ಬಂಟರ ನ್ಯೂಸ್…
ಬಂಟರ ಸಂಘ ಬೆಂಗಳೂರು ವತಿಯಿಂದ ಐತಿಹಾಸಿಕ ವಿವಾಹ ವೇದಿಕೆ ಕಂಕಣ ಭಾಗ್ಯ ಯೋಜನೆ ಜಾರಿಗೆ ತಂದಿದ್ದೇವೆ ಎಂದು ಅಧ್ಯಕ್ಷರಾದ ಎಂ ಮುರುಳಿಧರ್ ಹೆಗಡೆ ತಿಳಿಸಿದ್ದಾರೆ.
ನಮ್ಮ ಬಂಟ ಸಮಾಜದ ಬಂಟರ ಸಂಘಗಳಿಗೆ ಬೆಂಗಳೂರು ಬಂಟರ ಸಂಘ ಈ ಮೂಲಕ ತಿಳಿಯಪಡಿಸುವುದೇನೆಂದರೆ, ನಮ್ಮ ಸಮಾಜದ ಬಡಕುಟುಂಬಗಳ ವಧು-ವರರಿಗೆ ಉಚಿತ ಕಂಕಣ ಭಾಗ್ಯ (ಸಾಮೂಹಿಕ ವಿವಾಹ) ಯೋಜನೆಯನ್ನು ಬೆಂಗಳೂರು ಬಂಟರ ಸಂಘದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸೌಕರ್ಯದ ಸದುಪಯೋಗ ಪಡೆಯಲು ಇಚ್ಚಿಸುವವರು ತಮ್ಮ ಹೆಸರುಗಳನ್ನು ಕೂಡಲೇ ಬೆಂಗಳೂರು ಬಂಟರ ಸಂಘದಲ್ಲಿ ನೋಂದಾಯಿಸಬೇಕಾಗಿ ವಿನಂತಿಸಿಕೊಂಡಿದ್ದಾರೆ.
ವಧು ವರರಿಗೆ ಮಾಹಿತಿ…
ಈ ಮದುವೆಗೆ ನಮ್ಮ ಸಂಘದ ಕಡೆಯಿಂದ ಒಂದು ವಧು-ವರರ ಜೋಡಿಗೆ 8+8 (16) ಜನರಿಗೆ ಬೆಂಗಳೂರಿಗೆ ಬಂದು ಹೋಗಲು ಉಚಿತ ಸಾರಿಗೆ ವ್ಯವಸ್ಥೆಯನ್ನು ಒದಗಿಸಲಾಗುವುದು. ವಧುವಿಗೆ ಕರಿಮಣಿ, ಸೀರೆ, ವಧುವಿನ ಅಲಂಕಾರ ಮತ್ತು ವರನಿಗೆ ಮದುವೆಯ ಉಡುಗೆ ಕೊಡಲಾಗುವುದು. ವಧು-ವರರಿಗೆ ಮತ್ತು ಅವರ ಸಂಬಂಧಿಕರಿಗೆ ಊಟ, ಉಳಿದುಕೊಳ್ಳಲು ವ್ಯವಸ್ಥೆಯನ್ನು ಮಾಡಲಾಗುವುದು. ಪೂಜೆ, ಮಂಟಪ, ಛತ್ರ , ಹೂವಿನ ಅಲಂಕಾರ, ವಾದ್ಯ ಮತ್ತು ಮದುವೆಗೆ ಬೇಕಾಗುವ ಎಲ್ಲಾ ಸಾಮಗ್ರಿಗಳನ್ನು ಉಚಿತವಾಗಿ ಒದಗಿಸಲಾಗುವುದು. ಬಂಟರ ಪದ್ಧತಿಯಂತೆ ಅದ್ದೂರಿಯಾಗಿ ಬೆಂಗಳೂರು ಬಂಟರ ಸಂಘದಲ್ಲಿ ವಿವಾಹ ವೇದಿಕೆಯ ವತಿಯಿಂದ ಮದುವೆ ಮಾಡಿಕೊಡಲಾಗುವುದು.
ನೋಂದಣಿಗಾಗಿ ಈ ನಂಬರ್ ಗಳನ್ನು ಸಂಪರ್ಕಿಸಿ. (9901885998/9741910925) ಆನಂದರಾಮ ಶೆಟ್ಟಿ ಬಿ ಗೌರವ ಕಾರ್ಯದರ್ಶಿ. ಎಂ ಮುರಲೀಧರ ಹೆಗ್ಡೆ ಅಧ್ಯಕ್ಷರು. ಸುರೇಂದ್ರ ಶೆಟ್ಟಿ ಎ ಸಂಚಾಲಕರು, ವಿವಾಹ ವೇದಿಕೆ. 9741910925 ಶೋಭ ಶೇಕ ಚೇರ್ ಪರ್ಸನ್, ವಿವಾಹ ವೇದಿಕೆ. 9901885998. ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ವಿವಾಹ ವೇದಿಕೆ ಸಮಿತಿ ಸದಸ್ಯರು.