ಶಿವಮೊಗ್ಗ ಪ್ರತಿಷ್ಠಿತ ಸೊಸೈಟಿಯಾಗಳಲ್ಲಿ ಒಂದಾದ ಸಿಟಿ ಕೋ ಆಪರೇಟಿವ್ ಬ್ಯಾಂಕಿಗೆ ನೂತನ ಅಧ್ಯಕ್ಷರಾಗಿ ಶ್ರೀ ಎಸ್ ಕೆ ಮರಿಯಪ್ಪ ಹಾಗೂ ಖಜಾಂಚಿ ಯಾಗಿ ಶ್ರೀಮತಿ ರುಕ್ಮಿಣಿ ವೇದವ್ಯಾಸರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಿಟಿ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷರ ಹಾಗೂ ಖಜಾಂಚಿ ಚುನಾವಣೆಯನ್ನು ಶಿವಮೊಗ್ಗ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಚುನಾವಣಾ ಅಧಿಕಾರಿಗಳು ಚುನಾವಣೆ ನಡೆಸಿದರು. 2022 23ನೇ ಸಾಲಿಗೆ ನಡೆದ ಚುನಾವಣೆಯಲ್ಲಿ ಬ್ಯಾಂಕಿನ ಹಿರಿಯ ನಿರ್ದೇಶಕರು ಮಾಜಿ ಮಹಾಪೌರರಾದ ಶ್ರೀ ಎಸ್ ಕೆ ಮರಿಯಪ್ಪನವರು ಅಧ್ಯಕ್ಷರಾಗಿ ಹಾಗೂ ಹಿರಿಯ ಸಹಕಾರಿ ಶ್ರೀಮತಿ ರುಕ್ಮಿಣಿ ವೇದವ್ಯಾಸರವರು ಖಜಾಂಚಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಬ್ಬರಿಗೂ ಬ್ಯಾಂಕಿನ ಎಲ್ಲಾ ನಿರ್ದೇಶಕರು ಶುಭ ಹಾರೈಸಿ ಅಭಿನಂದಿಸಿದ್ದಾರೆ.