2021-2022 ರ ಸಾಲಿಗೆ ರಿವರ್ ಸೈಡ್ ಕ್ಲಬ್ಬಿನ ನೂತನ ಅಧ್ಯಕ್ಷರಾಗಿ ರೊ, ಎಸ್ ,ಪಿ ಶಂಕರ್ , ಕಾರ್ಯದರ್ಶಿಯಾಗಿ ರೊ, ಎಂ ಆರ್ ಬಸವರಾಜ್, ಹಾಗೂ ಜೋನ್ 10 ರ ಸಹಾಯಕ ಗವರ್ನರ್ ಆಗಿ ರೊ ,ಎಂ, ಪಿ ಆನಂದಮೂರ್ತಿ ಮತ್ತು ಜೋನಲ್ ಲೆಫ್ಟಿನೆಂಟ್ ಆಗಿ ರೊ, ಕೆ ,ಪಿ ಶೆಟ್ಟಿ ಆಯ್ಕೆಯಾಗಿದ್ದಾರೆ .
2002 – 03 ರಲ್ಲಿ ಪ್ರಾರಂಭಗೊಂಡ ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್ ಹಲವು ಹತ್ತು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿ ರೋಟರಿ ಜಿಲ್ಲೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ ಮುನ್ನುಗ್ಗುತ್ತಿದೆ . ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನವಲೆ ಈ ಶಾಲೆಯನ್ನು ದತ್ತು ತೆಗೆದುಕೊಂಡಿದ್ದು ಶಾಲೆಯ ಸರ್ವತೋಮುಖ ಅಭಿವೃದ್ದಿಯಲ್ಲಿ ಭಾಗೀದಾರರಾಗಿದ್ದಾರೆ .
2019-20 ರ ಸಾಲಿನಲ್ಲಿ ಈ ಶಾಲೆಗೆ ವಾಶ್ ಬೆಸಿನ್ ನೀಡಿದ್ದು ಬಿಸಿಲು ಮಳೆಯಿಂದ ರಕ್ಷಣೆಗೊಳಪಟ್ಟ ಸ್ವಚ್ಚತೆಯಿಂದ ಒಳಪಟ್ಟ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದ್ದಾರೆ.
2020-21 ರ ಸಾಲಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಬೈರನಕೊಪ್ಪ ಶಿವಮೊಗ್ಗ ತಾಲ್ಲೂಕು ಈ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪೀಠೋಪಕರಣ ಹಾಗೂ ಆಟಿಕೆಗಳನ್ನು 5ಲಕ್ಷ ರೂ ವೆಚ್ಚದಲ್ಲಿ ನೀಡಿದ್ದಾರೆ .
ಪ್ರತಿವರ್ಷ ವಲಯ ಮಟ್ಟದಲ್ಲಿ ಸಾಂಸ್ಕೃತಿಕ ಹಾಗೂ ಆಟೋಟ ಸ್ಪರ್ಧೆಗಳಲ್ಲಿ ಚಾಂಪಿಯನ್ ಆಗಿ ಮೂಡಿ ಬಂದಿರುವುದು ನಮ್ಮ ಕ್ಲಬ್ಬಿನ ಪಾಲಿಗೆ ಹೆಮ್ಮೆಯ ಸಂಗತಿ ಎಂದು ಹೇಳಿದ್ದಾರೆ
ಈ ವರ್ಷದಿಂದ ಆದ್ಯತಾ ಕ್ಷೇತ್ರ Environment protection ಇದನ್ನು ನಮ್ಮ ಜಿಲ್ಲಾ ಯೋಜನೆಯಾಗಿ ತೆಗೆದುಕೊಂಡಿದ್ದಾರೆ ಗಿಡಮರ ಬೆಳೆಸುವುದು , composting, ತ್ಯಾಜ್ಯ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಗೆ ಕೆರೆಗಳ ಅಭಿವೃದ್ಧಿ ಇವೇ ಮುಂತಾದ ಯೋಜನೆಗಳನ್ನು ಒಳಗೊಂಡಿದೆ ಸಾಕ್ಷರತಾ ವಿಭಾಗದಲ್ಲಿ ಎಸ್ ಎಸ್ ಎಲ್ ಸಿ ಮಕ್ಕಳಿಗೆ ವಿದ್ಯಾಸೇತು ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಹಾಗೂ ಕೋವಿಡ್‌ 19 ಸಾಂಕ್ರಾಮಿಕ ರೋಗದ ತಡೆಯೋಕೆ ಬಗ್ಗೆ ಕಾರ್ಯಾಗಾರ ಗಳು ಹೀಗೆ ಇನ್ನಿತರ ಯೋಜನೆಗಳನ್ನು ಜಿಲ್ಲಾ ವತಿಯಿಂದ ರೂಪಿಸಲಾಗಿದೆ ಎಂದು ವ್ಯಕ್ತಪಡಿಸಿದ್ದಾರೆ.
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153.