ಶಿವಮೊಗ್ಗದ ಬಸವ ಕೇಂದ್ರ ಶ್ರೀ ಬಸವ ಮರಳಸಿದ್ದ ಗುರೂಜಿ ರವರ ಹುಟ್ಟು ಹಬ್ಬದ ಪ್ರಯುಕ್ತ ಬಿಜೆಪಿ ಯುವ ಮುಖಂಡರಾದ ಕೆ ಇ ಕಾಂತೇಶ್ ರವರು ಗುರೂಜಿಯವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆ ಇ ಕಾಂತೇಶ್ ರವರು ಗುರೂಜಿ ರವರು ಸಮಾಜಮುಖಿ ಕೆಲಸಗಳಲ್ಲಿ ಸ್ವಾಮೀಜಿಯವರು ಮುಂಚೂಣಿ ಸ್ಥಾನದಲ್ಲಿ ನಿಲ್ಲುತ್ತಾರೆ. ಜಾತಿ ಬೇದ ಮರೆತು ಸಮಾಜದಲ್ಲಿನ ಎಲ್ಲರೂ ಏಳಿಗೆಗಾಗಿ ಒಳ್ಳೆಯ ಕೆಲಸಗಳನ್ನು ಹಿಂದಿನಿಂದಲೂ ಮಾಡುತ್ತಾ ಬಂದಿದ್ದಾರೆ ಮುಂದೆಯೂ ಸಹ ಹೀಗೆ ಅವರ ಸಮಾಜಮುಖಿ ಕೆಲಸಗಳು ಮುಂದುವರೆಯಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ವಿಶ್ವಾಸ್ ಮುಂತಾದವರು ಉಪಸ್ಥಿತರಿದ್ದರು.