ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ, ಜನರ ಆಸ್ತಿ ಪಾಸ್ತಿ ಪ್ರಾಣ ಕಾಪಾಡುವ ಹೊಣೆ ಹೊತ್ತಿರುವ, ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ, ಚೈತನ್ಯದಾಯಕ ವಾತಾವರಣ ಸೃಷ್ಟಿ ಮಾಡಿಕೊಡಲು, ಸರಕಾರ ಶ್ರಮಿಸುತ್ತದೆ, ಎಂದು ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು ತಿಳಿಸಿದ್ದಾರೆ.

ಸಚಿವರು ರಾಜಭವನದಲ್ಲಿ ಹಮ್ಮಿಕೊಂಡ, ಅತ್ಯುತ್ತಮ ಸೇವೆಗೈದ ಸಿಬ್ಬಂದಿಗಳಿಗೆ, ರಾಷ್ಟ್ರಪತಿಯವರ ಪದಕ ಪ್ರದಾನ ಸಮಾರಂಭ ದಲ್ಲಿ ಪ್ರಶಸ್ತಿ ಪುರಸ್ಕೃತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಕಳೆದ ನಾಲ್ಕೂವರೆ ವರ್ಷಗಳಲ್ಲಿ, ನಮ್ಮ ಸರಕಾರ ಪೊಲೀಸ್ ಇಲಾಖೆಯ ಬಲವರ್ಧನೆಗೆ ಅತ್ಯಂತ ಹೆಚ್ಚು ಅನುದಾನ ಬಿಡುಗಡೆ ಮಾಡಲಾಗಿದೆ ಎಂದ ಸಚಿವರು, ಪ್ರಸಕ್ತ ವರ್ಷದಲ್ಲಿ ಸುಮಾರು 200 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಒಟ್ಟು 117 ಸುಸಜ್ಜಿತ ಪೊಲೀಸ್ ಠಾಣೆಗಳನ್ನು ನಿರ್ಮಾಣ ವಾಗುತ್ತಿದೆ ಎಂದರು.

ರಾಜ್ಯ ಪೊಲೀಸರಿಗೆ ಅತ್ಯುತ್ತಮ ವಸತಿ ಸೌಲಭ್ಯ, ಸೈಬರ್ ಕ್ರೈಂ ವಿಭಾಗದ ಬಲ ಪಡಿಸುವುದು ಸೇರಿದಂತೆ, ಅಪರಾಧ ನಿಯಂತ್ರಣ ಕ್ಕಾಗಿ, ಹತ್ತು ಹಲವು ಉಪಕ್ರಮ ಗಳನ್ನೂ ಸರಕಾರ ಕೈಗೊಂಡಿದೆ ಎಂದು ಸಚಿವರು ತಿಳಿಸಿದರು.

ರಾಷ್ಟ್ರದಲ್ಲಿಯೇ, ಕರ್ನಾಟಕ ಪೊಲೀಸ್ ವ್ಯವಸ್ಥೆ ದಕ್ಷತೆ ಹಾಗೂ ನಾಗರಿಕರ ಸೇವೆಗೆ ಅತ್ಯುನ್ನತ ಮನ್ನಣೆ ಹೊಂದಿದೆ, ಎಂದೂ ಸಚಿವರು ಪ್ರಶಂಸೆ ಮಾಡಿದರು.

ರಾಜ್ಯಪಾಲ ರಾದ ಶ್ರೀ ತಾ ಗೆಹ್ಲೋಟ್, ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ , ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…