ಕೊಡುಗೈ ದಾನಿ, ಸಮಾಜ ಸೇವಕ,ಎಂ. ಆರ್.ಜಿ ಗ್ರೂಪ್ ಸಂಸ್ಥಾಪಕರಾದ ಉದ್ಯಮಿ ಕೆ. ಪ್ರಕಾಶ್ ಶೆಟ್ಟಿ ಅವರ ಹುಟ್ಟುಹಬ್ಬದ ಪ್ರಯುಕ್ತ ದಿನಾಂಕ 25/12/2022 ದಿನದಂದು ಮಂಗಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ನಡೆಯುವ “ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಯೋಜನೆ ” ಕಾರ್ಯಕ್ರಮದ ಫಲಾನುಭವಿಗಳ ಆಯ್ಕೆಗಾಗಿ ರಾಜ್ಯಾದ್ಯಂತ ಆರ್ಥಿಕವಾಗಿ ಹಿಂದುಳಿದವರ ಮನೆಗಳಿಗೆ ಭೇಟಿ ಕಾರ್ಯಕ್ರಮ ನಡೆಯಿತು.
ಹಾಗೆಯೇ ಸಾಗರ ಬಂಟರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರಿಂದ ಆರ್ಥಿಕ ಹಿಂದುಳಿದ ಸಾಗರ ತಾಲ್ಲೂಕಿನ ಬಂಟರ ಮನೆಗಳಿಗೆ ಭೇಟಿ ಕಾರ್ಯಕ್ರಮ ನಡೆಯಿತು.ಈ ಸಂಧರ್ಭದಲ್ಲಿ ತಾಲ್ಲೂಕಿನಾದ್ಯಂತ 10 ಬಂಟರ ಮನೆಗಳನ್ನು ಆಯ್ಕೆ ಮಾಡಿದರು.
ಸಾಗರ ಬಂಟರ ಸಂಘದ ಸದಸ್ಯರು ಹುಲಿದೇವರಬನ, ಕಲ್ಲುಕೊಪ್ಪ, ಮುರುಗಾಮಠ, ಬೀಳಗೋಡಿ, ಹೆಬೈಲು,ಬಾಳೆಕೊಪ್ಪ,ಮಾಲ್ವೆ, ಗಡಿಕಟ್ಟೆ ಹಾಗೂ ಸಾಗರ ನಗರ ಭಾಗದಲ್ಲಿ ಸಂಚಾರ ಮಾಡಿ ಆರ್ಥಿಕವಾಗಿ ಹಿಂದುಳಿದ ಬಂಟರ ಆರ್ಥಿಕ ಕುಂದು ಕೊರತೆಗಳನ್ನು ಆಲಿಸಿದರು.
ಸಾಗರ ಬಂಟರ ಸಂಘದ ಅಧ್ಯಕ್ಷರಾದ ಸುಧೀರ್ ಕುಮಾರ್ ಶೆಟ್ಟಿ ಮಾತನಾಡಿ
ಕೆ. ಪ್ರಕಾಶ್ ಶೆಟ್ಟಿ ಅವರ ಹುಟ್ಟುಹಬ್ಬದಂದು ಸತತವಾಗಿ ನಾಲ್ಕು ವರ್ಷಗಳಿಂದ ಸುಮಾರು ಎರಡು ಕೋಟಿಗೂ ಹೆಚ್ಚು ಹಣವನ್ನು ಸಮಾಜದ ಉನ್ನತಿಗಾಗಿ ದಾನವಾಗಿ ನೀಡುತ್ತಿರುವ ಕೆ.ಪ್ರಕಾಶ್ ಶೆಟ್ಟಿ ಅವರ ಹೃದಯವಂತಿಕೆಯನ್ನು ಕೊಂಡಾಡಿದರು.
ಕೆ. ಪ್ರಕಾಶ್ ಶೆಟ್ಟಿ ಅವರು ಮಲೆನಾಡ ಭಾಗದ ಬಂಟರ ಆರ್ಥಿಕ ಸಬಲಿಕರಣಕ್ಕಾಗಿ ಬಂಟರ ಸಂಘಗಳು ನಿರ್ಮಾಣ ಮಾಡುತ್ತಿರುವ ಸಮುದಾಯಭವನಗಳ ನಿರ್ಮಾಣಕ್ಕೆ ಕೇವಲ ಒಂದು ತಿಂಗಳಲ್ಲಿ ಒಂದು ಕೋಟಿ ರೂಪಾಯಿಗಳನ್ನು ದಾನವಾಗಿ ನೀಡಿರುತ್ತಾರೆ ಎಂದರು.
ಸಾಗರ ಬಂಟರ ಸಂಘಕ್ಕೆ 25ಲಕ್ಷ, ಶಿವಮೊಗ್ಗ ಬಂಟರ ಸಂಘಕ್ಕೆ 50 ಲಕ್ಷ ಹಾಗೂ ಕೊಪ್ಪ ಬಂಟರ ಸಂಘಕ್ಕೆ 25 ಲಕ್ಷ ರೂಪಾಯಿಯನ್ನು ನೀಡಿರುವುದು ಅವರ ಹೃದಯವಂತಿಕೆಗೆ ಸಾಕ್ಷಿ ಎಂದರು ಹಾಗೂ ಅವರನ್ನು ಹೃದಯಪೂರ್ವಕವಾಗಿ ಅಭಿನಂದಿಸಿದರು.
ಈ ಸಂಧರ್ಭದಲ್ಲಿ ಉಪಾಧ್ಯಕ್ಷ ರಘುಪತಿ ಶೆಟ್ಟಿ, ಕಾರ್ಯದರ್ಶಿ ಮಹೇಂದ್ರ ಶೆಟ್ಟಿ, ಸಹ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ, ಖಜಾಂಚಿ ಅಣ್ಣಪ್ಪ ಶೆಟ್ಟಿ, ಬಟ್ಟೆಮಲ್ಲಪ್ಪ ಬಂಟರ ಸಂಘದ ಅಧ್ಯಕ್ಷ ನಾಗರಾಜ್ ಶೆಟ್ಟಿ,ಪ್ರಭಾಕರ್ ಶೆಟ್ಟಿ ಕಾಂಟ್ರಾಕ್ಟರ್, ಶ್ರೀಧರ್ ಶೆಟ್ಟಿ, ಜಯರಾಮ್ ಶೆಟ್ಟಿ , ಸಂತೋಷ್ ಶೆಟ್ಟಿ , ಸುರೇಶ್ ಶೆಟ್ಟಿ ಹೊಸೂರ್ ,ಅಮರ್ ಶೆಟ್ಟಿ,ಸುನಿಲ್ ಶೆಟ್ಟಿ, ಗಣೇಶ ಶೆಟ್ಟಿ, ಎನ್. ಸುರೇಶ್ ಶೆಟ್ಟಿ ನಿಸ್ರಾಣಿ,ಕಾಳಿದಾಸ್ ಶೆಟ್ಟಿ, ರಮೇಶ್ ಹೆಗ್ಡೆ,ನಾಗರಾಜ ಶೆಟ್ಟಿ,ನಾರಾಯಣ ಶೆಟ್ಟಿ, ನಿತ್ಯಾನಂದ ಶೆಟ್ಟಿ, ಶ್ರೀನಿವಾಸ್ ಶೆಟ್ಟಿ,ಪ್ರತಾಪ್ ಶೆಟ್ಟಿ ಉಪಸ್ಥಿತರಿದ್ದರು.