ಬೆಂಗಳೂರಿನ ಕುಂದಲಹಳ್ಳಿ ಗೇಟ್ ನ ಬೇಕರಿಯ ಗಲಬೆ ಹಾಗೂ ಇಲೆಕ್ಟ್ರಾನಿಕ್ ಸಿಟಿಯ ವಿಲೇಜ್ ರೆಸ್ಟೊರೆಂಟ್ ಹತ್ತಿರ ಪುಡಿ ರೌಡಿಗಳು ಗಲಾಟೆ ಮಾಡಿ ದಾಂದಲೆ ನಡೆಸಿದ್ದರು.
ಈ ಗಲಬೆಯನ್ನು ಉಲ್ಲೇಖಿಸಿ ಮಾನ್ಯ ಮುಖ್ಯಮಂತ್ರಿಯವರನ್ನು ಇವತ್ತು ಬೆಳಗೆ 9.30 ಕ್ಕೆ ಅವರ R T ನಗರದ ನಿವಾಸದಲ್ಲಿ ಭೇಟಿ ಮಾಡಿ ಮಿತಿ ಮೀರಿದ ಪುಂಡರ ಹಾವಳಿಯನ್ನು ಹತ್ತಿಕ್ಕುವಲ್ಲಿ ಪೋಲಿಸ್ ಇಲಾಖೆಯಿಂದ ಕಠಿಣ ಕ್ರಮದ ಜಾರಿಗೆ ಒತ್ತಾಯಿಸಿ ಬೆಂಗಳೂರು ಬಂಟರ ಹೋಟೆಲ್ ಮಾಲಿಕರ ಸಂಘದ ವತಿಯಿಂದ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅದ್ಯಕ್ಷರಾದ ಮಧುಕರ ಎಂ ಶೆಟ್ಟಿ, ಗೌರವ ಕಾರ್ಯದರ್ಶಿ ಸಂತೋಷ ಕುಮಾರ ಶೆಟ್ಟಿ ಹಾಗೂ ಉಪಾದ್ಯಕ್ಷರಾದ ಶ್ರೀನಿವಾಸ ಶೆಟ್ಟಿ ಉಪಸ್ಥಿತರಿದ್ದರು.