಗದಲ್ಲಿ ಮೂರರಿಂದ 4ಅಡಿ ಹೂಳು ಹಾಗೆಯೇ ಉಳಿದಿರುತ್ತದೆ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಸ್ಥಳಕ್ಕೆ ಭೇಟಿ ನೀಡಿದ ಪಾಲಿಕೆಯ ಕಾರ್ಯಪಾಲಕ ಎಂಜಿನಿಯರ್ ರಾದ ಶ್ರೀ ಹರೀಶ್ ರವರಲ್ಲಿ ಮೌಖಿಕವಾಗಿ ಸಮಿತಿಯ ಸದಸ್ಯರು ವಿಚಾರಿಸಿದಾಗ ಅವರು ನಾಮಿನಲ್ ಆಗಿ ಹೂಳನ್ನು ತೆಗೆಯಲು ಆದೇಶಿಸಿ ರುತ್ತೇವೆ ಎಂದು ಮೌಖಿಕವಾಗಿ ತಿಳಿಸಿದರು .
ಈ ಸಂದರ್ಭದಲ್ಲಿ ಅಶೋಕ್ ಕುಮಾರ್ ,ಸುಬ್ರಹ್ಮಣ್ಯ ,ಎಲ್ ಎನ್ ನಾಯ್ಕ , ಮುಂತಾದವರು ಉಪಸ್ಥಿತರಿದ್ದರು .

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153