ಬೆಂಗಳೂರು ವಿಶ್ವವಿದ್ಯಾಲಯದ 57ನೇ ವಾರ್ಷಿಕ ಘಟಿಕೋತ್ಸವದಲ್ಲಿ ಬಿ.ಎ. ಪದವಿಯಲ್ಲಿ ನಗರದ ಯುನಿವರ್ಸಲ್ ಸ್ಕೂಲ್ ಆಫ್ ಅಡ್ಮಿನಿಸ್ಟ್ರೇಷನ್‍ನ ಸುಷ್ಮಾ ಎಚ್.ದೊಡ್ಡಬಿಲ್ಲಾ ಅವರು ನಾಲ್ಕು ಚಿನ್ನದ ಪದಕ ಹಾಗೂ ಎರಡು ನಗದು ಪುರಸ್ಕಾರ ಸಹಿತ 6 ಪದಕಗಳೊಂದಿಗೆ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ಇದೇ ಸಂಸ್ಥೆಯ ಒಟ್ಟು 9 ವಿದ್ಯಾರ್ಥಿಗಳು ಟಾಪ್ 10 ರ‍್ಯಾಂಕ್‌ಗಳ ಪೈಕಿ ವಿವಿಧ ರ‍್ಯಾಂಕ್‌ಗಳನ್ನು ಗಳಿಸಿದ್ದಾರೆ.
ವಿಷ್ಣುಶಿವ 2ನೇ ರ್‍ಯಾಂಕ್, ಮೇಘಾ ಚೌಧರಿ 3ನೇ ರ‍್ಯಾಂಕ್, ಅನೀಸ್ ಫಾತಿಮಾ 4ನೇ ರ‍್ಯಾಂಕ್, ಮಹಾಂಕಾಳಿ ವೆಂಕಟ್ ಸ್ವಸ್ತಿಕಾ 6ನೇ ರ‍್ಯಾಂಕ್, ಧರ್ಮಶ್ರೀ ಶೆಟ್ಟಿ 7ನೇ ರ‍್ಯಾಂಕ್, ಮಾರೇಗೌಡ ಪಲ್ಗುಣ 8ನೇ ರ‍್ಯಾಂಕ್ ಹಾಗೂ ಕಾವೇರಿ ಮತ್ತು ಅಭಿಲಾಷ್ ಜಿ.ಆರ್. ಅವರು ತಲಾ 10ನೇ ರ‍್ಯಾಂಕ್ ಗಳಿಸಿದ್ದಾರೆ.
ಯುಪಿಎಸ್‍ಸಿಗೆ ತಯಾರಿ: ರಾಣೆಬೆನ್ನೂರಿನ ಸುಷ್ಮಾ ಅವರು ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‍ಸಿ) ಪರೀಕ್ಷೆಗೆ ತಯಾರಿ ನಡೆಸುತ್ತಿದ್ದು, ಈಗಾಗಲೇ ನೂೂರಾರು ಯಶಸ್ವಿ ಅಭ್ಯರ್ಥಿಗಳನ್ನು ನೀಡಿರುವ ಯುನಿವರ್ಸಲ್ ಕೋಚಿಂಗ್ ಸೆಂಟರ್‌ನಲ್ಲಿ ಅಭ್ಯಾಸ ಮುಂದುವರಿಸಿದ್ದಾರೆ. ಇದಕ್ಕೆ ಬುನಾದಿಯಾಗಿ ಅವರು ಯುನಿವರ್ಸಲ್ ಸ್ಕೂಲ್ ಆಫ್ ಅಡ್ಮಿನಿಸ್ಟ್ರೇಷನ್‍ನಲ್ಲಿ ಬಿ.ಎ.ವ್ಯಾಸಂಗ ಮಾಡಿದ್ದರು.
“ನನ್ನ ಅಪ್ಪ ಸರ್ಕಾರಿ ಪಿಯು ಕಾಲೇಜಿನಲ್ಲಿ ಉಪನ್ಯಾಸಕರು, ತಾಯಿ ಗೃಹಿಣಿ. ಯುಪಿಎಸ್‍ಸಿ ಪರೀಕ್ಷೆಯ ಸಲುವಾಗಿಯೇ ಯುನಿವರ್ಸಲ್ ಸ್ಕೂಲ್‍ಗೆ ಬಂದೆ. ಇಲ್ಲಿನ ಮಾರ್ಗದರ್ಶನ ಅತ್ಯುತ್ತಮವಾಗಿದ್ದುದಕ್ಕೇ ಮೊದಲ ರ‍್ಯಾಂಕ್ ಗಳಿಸುವುದು ಸಾಧ್ಯವಾಯಿತು. ಯುಪಿಎಸ್‍ಸಿ ಪರೀಕ್ಷೆಯಲ್ಲೂ ಉತ್ತಮ ಸಾಧನೆ ಮಾಡಿ ಐಎಎಸ್ ಅಥವಾ ಐಪಿಎಸ್ ಅಧಿಕಾರಿಯಾಗಬೇಕೆಂಬ ಕನಸು ಇಟ್ಟುಕೊಂಡಿದ್ದೇನೆ’ ಎಂದು ಸುಷ್ಮಾ ಹೇಳಿದರು.
ಇಂಟಿಗ್ರೇಟೆಡ್ ಕೋಚಿಂಗ್ ಸಂಸ್ಥೆ: ಬೆಂಗಳೂರಿನ ಕೆಂಗೇರಿ ಬಳಿರುವ ಕೋಲೂರಿನ ಯುನಿವರ್ಸಲ್ ಗ್ರೂಪ್ ಆಫ್ ಇನ್‌ಸ್ಟಿಟ್ಟೂಟ್‌ನ ಯುನಿವರ್ಸಲ್ ಸ್ಕೂಲ್ ಆಫ್ ಅಡ್ಮಿನಿಸ್ಟ್ರೇಷನ್ ಬಿ.ಎ. ಬಿ.ಕಾಂ. ಜತೆಯಲ್ಲಿ ಐಎಎಸ್, ಕೆಎಎಸ್‌ಗೆ ತರಬೇತಿ ನೀಡುವ ಇಂಟಿಗ್ರೇಟೆಡ್ ಕೋಚಿಂಗ್ ನೀಡುವ ಸಂಸ್ಥೆ. ರಾಜ್ಯದಲ್ಲಿ ಇಂತಹ ಪ್ರಯತ್ನ ಆರಂಭಿಸಿದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಯೂ ಯುನಿವರ್ಸಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್‌ನದು.