ಸಾರ್ವಜನಿಕ ಮಾಕನ್ ಇದಿದ್ದ ವಕ್ ಬೋರ್ಡ್ ಆಸ್ತಿ ಹಾಗೂ ಅದರ ಪಕ್ಕದಲ್ಲೇ ಮಕಾನ್ ಖರೀದಿಸಿದ್ದ ಆಸ್ತಿಯನ್ನು ಸಮಾಜದ ಹೆಸರು ಹೇಳಿ ಬೇರಯವರ ಹೆಸರಿಗೆ ಹಾಗೂ ಮಕಾನ್ ಖಾತೆ ಕೈಬಿಟ್ಟು ಹೋಗಿರುವ ಬಗ್ಗೆ ಪುರಸಭೆಗೆ ಹಲವಾರು ವರ್ಷಗಳಿಂದ ಅರ್ಜಿ ನೀಡಿದ್ದು ಪುರಸಭೆ ಅಧಿಕಾರಿಗಳು ವೀಕ್ಷಿಸಲು ಬಂದ ಅಧಿಕಾರಿಗಳ ವಿರುದ್ಧ ಹಾಗೂ ಮಾಕನ್ ವಿರುದ್ಧ ಮುಸಲ್ಮಾನ್ ಸಮಾಜದ ವಿರೋಧ ಎಂಬಂತೆ ಬಿಂಬಿಸಿ ಪ್ರತಿಭಟನೆ ಮಾಡಿರುವ ಇವರುಗಳಿಂದ ನಮ್ಮ ಕುಟುಂಬಕ್ಕೆ ಜೀವ ಭಯವಿದೆ ಎಂದು ದೂರು ನೀಡುತ್ತೇನೆ ಎಂದು ನಜೀರ್ ಅಹಮದ್ ಹೇಳಿಕೊಂಡಿದ್ದಾರೆ.

ನಜೀರ್ ಅಹಮದ್ ಆದ ನಾನು ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ 1985 ರಲ್ಲಿ ತೊಪಣ್ಣ ಎಂಬುವರಿಂದ ಅಳತೆ 15*60 ವಿಸ್ತೀರ್ಣದ ಖಾಲಿ ನಿವೇಶನ ಸಬ್ ರಿಜಿಸ್ಟರ್ ನಲ್ಲಿ ಪುರಸಭೆಯಲ್ಲಿ ಕೈಬಿಟ್ಟು ಹೋಗಿರುತ್ತದೆ ಹಾಗಾಗಿ ಹಲವಾರು ಬಾರಿ ಸೇರಿಸಲು ದೂರು ನೀಡಿದ್ದು ಹಾಗೂ ಅವರ ಆಸ್ತಿಯನ್ನು ಸರ್ಕಾರ ಸಾರ್ವಜನಿಕರಿಗೆ ಅನುಕೂಲಕ್ಕೆ ಪಡೆಯಲೆಂದು ಸಂಬಂಧಿಸಿದಂತೆ ಇಲಾಖೆಗೆ ಅರ್ಜಿ ನೀಡಿರುತ್ತೇನೆ.
ದಿನಾಂಕ 02/07/2021 ರಂದು ಪುರಸಭೆ ಅಧಿಕಾರಿಗಳು ಸ್ಥಳ ವೀಕ್ಷಿಸಿ ಹೋಗಿರುತ್ತಾರೆ ಇದನ್ನು ಅರಿತ ಹನೀಫ್ ರೆಹಮಾತ್ ಹಾಗೂ ಸಹಚರರು ಎಲ್ಲಿ ಸರ್ಕಾರದ ಆಸ್ತಿ ನಮ್ಮ ಹೆಸರು ಗಳಲ್ಲಿರುವ ಖಾತೆಯಯು ಕೈಬಿಟ್ಟು ಹೋಗುತ್ತದೆ ಹಾಗು ನಾನು ಖರೀದಿಸಿದ ಆಸ್ತಿ ನನ್ನ ಹೆಸರಿಗೆ ಆಗುತ್ತದೆ ಎಂದು ಮನಗೊಂಡ ಹನೀಫ್ ಹಾಗೂ ರೆಹಮತ್ ಇವರು ಗುಂಪುಕಟ್ಟಿಕೊಂಡು ಪುರಸಭೆ ಅಧಿಕಾರಿಗಳ ವಿರುದ್ಧ ಹಾಗೂ ನನ್ನನ್ನು ಮುಸ್ಲಿಂ ವಿರೋಧಿ ಎಂಬಂತೆ ಬಿಂಬಿಸಿ ನನಗೆ ಸಂಬಂಧವಿಲ್ಲ ಎಂದು ಪ್ರತಿಭಟನೆ ಮಾಡಿರುತ್ತಾರೆ. ಇದರಿಂದ ನನಗೆ ಸಮಾಜದಲ್ಲಿ ತುಂಬಾ ಅವಮಾನ ಹಾಗೂ ಬೇಸರವಾಗಿದ್ದು ನನ್ನ ಮಾನಕ್ಕೆ ಕುಂದು ಬಂದಿರುತ್ತದೆ ನಾನು ಹೋರಾಟ ಮಾಡುತ್ತಿರುವುದು ನಾನು ಸ್ವಂತ ಖರೀದಿಸಿದ ಆಸ್ತಿಗಾಗಿ ಹಾಗೂ ಸರ್ಕಾರದ ವಕ್ ಬೋರ್ಡ್ ಸರ್ಕಾರ ಪಡೆಯಲು ಎಂದು ಮುಂದಿನ ದಿನಗಳಲ್ಲಿ ಡಿಸಿ, ಎಸಿ, ಕಚೇರಿಯ ಮುಂದೆ ನನ್ನ ಕುಟುಂಬ ಸಮೇತ ನನ್ನ ಜೀವದ ಹಂಗುತೊರೆದು ನಾನು ಇದರ ಬಗ್ಗೆ ಧರಣಿ ಸತ್ಯಾಗ್ರಹವನ್ನು ಸದ್ಯದಲ್ಲೇ ಮಾಡುತ್ತೇನೆ ಹಾಗೂ ಇದರಿಂದ ಜೀವಭಯ ಇರುವ ಬಗ್ಗೆ ತಮಗೆ ಹಾಗೂ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ದೂರು ನೀಡಿರುತ್ತೇನೆ ನ್ಯಾಯ ಸಿಗುವವರೆಗೂ ಧರಣಿ ಸತ್ಯಾಗ್ರಹ ನಡೆಸುತ್ತೇನೆ ಎಂದು ನಜಿರ್ ಅಹಮದ್ ಕಡೆಯಿಂದ ಹೇಳಿಕೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153