ಶಿವಮೊಗ್ಗ: ವಿಶ್ವದಲ್ಲಿ ರೋಟರಿ ಸಂಸ್ಥೆಯ ಸಮಾಜಮುಖಿ ಸೇವೆ ಅನನ್ಯವಾಗಿದೆ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ರೋಟರಿ ಸಂಸ್ಥೆ ನಿರಂತರವಾಗಿ ತೊಡಗಿಸಿಕೊಂಡಿದೆ ಎಂದು ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್ ಹೇಳಿದರು.

ರೋಟರಿ ಕ್ಲಬ್ ಶಿವಮೊಗ್ಗ ಉತ್ತರದ ವತಿಯಿಂದ ಆಯೋಜಿಸಿದ್ದ ವಾರದ ಸಭೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ರೋಟರಿ ಅಂತರಾಷ್ಟ್ರೀಯ ಸಂಸ್ಥೆ ಆಗಿದ್ದು, ರೋಟರಿ ಸದಸ್ಯರು ಶಿಕ್ಷಣ, ಆರೋಗ್ಯ, ವೈದ್ಯಕೀಯ ಶಿಬಿರ, ಮಹಿಳಾ ಸಬಲೀಕರಣ ಹಾಗೂ ರೋಟರಿ ಫೌಂಡೇಶನ್ ಗ್ಲೋಬಲ್ ಗ್ರ್ಯಾಂಟ್ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಶಾಲಾ ಶೌಚಗೃಹ, ಹೈನುಗಾರಿಕೆ, ಕುಡಿಯುವ ನೀರು, ಸ್ಮಾರ್ಟ್ ಕ್ಲಾಸ್ ಹೀಗೆ ಅನೇಕ ಸೇವಾಕಾರ್ಯಗಳ ಮುಖಾಂತರ ಜನಮನ್ನಣೆ ಗಳಿಸಿದೆ ಎಂದು ತಿಳಿಸಿದರು.

ರೋಟರಿಯಲ್ಲಿ ಸದಸ್ಯರ ಪಾತ್ರ ಮುಖ್ಯ. ಒಳ್ಳೆಯ ಓಡನಾಟ, ಸ್ನೇಹ, ಸೇವೆಯನ್ನು ವಿಸ್ತರಿಸುವುದರ ಮೂಲಕ ಜನಸ್ನೇಹಿ ಆಗುವುದರೊಂದಿಗೆ ಆತ್ಮಸಂತೋಷ ದೊರಕುತ್ತದೆ. ಈ ಸಂದರ್ಭದಲ್ಲಿ ಅಧ್ಯಕ್ಷರ ಒಂದು ವರ್ಷದ ಅವಧಿಯಲ್ಲಿ ಅವರು ಸಮಾಜಕ್ಕೆ ಮಾಡಿದ ಸೇವೆಯನ್ನು ಸ್ಮರಿಸಿಕೊಂಡರು.
ರೋಟರಿ ಉತ್ತರದ ಅಧ್ಯಕ್ಷ ಸರ್ಜಾ ಜಗದೀಶ ಮಾತನಾಡಿ, ಸದಸ್ಯರು ಕ್ಲಬ್ ಆಸ್ತಿಯಾಗಿದ್ದು, ಇವರು ಕ್ಲಬ್ ನ ಎಲ್ಲಾ ಯೋಜನೆ, ಸಭೆ ಸಮಾರಂಭದಲ್ಲಿ, ಅಧಿವೇಶನ, ಅಸೆಂಬ್ಲಿಗಳಲ್ಲಿ, ವೇದಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಮುಂದಿನ ಲೀಡರ್ ಆಗಬೇಕು ಅಂತ ಹೇಳಿದರು. ನಂತರ ಸಭೆಯ ಮುಖ್ಯ ಅತಿಥಿಗಳಾದ ಜಿ.ವಿಜಯಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಈ ಸಮಾರಂಭದಲ್ಲಿ ಮಾಜಿ ಸಹಾಯಕ ಗವರ್ನರ್ ರವೀಂದ್ರನಾಥ ಐತಾಳ, ಮಾಜಿ ಅಧ್ಯಕ್ಷ ಪ್ರೊ. ಡಾ.ಶಿವಲಿಂಗಪ್ಪ, ಉಮೇಶ್, ಹಾಲಪ್ಪ, ಕಾರ್ಯದರ್ಶಿ ವೆಂಕಟೇಶ ಮತ್ತು ಇನ್ನರ್ ವೀಲ್ ಮಾಜಿ ಚೇರ‍್ಮನ್ ವಾರಿಜಾ ಹಾಗೂ ಇತರ ರೋಟರಿ ಸದಸ್ಯರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…