ಶಿವಮೊಗ್ಗ: ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಉತ್ತಮ ಸಾಧನೆ ಮಾಡುತ್ತ ಸಮಾಜದ ಅಭಿವೃದ್ಧಿಯಲ್ಲಿ ಮುಖ್ಯಪಾತ್ರ ವಹಿಸುತ್ತಿದ್ದಾರೆ ಎಂದು ಇನ್ನರ್‌ವ್ಹೀಲ್ ಪ್ರತಿಷ್ಠಾಪನಾ ಅಧಿಕಾರಿ ವಾರಿಜಾ ಜಗದೀಶ್ ಹೇಳಿದರು.
ಶಿವಮೊಗ್ಗದ ಪ್ರಸಿದ್ಧ ರೋಟರಿ ಶಿವಮೊಗ್ಗ ಪೂರ್ವದ ಮಹಿಳಾ ಕ್ಲಬ್ ಇನ್ನರ್‌ವ್ಹೀಲ್ ಕ್ಲಬ್‌ನ 2021-22ನೇ ಸಾಲಿನ ಅಧ್ಯಕ್ಷರಾಗಿ ಜಯಂತಿ ವಾಲಿ ಮತ್ತು ಕಾರ್ಯದರ್ಶಿಯಾಗಿ ಬಿಂದು ವಿಜಯ್‌ಕುಮಾರ್ ಹಾಗೂ ಕಾರ್ಯಕಾರಿ ಮಂಡಳಿಯ ಸದಸ್ಯರ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಿಳೆಯರು ಅಡುಗೆ ಮನೆಗೆ ಸೀಮಿತವಾಗಬಾರದು. ಸಮಾಜದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡು ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದಾರೆ. ಅಂತಹ ಮಹಿಳೆಯರು ಇನ್ನರ್‌ವ್ಹೀಲ್ ಕ್ಲಬ್‌ನಲ್ಲಿ ಅಂತರರಾಷ್ಟಿçಯ ಮಟ್ಟದಲ್ಲೂ ಕೂಡ ಬಿಡುವಿನ ಸಮಯದಲ್ಲಿ ಸಮಾಜಕ್ಕೆ ಸೇವೆ ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ನೂತನ ಅಧ್ಯಕ್ಷೆ ಜಯಂತಿ ವಾಲಿ ಮಾತನಾಡಿ, ಸಮಾಜಕ್ಕೆ ಅನುಕೂಲವಾಗುವಂತಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅದರಲ್ಲೂ ಮಹಿಳೆಯರಿಗೆ ಸಂಬAಧಪಟ್ಟ ಪ್ರಾಜೆಕ್ಟ್ಗಳನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೋಟರಿ ಶಿಮೊಗ್ಗ ಪೂರ್ವದ ಅಧ್ಯಕ್ಷ ಮಂಜುನಾಥ್ ಕದಂ ಅವರು ನೂತನ ಕಾರ್ಯಕಾರಿ ಮಂಡಳಿಯ ಸದಸ್ಯರಿಗೂ ಶುಭಾಶಯಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ರೋಟರಿ ವಿಜಯ್ ಕುಮಾರ್, ಇನ್ನರ್‌ವ್ಹೀಲ್ ಕಾರ್ಯದರ್ಶಿ ಬಿಂದು ವಿಜಯ್ ಕುಮಾರ್, ಶಬರಿ ಕಡಿದಾಳ್, ಮಧುರ ಮಹೇಶ್ ಪೂರ್ಣಿಮಾ ನರೇಂದ್ರ ಜ್ಯೋತಿ ಗೌಡ ವೀಣಾ ಸುರೇಶ್ ಮತ್ತು ಎಲ್ಲಾ ಇನ್ನರ್ವೀಲ್ ಪದಾಧಿಕಾರಿಗಳು ಮುತ್ತು ಸದಸ್ಯರು ಉಪಸ್ಥಿತರಿದ್ದರು.
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153