ಕೋವಿಡ್‌ ಸಾಂಕ್ರಾಮಿಕದ ವಿಷಮ ಪರಿಸ್ಥಿತಿಯಲ್ಲಿ ಗಾಯದ ಮೇಲೆ ಬರೆ ಎಳೆದಂತೆ 2021- 2022 ನೆ ಸಾಲಿನಿಂದ ಅನ್ವಯವಾಗುವಂತೆ ಕಾನೂನು ತಿದ್ದುಪಡಿ ಮೂಲಕ ಕರ್ನಾಟಕ ರಾಜ್ಯ ಸರ್ಕಾರವು ಅವೈಜ್ಞಾನಿಕವಾಗಿ ಹಲವು ಪಟ್ಟು ಆಸ್ತಿ ತೆರಿಗೆ ಹೆಚ್ಚಿಸಿರುವುದನ್ನು ತೀರ್ವವಾಗಿ ಖಂಡಿಸಿದ್ದಾರೆ ಎಸ್ .ಆರ್. ದರ ಆಧರಿಸಿ ವಾಸದ ಮನೆಗಳು ,ವಾಣಿಜ್ಯ ಕಟ್ಟಡಗಳು, ಕೈಗಾರಿಕಾ ಕಟ್ಟಡಗಳು ಮತ್ತು ಖಾಲಿ ನಿವೇಶನಗಳಿಗೆ ಈ ಹಿಂದಿನ ವರ್ಷದ ತೆರಿಗೆಯ ಮೇಲೆ ಹಲವು ಪಟ್ಟು ಹೆಚ್ಚು ತೆರಿಗೆ ಏರಿಸಿರುವುದು ತೆರಿಗೆದಾರರ ಮೇಲಿನ ಗದಾ ಪ್ರಹಾರವಾಗಿ ಸಂಕಷ್ಟದ ಕಾರಣಕ್ಕಾಗಿಯೇ ಹಲವು ರಾಜ್ಯಗಳಾದ ಆಂಧ್ರಪ್ರದೇಶ ತೆಲಂಗಾಣ ತಮಿಳುನಾಡು ಗುಜರಾತ್ ಹಾಗೂ ಇತರ ರಾಜ್ಯಗಳಲ್ಲಿ ಹಾಲಿ ತೆರಿಗೆ ಮೇಲೆ ಶೇಕಡಾ ಐವತ್ತು ರಿಯಾಯಿತಿ ನೀಡಿರುವುದು ನಮ್ಮ ರಾಜರು ತೆರಿಗೆದಾರರಿಗೆ ಏಕಿಲ್ಲ ? ಎಂದು ಪೋಸ್ಟ್ ಕಾರ್ಡ್ ಚಳವಳಿ ನಡೆಸಿದ್ದಾರೆ .
ಹಾಗೂ ಈ ಚಳುವಳಿಯಲ್ಲಿ ಬೇಡಿಕೆಗಳು
೧)ಎಸ್ .ಆರ್ .ದರ ಆಧಾರಿತ ಆಸ್ತಿ ತೆರಿಗೆ ಕೈಬಿಡಿ
೨)ಸಂಕಷ್ಟದ ಈ ದಿನಗಳಲ್ಲಿ ತೆರಿಗೆ ಏರಿಕೆ ಬೇಡ
೩)ಆಸ್ತಿ ತೆರಿಗೆ ಕಾನೂನಿಗೆ ತಿದ್ದುಪಡಿ ಮಸೂದೆ ಹಿಂದಕ್ಕೆ ಪಡೆಯಿರಿ
೪)ಪ್ರಸ್ತುತ ವರ್ಷಕ್ಕೆ ಶೇಕಡ 50 ರ‍ ತೆರಿಗೆ ರಿಯಾಯಿತಿ ಘೋಷಣೆ ಮಾಡಿ
೫)ಹಿಂದಿನ ಸಾಲಿನ ಶೇಕಡಾ 15 ರ ತೆರಿಗೆ ಹೆಚ್ಚಳ ರದ್ದು ಮಾಡಿ
ಇದು ಶಿವಮೊಗ್ಗದ ಸಮಸ್ತ ತೆರಿಗೆದಾರರ ಒಕ್ಕೊರಲಿನ ಬೇಡಿಕೆ ಎಂದು ಆಸ್ತಿ ತೆರಿಗೆ ಅವೈಜ್ಞಾನಿಕ ಏರಿಕೆ ವಿರೋಧಿಸಿ ಪೋಸ್ಟ್ ಕಾರ್ಡ್ ಚಳವಳಿ ನಡೆಸಿದ್ದಾರೆ .

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153