ಬೈಂದೂರು ವಿಧಾನಸಭಾ ಕ್ಷೇತ್ರದ ಪ್ರಗತಿ ಪರಿಶೀಲನ ಸಭೆ/ ಅಧಿಕಾರಗಳ ಸಭೆಯಲ್ಲಿಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ. ವೈ ರಾಘವೇಂದ್ರ ಅವರು ಭಾಗವಹಿಸಿ “ಸಾಕಷ್ಟು ಅನುದಾನವು ಈ ಕ್ಷೇತ್ರದ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರವು ನೀಡಿದೆ, ರೂ.1500 ಕೋಟಿ ಮೊತ್ತದ ವಿವಿಧ ಕಾಮಗಾರಿಗಳು ಶಂಕುಸ್ಥಾಪನೆ ಹಾಗೂ ಉದ್ಘಾಟನೆಯಾಗಿದ್ದು, ಈ ಕಾಮಗಾರಿಗಳ ಕೆಲಸವನ್ನುಶೀಘ್ರ ಪ್ರಾರಂಭಿಸಿ ಸಾರ್ವಜನಿಕರ ಉಪಯೋಗಕ್ಕೆ ಅನುವು ಮಾಡಿ ಕೊಡಬೇಕು”. ಎಂದು ಸೂಚಿಸಿದರು.
ಸಭೆಯ ಮುಖ್ಯ ಅಂಶಗಳು :-
1 ) ಬೈಂದೂರು ಕ್ಷೇತ್ರದ ಸರ್ಕಾರಿ ಸ್ಥಳಗಳಲ್ಲಿ 160 ಕ್ಕೂ ಹೆಚ್ಚು ದೇವಸ್ಥಾನ, 60ಕ್ಕೂ ಅಧಿಕ ನಾಗಬನಗಳಿದ್ದು ಇದನ್ನು ಧಾರ್ಮಿಕ ಕ್ಷೇತ್ರದ ಹೆಸರಿಗೆ ಮಂಜೂರು ಮಾಡಲು ಕ್ರಮ,
2 ) ಗೋಮಾಳ,ರುದ್ರಭೂಮಿ ಸ್ಥಳಗಳ ಗಡಿ ಗುರುತು ಮಾಡಿ ಉತ್ತುವರಿ ಮಾಡದಂತೆ ರಕ್ಷಿಸಿ ಅಭಿವೃದ್ಧಿಗೊಳಿಸುವುದು.
3) ಡಿಮ್ಡ್ ಅರಣ್ಯ ಪಟ್ಟಿಯಿಂದ ವಿರಹಿತಗೊಂಡ 94C
ಹಾಗೂ ಅಕ್ರಮ ಸಕ್ರಮ ಕಡತ ಒಂದು ತಿಂಗಳ ಒಳಗೆ ಮಂಜೂರು ಮಾಡಲು ಕ್ರಮವಹಿಸಬೇಕು.
4) ಕಾಲಸಂಕಗಳು ಮಂಜೂರು ಆಗಿದ್ದು ಒಂದು ವಾರದಲ್ಲಿ ಟೆಂಡರ್ ಪ್ರಕ್ರಿಯೆ ಗೊಳಿಸಲು ಸೂಚನೆ.
5) ಮಾದಕ ವಸ್ತು ಅಕ್ರಮ ಸರಾಯಿ ಮಾರಾಟ ಮಾಡುವವರನ್ನು ಕಾನೂನು ಕ್ರಮಕ್ಕೆ ಒಳಪಡಿಸುಬೇಕು.
6) ಬೈಂದೂರು ಕ್ಷೇತ್ರದ ಗ್ರಾಮೀಣ ಪ್ರದೇಶಗಳಿಗೆ 23 BSNL ಟವರ್_ಗಳು ಮಂಜುರಾತಿಯಾಗಿದ್ದು, ಶೀಘ್ರ ಸ್ಥಳ ಗುರುತು ಮಾಡಲು ಸೂಚನೆ ನೀಡಲಾಗಿದೆ.