ಸ್ಕೌಟ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳ ಭವಿಷ್ಯದ ಕನ್ನಡಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸ್ಕೌಟ್ ಅಂಡ್ ಗೈಡ್ಸ್ ಒಂದ್ ದಾರಿದೀಪವಾಗಿದೆ ತಮ್ಮ ವಿದ್ಯಾಭ್ಯಾಸದ ಜೊತೆಗೆ ಉತ್ತಮ ಸಂಸ್ಕಾರ ಹಾಗೂ ಶಿಸ್ತು ಬದ್ಧ ಜೀವನಕ್ಕೆ ನೂರಾರು ವರ್ಷ ಇತಿಹಾಸವಿರುವ ಸ್ಕೌಟ್ ಅತ್ಯಂತ ಸಹಕಾರಿಯಾಗಿದೆ. ಎಂದು ಸರ್ಜಿ ಸಮೂಹ ಸಂಸ್ಥೆಯ ಮುಖ್ಯಸ್ಥರಾದ ಡಾಕ್ಟರ್ ಧನಂಜಯ್ ಸರ್ಜಿ ಅವರು ನುಡಿದರು.
ಅವರು ಶಿವಮೊಗ್ಗ ನಗರದ ಸೈನ್ಸ್ ಮೈದಾನದಲ್ಲಿ. ಭಾರತ್ ಸ್ಕೌಟ್ ಅಂಡ್ ಗೈಡ್ಸ್ ನ ಮಕ್ಕಳು.. ಮೂಡುಬಿದರೆಯಲ್ಲಿ ನಡೆಯುವ ಏಳು ದಿನಗಳ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ಶಿವಮೊಗ್ಗ ಜಿಲ್ಲೆಯಿಂದ 1409 ಮಕ್ಕಳು ಭಾಗವಹಿಸಲಿದ್ದು ಅವರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು ಅಂತರಾಷ್ಟ್ರೀಯ ಜಾಂಬೂರಿಯನ್ನು ನೋಡುವುದೇ ಒಂದು ವಿಶೇಷವಾಗಿದೆ ಬೇರೆ ಬೇರೆ ದೇಶದ ಮಕ್ಕಳೊಂದಿಗೆ ತಮ್ಮ ಅನುಭವವನ್ನು ಹಂಚಿಕೊಳ್ಳಲು ಉತ್ತಮ ಕಾರ್ಯಕ್ರಮವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸ್ಕೌಟ್ ಅಂಡ್ ಗೈಡ್ ಸಿನ ಮುಖ್ಯ ಆಯುಕ್ತರದ ಎಚ್ ಡಿ ರಮೇಶ್ ಶಾಸ್ತ್ರಿ ಅವರು ಮಾತನಾಡುತ್ತಾ ಸುಮಾರು 50 ಸಾವಿರ ಜನ ಅಂತರಾಷ್ಟ್ರೀಯ ಜಾಂಬೂರಿಯಲ್ಲಿ ಪಾಲ್ಗೊಳ್ಳಲಿದ್ದು ಏಳು ದಿನಗಳ ಕಾಲ ಈ ವಿಶ್ವ ಜಂಬೂರಿ ನೆರವೇರಲಿದೆ ಇದು ಭಾರತ ದೇಶದಲ್ಲಿ ಪ್ರಪ್ರಥಮವಾಗಿ ಅದರಲ್ಲೂ ಕರ್ನಾಟಕದಲ್ಲಿ ನಡೆಯುತ್ತಿರುವುದು ನಮ್ಮೆಲ್ಲರ ಸೌಭಾಗ್ಯ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಜೊತೆಗೆ ಸ್ಕೌಟ್ ಅಂಡ್ ಗೈಡ್ಸ್ ಶಿಸ್ತುಬದ್ಧ ಜೀವನವನ್ನು ಕಲಿಸುತ್ತದೆ. ಎಂದು ನೋಡಿದ ಎಲ್ಲಾ ಮಕ್ಕಳಿಗೆ ಬೀಳ್ಕೊಡಿಗೆಯನ್ನು ಮಾಡಿ ಕಳಿಸಲಾಯಿತು ಈ ಕಾರ್ಯಕ್ರಮದಲ್ಲಿ ಜಿಲ್ಲಾ ಆಯುಕ್ತಾರಾದ ಕೆಪಿ ಬಿಂದು ಕುಮಾರ್. ಜಿ ವಿಜಯಕುಮಾರ್ ಚುಡಾಮಣಿ ಈ ಪವಾರ್ ಭಾರತಿ ಡಯಾಸ್ ವೈ ಆರ್ ವೀರೇಶಪ್ಪ ಶಕುಂತಲಾ ಚಂದ್ರಶೇಖರ್ ರಾಘವೇಂದ್ರ ಮಲ್ಲಿಕಾರ್ಜುನ್ ಕಾನೂರ್ ಕಾರ್ಯದರ್ಶಿ ಪರಮೇಶ್ವರ್ ದೀಪು ಹಾಗೂ ಶಿಕ್ಷಕರು ಸ್ಕೌಟ್ ಅಂಡ್ ಗೈಡ್ ಸೀನ ಅಧಿಕಾರಿಗಳು ಉಪಸ್ಥಿತರಿದ್ದರು.