ಅದೊಂದು ದೈತ್ಯ ಸೇವಾ ಶಕ್ತಿ, ದೇಹ ಎಷ್ಟೇ ದಣಿದರೂ, ಮನಸ್ಸು ಮತ್ತಷ್ಟು ಉಲ್ಲಸಿತವಾಗಿ ಬಡ ಬಗ್ಗರ, ಹಿಂದುಳಿದವರ, ನೊಂದವರ ಹಾಡಿಗಳ ಕಡೆಗೆ ಹೆಜ್ಜೆ ಹಾಕುತ್ತಾ ಮುನ್ನಡೆಯುತ್ತಿರುತ್ತಾರೆ. ಅಧಿಕಾರ ಇರಲಿ, ಇಲ್ಲದಿರಲಿ ಧ್ವನಿ ಇಲ್ಲದವರ ಪಾಲಿನ ಧ್ವನಿಯಾಗಿರುವ ನಮ್ಮೆಲ್ಲರ ನಾಯಕರಾದ ಕಾಗೋಡು ತಿಮ್ಮಪ್ಪನವರು ಇಂದು 09/07/2021 ರ ಶುಕ್ರವಾರ ಕಾರ್ಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್ ನಿಂದ ಮೃತಪಟ್ಟವರ ಅವಲಂಬಿತ ಕುಟುಂಬಗಳನ್ನು ಬೇಟಿಯಾಗಿ ಸಾಂತ್ವನ ತಿಳಿಸಿದರು. ಕಾಗೋಡು ತಿಮ್ಮಪ್ಪನವರನ್ನು ಮನೆಬಾಗಿಲಿನಲ್ಲಿ ಕಂಡ ಸಂತ್ರಸ್ಥರ ಕಣ್ಣಾಲಿಗಳು ತೇವಗೊಂಡವು. ಸ್ವಾಮಿ ಇಲ್ಲಿಯವರೆಗೆ ನಮ್ಮನ್ನು ಯಾರೂ ಕಷ್ಟ ಸುಖ ವಿಚಾರಿಸಿರಲಿಲ್ಲ. ನೀವು ಮನೆ ಬಾಗಿಲಿಗೆ ಬಂದು ಕಷ್ಟ ಸುಖ ವಿಚಾರಿಸುತ್ತಿದ್ದೀರಿ, ದೇವರು ನಿಮ್ಮನ್ನು ಚೆನ್ನಾಗಿಡಲಿ, ನೀವು ನೂರಾರು ಕಾಲ ಬಾಳಬೇಕು. ಬಡಬಗ್ಗರ, ನೊಂದವರ ಧ್ವನಿಯಾಗಿ ಉಳಿಯಬೇಕು ಎಂದು ಆಶೀರ್ವದಿಸಿದರು. ಈ ಸಮಯದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಿರಿಯ ಸಮಾಜವಾದಿಯಾಗಿರುವ ಬಿ.ಆರ್. ಜಯಂತ್, ಕೆಪಿಸಿಸಿ ರಾಜ್ಯ ಕಾರ್ಯದರ್ಶಿಗಳಾದ
ಡಾ||ರಾಜನಂದಿನಿಕಾಗೋಡು
ರವರು ಜೊತೆಗೂಡಿದರು. ಜೋಗ ಕಾರ್ಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅಧ್ಯಕ್ಷ ವಿ. ಸಂತೋಷ್ ಕುಮಾರ್, ಪಟ್ಟಣ ಪಂಚಾಯಿತಿ ಸದಸ್ಯ ಎಂ. ರಾಜೂ, ಪ್ರಮುಖರಾದ, ಬಿ. ಉಮೇಶ್, ಹೆಚ್.ಎಸ್. ಸಾಧಿಖ್, ಜಯಮ್ಮ, ಎಸ್.ಎಂ. ಇಲಿಯಾಸ್, ಎಲ್ಲೋರಿ, ಸಚಿನ್ , ಭುಜಬಲಿ ಜೈನ್, ರೋಮನ್, ಅಂತೋನಿ, ರಾಜೂ ಶೆಟ್ಟಿ, ರಾಧಾಕೃಷ್ಣ, ಮುರುಗನ್, ಗೋವಿಂದ ಶೆಟ್ಟಿ, ಗಿರಿಜಾ, ಮಂಜುಳಾ, ಪಾರ್ವತಿ, ಮುನ್ನಿ, ಬಂಗಾರಿ, ಮಂಜನಾಯ್ಕ ಜಾಡಗಲ್ ಸೇರಿದಂತೆ ಅನೇಕ ಮುಖಂಡರು ಉಪಸ್ತಿತರಿದ್ದರು.
ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153