ಆನವಟ್ಟಿ :
ಚುನಾವಣೆ ಸಮೀಪಿಸುತ್ತಿದ್ದಂತೆ ಅರಣ್ಯ ಭೂಮಿಯ ಸರ್ವೆ, ದಂಡಾವತಿ ಬ್ಯಾರೇಜ್ ಇನ್ನಿತರ ಸಮಸ್ಯೆಗಳನ್ನು ನೆನಪಿಸಿಕೊಂಡು ಹೇಳಿಕೆ ನೀಡುತ್ತಿರುವ ಶಾಸಕ ಕುಮಾರ್ ಬಂಗಾರಪ್ಪ ಅವರು ಮೂರುವರೆ ವರ್ಷ ಕ್ಷೇತ್ರದ ಜನತೆಯ ಪಾಲಿಗೆ ಕಾಣೆಯಾಗಿದ್ದರೆ? ಎಂದು ಕೆಪಿಸಿಸಿ ಓಬಿಸಿ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಪ್ರಶ್ನಿಸಿದರು.

ಅವರು ಆನವಟ್ಟಿಯ ಕುಬಟೂರು ತಮ್ಮ ಬಂಗಾರ ನಿವಾಸದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಜನರ ವಿಶ್ವಾಸ ಕಳೆದುಕೊಂಡ ರಾಜ್ಯದ ಮೊದಲ ಜನಪ್ರತಿನಿಧಿ ಕುಮಾರ್ ಬಂಗಾರಪ್ಪ ಎಂದು ಚೇಡಿಸಿ, ಸರ್ವೆ ಮಾಡಿರುವ ಬಗರ್ ಹುಕುಂ ಭೂಮಿಯನ್ನು ಮತ್ತೆ ಸರ್ವೇ ಮಾಡುವ ಅವಶ್ಯಕತೆ ಇಲ್ಲ ರೈತರು ಇದಕ್ಕೆ ಸಹಕಾರ ನೀಡಬಾರದು ಮೊದಲು ಸರ್ವೆ ಮಾಡಿರುವ ಮಾಹಿತಿಯಂತೆ ಭೂಮಿ ಮಂಜೂರು ಮಾಡಿಕೊಡಲು ಎಲ್ಲರೂ ಸಂಘಟಿತರಾಗಿ ಒತ್ತಾಯಿಸಿ ಎಂದು ರೈತರಿಗೆ ಕರೆ ನೀಡಿದರು, ಜನರನ್ನು ಮುಳುಗಿಸಿ ನೀರು ಕೊಡುವ ಯೋಜನೆಗಿಂತ ಜನರನ್ನು ಮುಳುಗಿಸದೆ ನೀರು ಕೊಡುವ ಯೋಜನೆ ಬೇಕು ಈ ನಿಟ್ಟಿನಲ್ಲಿ ದಂಡಾವತಿ ನದಿಗೆ ಬ್ಯಾರೇಜ್ ನಿರ್ಮಾಣ ಮಾಡುವ ಯೋಜನೆ ನೀಲಿ ನಕ್ಷೆಯನ್ನು ತಯಾರಿಸಿ ಎಂ.ಬಿ. ಪಾಟೀಲ್ ಹಾಗೂ ಡಿ.ಕೆ.ಶಿವಕುಮಾರ್ ಅವರು ಸಚಿವರಾಗಿದ್ದ ಅವಧಿಯಲ್ಲಿ ಅವರಿಗೆ ಯೋಜನೆಯ ಅನುಕೂಲವನ್ನು ಮನವರಿಕೆ ಮಾಡಿ ಮಂಜೂರಾತಿಗೆ ಮನವಿ ಸಲ್ಲಿಸಲಾಗಿದೆ, ನಾನು ತಯಾರಿಸಿದ ಯೋಜನೆಯನ್ನು ತಮ್ಮದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಪ್ರಸ್ತಾವನೆ ಸಲ್ಲಿಸಿ ಹೇಳಿಕೆ ನೀಡುತ್ತಿರುವ ಕುಮಾರ್ ಬಂಗಾರಪ್ಪ ಅವರ ಚುನಾವಣಾ ನಾಟಕ ನಡೆಯುವುದಿಲ್ಲ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದರು.

ಶಾಸಕರು ಹೇಳಿಕೆ ಕಾಮನ್ ಸೆನ್ಸ್ ನಿಂದಲ್ಲ ಕಮಿಷನ್ ಸೆನ್ಸ್ ನಿಂದ ಕೂಡಿದ್ದು, ನಾನು ಏತ ನೀರಾವರಿ ಯೋಜನೆಗಾಗಿ ಮಾಡಿರುವ ಪಾದಯಾತ್ರೆಯ ಫಲದಿಂದ ಜಿಲ್ಲೆಯಲ್ಲಿ ನೀರಾವರಿ ಯೋಜನೆ ಮಂಜೂರಾತಿ ಯಾಗಿರುವುದು ಜಿಲ್ಲೆಯ ಪ್ರತಿಯೊಬ್ಬ ಜನರಿಗೂ ಗೊತ್ತು, ತಂಡಾವತಿ ಯೋಜನೆ ಯಿಂದ ಗ್ರಾಮಗಳನ್ನು ಮುಳುಗಡೆ ಮಾಡಲು ಬಿಡುವುದಿಲ್ಲ ಎಂದು ದಂಡಾವತಿ ಯೋಜನೆಯನ್ನು ಕೈಬಿಡುವಂತೆ ತಾಲೂಕಿನಲ್ಲಿ ಹೋರಾಟ ಮಾಡಿದಾಗ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರವರು ಕಾಗೋಡು ತಿಮ್ಮಪ್ಪ ರವರು ಸ್ಥಳಕ್ಕೆ ಭೇಟಿ ನೀಡಿದ್ದರು, ಬಂಗಾರಪ್ಪ ಶಂಕುಸ್ಥಾಪನೆ ಮಾಡಿರುವ ಮೂಡಿ ಮುಗೂರು ಏತ ನೀರಾವರಿ ಪಾದಯಾತ್ರೆಯ ಫಲವಾಗಿ ಕುಮಾರಸ್ವಾಮಿಯವರು ಬಜೆಟ್ನಲ್ಲಿ ಯೋಜನೆಗೆ ಹಣ ಬಿಡುಗಡೆ ಮಾಡಿದ ಕಾರಣ ಕಮಿಷನ್ ಬಂದಿಲ್ಲ ಎಂದು ಗುತ್ತಿಗೆದಾರರಿಗೆ ಸ್ಪಂದಿಸದ ಕುಮಾರ್ ಬಂಗಾರಪ್ಪ ಅವರದು ಕಾಮನ್ ಸೆನ್ಸ್ ರಾಜಕಾರಣ ಅಲ್ಲ ಕಮಿಷನ್ ಸೆನ್ಸ್ ರಾಜಕಾರಣ ಎಂದು ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರುಗಳಾದ ಮಂಜುನಾಥ್, ಸುರೇಶ್ ಹಾವಣ್ಣನವರ್ ಹಬಿಬುಲ್ಲ ಹವಲ್ದಾರ್ , ತರಕಾರಿ ಸಂಜೀವ್ ಸದಾ ಗೌಡ, ಕೃಷ್ಣಪ್ಪ ಇನ್ನಿತರರು ಉಪಸ್ಥಿತರಿದ್ದರು

ವರದಿ ಪ್ರಜಾಶಕ್ತಿ…