ಶಿವಮೊಗ್ಗ: ಸಮಾಜಸೇವೆಯ ಗುಣವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು. ಸೇವೆ ಸಲ್ಲಿಸುತ್ತಿರುವ ಸಂಘ ಸಂಸ್ಥೆಗಳಿಗೆ ಕೈಲಾದ ನೆರವು ಒದಗಿಸುವುದು ಶ್ರೇಷ್ಠ ಕಾರ್ಯ ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಎಸ್.ಶಿವಕುಮಾರ್ ಹೇಳಿದರು.

ನಗರದ ಗುಡ್ ಲಕ್ ಆರೈಕೆ ಕೆಂದ್ರಕ್ಕೆ ಶಿವಮೊಗ್ಗ ಮಲೆನಾಡು ರೌಂಡ್ ಟೇಬಲ್ 266 ಸಂಸ್ಥೆ ವತಿಯಿಂದ ನಿಧಿ ಸಮರ್ಪಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜಮುಖಿ ಕಾರ್ಯಗಳಿಗೆ ರೌಂಡ್ ಟೇಬಲ್ ಸಂಸ್ಥೆ ಕೈಜೋಡಿಸುತ್ತಿರುವುದು ಅಭಿನಂದನೀಯ. ವಿವಿಧ ಸಂಘ ಸಂಸ್ಥೆಗಳು ಸಹ ಸೇವಾ ಚಟುವಟಿಕೆಗಳನ್ನು ನಡೆಸಬೇಕು ಎಂದು ತಿಳಿಸಿದರು.
ಆರ್‌ಟಿಐ ಸಂಸ್ಥೆಯ ಚೇರ‍್ಮನ್ ನಿತಿನ್ ಮಾತನಾಡಿ, ನಮ್ಮ ಸಂಸ್ಥೆಯು ನಿರಂತರವಾಗಿ ಜನಪಯೋಗಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದ್ದು, ಗುಡ್ ಲಕ್ ಆರೈಕೆ ಕೇಂದ್ರಕ್ಕೆ ನಿಧಿ ಸಮರ್ಪಿಸಲಾಗುತ್ತಿದೆ. ಸಂಸ್ಥೆಯ ಉದ್ದೇಶ, ಯೋಜನೆಯನ್ನು ತಿಳಿಸಿದರು.

ಗುಡ್ ಲಕ್ ಆರೈಕೆ ಕೇಂದ್ರದಲ್ಲಿ ಪ್ರತಿಷ್ಠಿತ ಶಿವಮೊಗ್ಗ ಮಲೆನಾಡು ರೌಂಡ್ ಟೇಬಲ್ 266 ಅಂತರಾಷ್ಟ್ರೀಯ ಸಂಸ್ಥೆಯು ಅರ್ ಟಿ ಐ ಕಿಚನ್ ನಿತ್ಯ ಪ್ರಸಾದ ಯೋಜನೆಗೆ ನಿಧಿ ಸಮರ್ಪಿಸಿತು. ರೌಂಡ್ ಟೇಬಲ್ ಸಂಸ್ಥೆಯ ಎಲ್ಲ ಸದಸ್ಯರು ಆಗಮಿಸಿದ್ದರು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಹಾನಗರ ಪಾಲಿಕೆಯ ಮೇಯರ್ ಎಸ್.ಶಿವಕುಮಾರ್ ಅವರನ್ನು ಸನ್ಮಾನಿಸಲಾಯಿತು. ರೌಂಡ್ ಟೇಬಲ್ ಸಂಸ್ಥೆಯ ರಾಷ್ಟ್ರೀಯ ನಿರ್ವಾಹಕ ಅನಿಲ್ ರಾಜ ಸಂಸ್ಥೆಯ ವಿವಿಧ ಜನೋಪಯೋಗಿ ಕಾರ್ಯವನ್ನು ತಿಳಿಸಿದರು.
ಕರೋನಾ ಸಂದರ್ಭದಲ್ಲಿ ಉಪವಾಸದಿಂದ ಪರಿತಪಿಸುತ್ತಿದ್ದ ಜನರಿಗಾಗಿ ವಿಶೇಷ ಅನ್ನಪೂರ್ಣ ಯೋಜನೆ ಆರ್‌ಟಿಐ ಕಿಚನ್. ಇದು ಮುಂದುವರಿಸುವುದು ಒಳ್ಳೆಯದು. ಡಿಸೆಂಬರ್ 6ರಿಂದ 15 ರ ವರೆಗೆ 10 ದಿನ ಎಲ್ಲ ಕಡೆ ಅನ್ನಸಂತರ್ಪಣೆ ಮಾಡುತ್ತಿದ್ದೇವೆ ಎಂದರು.

ಗುಡ್ ಲಕ್ ಅರೈಕೆ ಕೇಂದ್ರದ ಅಧ್ಯಕ್ಷ ರವೀಂದ್ರನಾಥ ಐತಾಳ ಮಾತನಾಡಿ. ಸಂಸ್ಥೆ ನಡೆದು ಬಂದ ದಾರಿಯನ್ನು ತಿಳಿಸಿ ಸಹಕರಿಸುತ್ತಿರುವ ಎಲ್ಲರಿಗೂ ಅಭಿನಂದಿಸಿದರು.
ರೌಂಡ್ ಟೇಬಲ್ ಸಂಸ್ಥೆಯ ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖಂಡರಾದ ಅದರ್ಶ ರಾಜು, ಶಬರೀಶ್, ಶಬರೀಶ್ ರಾಜ, ಸದಸ್ಯರಾದ ಪ್ರದೀಪ್, ಸಂಜಯ, ಗಗನ, ರೋಹನ್, ರತ್ವೀಕ್, ಕಾರ್ತೀಕ್, ವಿಶ್ವಾಸ ಕಾಮತ್, ವರುಣ್, ಗುಡ್ ಲಕ್ ನಿರ್ದೇಶಕ ಜಿ. ವಿಜಯಕುಮಾರ್, ಕಾರ್ಯದರ್ಶಿ ಪಂಚಾಕ್ಷರಿ ಹಿರೇಮಠ ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…