ಕೋವಿಡ್‌ -19 ನ ಕಾರಣದಿಂದಾಗಿ ಲಾಕ್ ಡೌನ್ ನ ನಿಮಿತ್ತ ಕಟ್ಟಡ ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದು ಜೀವನ ನಿರ್ವಹಣೆ ಕಷ್ಟಕರವಾಗಿರುತ್ತದೆ. ಈ ಬಗ್ಗೆ ಕಾರ್ಮಿಕ ಇಲಾಖೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಮಿಕರ ನೆರವಿಗೆ ಹಲವು ಸೌಲಭ್ಯ ಗಳನ್ನು ಒದಗಿಸಬೇಕೆನ್ನುವುದರ ಬಗ್ಗೆ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದಾರೆ . ಕಾರ್ಮಿಕ ಇಲಾಖೆ ಶಿವಮೊಗ್ಗದಲ್ಲಿ ಒಟ್ಟು -1,07,286 ನೋಂದಣಿ ಯಾದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿದ್ದಾರೆ ಅವರುಗಳ ಬ್ಯಾಂಕ್ ಖಾತೆಗೆ ಡಿ.ಬಿ.ಟಿ ಮೂಲಕ ನೇರವಾಗಿ 3000 ರೂ ಗಳನ್ನು ಪ್ಯಾಕೇಜ್ ಘೋಷಿಸಿದ್ದೇವೆ ಅದರಂತೆ ಈಗಾಗಲೇ ನೋಂದಾಯಿತವಾಗಿರುವ 72,065 ಕಾರ್ಮಿಕರಿಗೆ ಜಿಲ್ಲೆಯಲ್ಲಿ 21,61,95,000/- ರೂ ಗಳ ಈಗಾಗಲೇ ಜಮೆ ಗೊಳಿಸಲಾಗಿದೆ . ಹಾಗೂ 11,040 ಕಾರ್ಮಿಕರಿಗೆ ಜಮೆ ಗೊಳಿಸಲಾದ ಮೊತ್ತ ಅವರುಗಳ ಬ್ಯಾಂಕ್ ಖಾತೆ ನಿಷ್ಕ್ರಿಯವಾಗಿರುವುದು ಹಾಗೂ ಬ್ಯಾಂಕ್ ಖಾತೆ ಆಧಾರ್ ನಂಬರಗೆ ಜೋಡಣೆಯಾಗದಿರುವ ಕಾರಣ
3,31,20,000/- ರೂ ಗಳ ಮೊತ್ತ ಜಮೆ ಆಗದೆ ವಾಪಸ್ ಆಗಿದ್ದು ಕಾರ್ಮಿಕರು ತಮ್ಮ ಬ್ಯಾಂಕ್ ಖಾತೆಯನ್ನು ಆಧಾರ್ ಜೋಡಣೆ ಯೊಂದಿಗೆ ಚಾಲ್ತಿ ಮಾಡಿಕೊಳ್ಳಲು ಕ್ರಮ ವಹಿಸಿದ್ದಾರೆ .
ಅಲ್ಲದೆ ಕಷ್ಟದಲ್ಲಿರುವ ನೋಂದಾಯಿತ ಕಾರ್ಮಿಕರಿಗೆ ಫುಡ್ ಕಿಟ್ ವಿತರಣೆ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಸದರಿ ಫುಡ್ ಕಿಟ್ ನಲ್ಲಿರುವ ಸಾಮಗ್ರಿಗಳು
೧. ತೊಗರಿ ಬೇಳೆ – ೧ ಕೆ .ಜಿ
೨.ಅಡುಗೆ ಎಣ್ಣೆ – ೧ ಲೀ
೩. ಗೋಧಿ ಹಿಟ್ಟು – ೨ ಕೆ. ಜಿ ೪.ರವೆ – ೧ ಕೆ.ಜಿ ೫.ಉಪ್ಪು – ೧ ಕೆ.ಜಿ . ೬.ಸಾಂಬಾರ್ಪೌಡರ್ ೨೦೦ಗ್ರಾಂ ೭.ಮೆಣಸಿನ ಪುಡಿ -೧೦೦ ಗ್ರಾಂ .೮..ಸಕ್ಕರೆ -೧ ಕೆ .ಜಿ ೬.ಅವಲಕ್ಕಿ -೧ ಕೆ.ಜಿ ೧೦.ಅಕ್ಕಿ -5 ಕೆ.ಜಿ
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 10,000 ಫುಡ್ ಕಿಟ್ ಗಳು ಸರಬರಾಜು ಆಗಲಿದ್ದು .ಸದರಿ ಫುಡ್ ಕಿಟ್ ಗಳನ್ನು 35 ವಾರ್ಡ್ ವಾರು ಕಾರ್ಮಿಕರಿಗೆ ವಿತರಿಸಲು ಅನುಕೂಲವಾಗುವಂತೆ 9 ತಂಡಗಳನ್ನು ರಚಿಸಲಾಗಿದೆ 32 ಕೇಂದ್ರಗಳಲ್ಲಿ ನೋಡಲ್ ಅಧಿಕಾರಿಗಳ ತಂಡದ ನೇತೃತ್ವದಲ್ಲಿ ವಿತರಣೆ ಕಾರ್ಯವನ್ನು ಪ್ರಾರಂಭಿಸಲಾಗುವುದು ಹಾಗೂ ಕಟ್ಟಡ ಕಾರ್ಮಿಕರು ಆಹಾರ ಸಾಮಗ್ರಿ ಕಿಟ್ ಗಳನ್ನು ಪಡೆಯಲು ಟೋಕನ್ ಗಳನ್ನು 1 ದಿನ ಮೊದಲೇ ಕೊಡಲಾಗುವುದು ಯಾವ ಕೇಂದ್ರಗಳಲ್ಲಿ ಯಾವ ದಿನಾಂಕದಂದು ಫುಡ್ ಕಿಟ್ ವಿತರಣೆ ಮಾಡಲಾಗುತ್ತದೆ ಎಂದು ಕಾರ್ಮಿಕರಿಗೆ ತಿಳಿಸಲಾಗುತ್ತದೆ .

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153