ಶಿವಮೊಗ್ಗ : ನಗರದ ಅಶೋಕ ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ವತಿಯಿಂದ ೬೭ನೇ ಕನ್ನಡ ರಾಜ್ಯೋತ್ಸವನ್ನು ವಿಜೃಂಭಣೆಯಿಂದ ಡಿ.೩ಕ್ಕೆ ಆಚರಿಸಲಾಗುವುದು ಎಂದು ಕರವೇ ಯುವಸೇನೆ ಜಿಲ್ಲಾಧ್ಯಕ್ಷರಾದ ಕಿರಿಣ್‌ಕುಮಾರ್ ತಿಳಿಸಿದರು.

ಅವರು ಮಾತನಾಡುತ್ತ ಅಂದು ಬೆಳಿಗ್ಗೆ ೮.೩೦ಕ್ಕೆ ಧ್ವಜಾರೋಹಣ ನೇರವೇರಿಲಿದೆ. ಸಂಜೆ ೬.೩೦ ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗಣ್ಯರಿಗೆ ಗೌರವಿಸಿ ಸನ್ಮಾನಿಸಲಾಗುವುದು ಎಂದರು.
ಮುಖ್ಯ ಅತಿಥಿಗಳಾಗಿ ಜೆ.ಡಿ.ಎಸ್.ಪ್ರಧಾನ ಕಾರ್ಯದರ್ಶಿಗಳಾದ ಶ್ರೀಕಾಂತ ಎಂ. ಶಿವಮೊಗ್ಗ ಸಂಸದರಾದ ಬಿ.ವೈ.ರಾಘವೇಂದ್ರ, ಮಾಜಿ ಶಾಸಕರಾದ ಕೆ.ಬಿ.ಪ್ರಸನ್ನಕುಮಾರ್, ಜನಪರ ಜೀವಪರ ಡಾ.ಧನಂಜಯ ಸರ್ಜಿ, ಪಾಲಿಕೆ ಸದಸ್ಯರಾದ ಹೆಚ್.ಸಿ.ಯೋಗೇಶ್, ಸಂಪಾದಕರ ಸಂಘದ ಜಿಲ್ಲಾಧ್ಯಕ್ಷರಾದ ಜಿ.ಪದ್ಮನಾಭ, ಸಾಹಿತಿ-ಪತ್ರಕರ್ತರಾದ ಗಾ.ರಾ.ಶ್ರೀನಿವಾಸ್, ಕಾನೂನು ಸಲಹೆಗಾರರಾದ ಅನಿಕುಮಾರ್ ಟಿ.ಕೆ, ಅಮ್ ಆದ್ಮಿ ಪಾರ್ಟಿ ಮುಖಂಡರು ಶ್ರೀಮತಿ ಬಿ.ನೇತ್ರವತಿ, ಭಾಜಪ ಅಲ್ಪಸಂಖ್ಯಾತರ ಮೋರ್ಚಾ ಜಿಲ್ಲಾಧ್ಯಕ್ಷರಾದ ಮೊಹಮ್ಮದ್ ಶಫಿವುಲ್ಲಾ, ಪಾಲಿಕೆ ಸದಸ್ಯರಾದ ಶ್ರೀಮತಿ ಮಂಜುಳ ಶಿವಣ್ಣ, ಕರವೇ ಯುವಸೇನೆಯ ಹೊಳೆಹೊನ್ನೂರು ಅಧ್ಯಕ್ಷರಾದ ಸಿ.ಹನುಮತು, ಭಾಗವಹಿಸುವವರು.

ಸೇವಾರತ್ನ ಪ್ರಶಸ್ತಿಯನ್ನು ಜೋಗಿ ಜನಪದ ಕ್ಷೇತ್ರ ಡಾ.ನಾಗರಾಜ್ ತೋಂಬ್ರಿ, ಸಕ್ಷಮ ಸಂಸ್ಥೆ ಸಿ.ಆರ್.ಶಿವಕುಮಾರ್, ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಮಾಲತೇಶ್, ಸ್ನೇಹಾಶ್ರಯ ಶ್ರೀಮತಿ ಮಾಲತಿ ಪಿ. ಸಂಪಾದಕರಾದ ಹೊನ್ನಾಳಿ ಚಂದ್ರಶೇಖರ್, ದೇಹದಾಡ್ಯಪಟು ರಾಜೇಂದ್ರ, ಸಾಮಾಜಿಕ ಜಾಲತಾಣ ಮಾಧ್ಯಮದ ಪ್ರಜಾ ಶಕ್ತಿ ವೆಬ್ ನ್ಯೂಸ್ ವರದಿಗಾರ ಮಂಜುನಾಥ್ ಶೆಟ್ಟಿ , ಚೈತ್ರಾ ಸಜ್ಜನ್, ಕರಾಟೆ ಕ್ರೀಡಾಪಟು ಕುಮಾರಿ ಮಾನ್ಯ, ಲಿಶಾನ್ ತೇಜಸ್ ಗೌಡ.ಸಿ.ರವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಗುವುದು ಎಂದರು.
ಈ ಕಾರ್ಯಕ್ರಮದಲ್ಲಿ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿ ಕಾರಣಕರ್ತರಾಗಬೇಕು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.