ಕಾರ್ಮಿಕ ಇಲಾಖೆಯ ವತಿಯಿಂದ ನಡೆದ ಸರ್ಕಾರಿ ಕಾರ್ಯಕ್ರಮದ ಬ್ಯಾನರ್ ನಲ್ಲೆ ಕೆ.ಎಸ್.ಈಶ್ವರಪ್ಪ ನವರ ಮಗನಾದ ಕೆ.ಈ.ಕಾಂತೇಶ‍್ ರವರ ಭಾವ ಚಿತ್ರಗಳನ್ನು ಹಾಕಿದವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಕಾಂಗ್ರೆಸ್ ದಕ್ಷಿಣ ಬ್ಲಾಕ್ ಹಿಂದುಳಿದ ವರ್ಗ ಘಟಕ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ಘನ ಸರ್ಕಾರದ ಯೋಜನೆಯಂತೆ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿಗೆ ಮೇಶನ್ ಕಿಟ್ ಹಾಗೂ ಎಲೆಕ್ಟ್ರಿಕಲ್ ಕಿಟ್ ವಿತರಣ ಸಮಾರಂಭವು ಕರ್ನಾಟಕ ಸರ್ಕಾರದ ಅಡಿಯಲ್ಲಿ ಕಾರ್ಮಿಕ ಇಲಾಖೆ ಶಿವಮೊಗ್ಗ ಇವರ ವತಿಯಿಂದ 6ರಂದು ಶುಭ ಮಂಗಳ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮದ ಫ್ಲೆಕ್ಸ್ ಗಳನ್ನು ಶಿವಮೊಗ್ಗ ನಗರದ ಸುಮಾರು 30 ರಿಂದ 40 ಜಾಗಗಳಲ್ಲಿ ಹಾಕಲಾಗಿತ್ತು. ಈ ಫ್ಲೆಕ್ಸ್ ಗಳಲ್ಲಿ ಶಿವಮೊಗ್ಗ ನಗರದ ಶಾಸಕರಾದ ಕೆ.ಎಸ್.ಈಶ್ವರಪ್ಪ ನವರ ಮಗನ ಭಾವ ಚಿತ್ರವು ದೊಡ್ಡದಾಗಿ ಹಾಕಿದ್ದಾರೆ. ಫ್ಲೆಕ್ಸ್ ನ ಮೇಲ್ ಭಾಗದಲ್ಲಿ ಕರ್ನಾಟಕ ಸರ್ಕಾರ ಎಂದು ನಮೂದಿಸುದ್ದು, ಈಶ್ವರಪ್ಪ ನವರ ಮಗನಿಗೂ ಈ ಸರ್ಕಾರಿ ಕಾರ್ಯಕ್ರಮಕ್ಕೂ ಏನು ಸಂಬಂಧ ಎಂದು ಪ್ರಶ್ನೆಸಿದ್ದಾರೆ. ಕೆ.ಎಸ್.ಈಶ್ವರಪ್ಪ ನವರಿಗೆ ತಮ್ಮ ಮಗನ ಮೇಲೆ ಪ್ರೀತಿ ಇದ್ದರೆ ಪಕ್ಷದ ಕಛೇರಿಯಲ್ಲಿ, ಮನೆಯಲ್ಲಿ ತೋರಿಸಿಕೊಳ್ಳಲಿ. ಆದರೆ ಕರ್ನಾಟಕ ರಾಜ್ಯ ಸರ್ಕಾರ ಹೆಸರಿರುವ ಬ್ಯಾನರ್ ನಲ್ಲಿ ಏಕೆ ತೋರಿಸಬೇಕು ಶಿವಮೊಗ್ಗ ನಗರದಲ್ಲಿ ಇಂತಹ ದೊಡ್ಡದೊಂದು ತಪ್ಪು ನಡೆಯುತ್ತಿದ್ದು, ಜಿಲ್ಲಾಡಳಿತವು ಬಿ.ಜೆ.ಪಿ. ಪಕ್ಷದ ಕೈಗೊಂಬೆಯಾಗಿ ಕೆಲಸ ಮಾಡುತ್ತಾ ಕಣ್ಣು ಮುಚ್ಚಿ ಕುಳಿತಿವೆ. ಸರ್ಕಾರಿಯ ಕಾರ್ಯಕ್ರಮದಲ್ಲಿ ಸರ್ಕಾರದ ಯಾವುದೇ ಹುದ್ದೆ ಇಲ್ಲದಿದ್ದರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಸರಿಯಲ್ಲ. ಜಿಲ್ಲಾಧಿಕಾರಿಗಳಿಗೆ ಕಾರ್ಮಿಕ ಇಲಾಖೆಯ ಈ ಕಾರ್ಯಕ್ರಮದಲ್ಲಿ ಬಹಳಷ್ಟು ಶಿಷ್ಟಾಚಾರ ಉಲ್ಲಂಗನೆಯಾಗಿದ್ದು ಶಿವಮೊಗ್ಗ ನಗರದ ವಿವಿಧ ಭಾಗಗಳಲ್ಲಿ ರಾರಾಜಿಸಿದ್ದರು ಕಾರ್ಮಿಕ ಇಲಾಖೆಯ ಅಧಿಕಾರಿಗಳು ಏಕೆ ಸುಮ್ಮನೆ ಕುಳಿತ್ತಿದ್ದರು ಮೇಲ್ನೋಟಕ್ಕೆ ನೋಡಿದರೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಕಂಡು ಬರುತ್ತದೆ ಎಂದು ಹೇಳಿದರು. ಆದ್ದರಿಂದ ಇವರ ಮೇಲೆ ಸೂಕ್ತ ಕ್ರಮ ಜರುಗಿಸಿ ಕೊಡಬೇಕಾಗಿದೆ ಎಂದು ದಕ್ಷಿಣ ಬ್ಲಾಕ್ ಹಿಂದುಳಿದ ವರ್ಗಗಳ ವತಿಯಿಂದ ಆಗ್ರಹಿಸಿದರು.

ಈ ಸಂದರ್ಭದಲ್ಲಿ ದಕ್ಷಿಣ ಬ್ಲಾಕ್ ಹಿಂದುಳಿದ ವರ್ಗ ಘಟಕ ಬ್ಲಾಕ್ ಅಧ್ಯಕ್ಷ ರಾದ ಮೋಹನ್ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂದೀಪ್ ಆಟೋಕ್. ಮಂಜು ಪುರಾಲೆ. ಭರತ್ ಯುವ ಕಾಂಗ್ರೆಸ್ ಮುಖಂಡರಾದ ಗಿರೀಶ್. ಸಂತೋಷ್ .ಹರೀಶ್ ಮತ್ತಿತರರು ಹಾಜರಿದ್ದರು.

ವರದಿ ಪ್ರಜಾಶಕ್ತಿ…