ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಶಿವಮೊಗ್ಗ ನಗರದಲ್ಲಿ ಸುಗಮ ಸಂಚಾರ ಹಾಗೂ ಸಂಚಾರ ನಿಯಂತ್ರಣ ವ್ಯವಸ್ಥೆ ಕುರಿತು ಮಾನ್ಯ ಜಿಲ್ಲಾಧಿಕಾರಿಗಳು ಮತ್ತು ಮಾನ್ಯ ಪೊಲೀಸ್ ಅಧೀಕ್ಷಕರವರ ನೇತೃತ್ವದಲ್ಲಿ ಸಭೆ ನಡೆಯಿತು.

ಸದರಿ ಸಭೆಯಲ್ಲಿ ಸಾರ್ವಜನಿಕರು, ಮಾಧ್ಯಮ ಪ್ರತಿನಿಧಿಗಳು, ಮಹಾನಗರ ಪಾಲಿಕೆಯ ಚುನಾಯಿತ ಪ್ರತಿನಿಧಿಗಳು, ಶಾಲಾ ಬಸ್, ಖಾಸಗಿ ಬಸ್ ಮತ್ತು ಸಿಟಿ ಬಸ್ ಗಳ ಮಾಲೀಕರ, ಆಟೋ ಚಾಲಕರು ಮತ್ತು ಮಾಲೀಕರ, ಲಾರಿ ಮಾಲೀಕರ, ಆಂಬ್ಯುಲೆನ್ಸ್ ವಾಹನಗಳ ಮಾಲೀಕರ ಹಾಗೂ ಇತರೆ ಸಂಘ-ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿ ಶಿವಮೊಗ್ಗ ನಗರದ ಸಂಚಾರ ಸುಧಾರಣೆ ಕುರಿತಂತೆ ಸಲಹೆಗಳನ್ನು ಆಲಿಸಿ ಈ ಕೆಳಕಂಡ ಮಾಹಿತಿಯನ್ನು ನೀಡಲಾಯಿತು.

1) ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಭಾರಿ ವಾಹನಗಳ ಸಂಚಾರವನ್ನು ಬೇರೆ ಬೇರೆ ಸಮಯದಲ್ಲಿ ನಿಷೇಧಿಸಲಾಗಿದ್ದು ಇನ್ನು ಮುಂದೆ ಸಾರ್ವಜನಿಕರ ಅನುಕೂಲ ಮತ್ತು ಸಂಚಾರ ಹಿತದೃಷ್ಟಿಯಿಂದ ಬೆಳಗ್ಗೆ 8:00 ಗಂಟೆಯಿಂದ ಸಂಜೆ 8:00 ಗಂಟೆಯವರೆಗೆ ಭಾರೀ ವಾಹನಗಳು ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಸಂಚರಿಸುವುದನ್ನು ನಿಷೇಧಿಸಲು ಮತ್ತು ಈಗಾಗಲೇ ನಿಷೇದಿಸಿದ ಮಾರ್ಗಗಳೊಂದಿಗೆ ಹೊಸದಾಗಿ

ಎ) ಸಂದೇಶ್ ಮೋಟರಿಂದ ಅಶೋಕ ಸರ್ಕಲ್ ಮಾರ್ಗವಾಗಿ ಎಪಿಎಂಸಿ ವರೆಗೆ,

ಬಿ) ಮಹಾವೀರ ವೃತದಿಂದ ಕೆ ಬಿ ವೃತ್ತದ ವರೆಗೆ,

ಸಿ) ಮಹಾವೀರ ವೃತದಿಂದ ಶಿವಮೂರ್ತಿ ಸರ್ಕಲ್ ಮಾರ್ಗವಾಗಿ ಉಷಾ ಸರ್ಕಲ್ ವರೆಗೆ,

ಡಿ) ಕುವೆಂಪು ರಸ್ತೆ ನಂದಿ ಪೆಟ್ರೋಲ್ ಬಂಕ್ ನಿಂದ ವಿನೋಬನಗರ ಚೌಕಿ ವರೆಗೆ ಮತ್ತು

ಇ) ಇಮಾನ್ ಬಾಡದಿಂದ ಆರ್.ಎಸ್ ಪಾರ್ಕ್ ಮಾರ್ಗವಾಗಿ ಬೆಕ್ಕಿನಕಲ್ಮಟ್ಟ ಸರ್ಕಲ್ ವರೆಗೆ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲು ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, ಅಧಿಸೂಚನೆ ಬಂದ ನಂತರ ಭಾರೀ ವಾಹನಗಳು ಬೆಳಗ್ಗೆ 8:00 ಗಂಟೆಯಿಂದ ಸಂಜೆ 8:00 ಗಂಟೆಯ ಮದ್ಯ ಸಂಚಾರ ಮಾಡಿದ್ದಲ್ಲಿ, ವಾಹನಗಳನ್ನು ಅಮಾನತ್ತು ಪಡಿಸಿಕೊಂಡು, ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು.

2) ಬಿಹೆಚ್ ರಸ್ತೆ ಯಲ್ಲಿ ಶಾಲಾ ಕಾಲೇಜುಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕಾರಣ, ಬೆಳಗ್ಗೆ 08:00 ರಿಂದ 10:30 ರ ವರೆಗೆ, ಮಧ್ಯಾಹ್ನ 04:00 ರಿಂದ 06:00 ಗಂಟೆಯ ವರೆಗಗಿನ ಸಮಯದಲ್ಲಿ ಸಂಚಾರ ನಿಯಂತ್ರಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುವುದು ಮತ್ತು ಸಂಚಾರ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು.

3) ಪೋಷಕರು ದ್ವಿ ಚಕ್ರ ವಾಹನಗಳನ್ನು ಅಥವ ಕಾರ್ ಗಳನ್ನು ಅಪ್ರಾಪ್ತ ವಯಸ್ಸಿನ (18 ವರ್ಷದ ಒಳಗಿನ) ಮಕ್ಕಳಿಗೆ ಚಾಲನೆ ಮಾಡಲು ನೀಡಬಾರದು, ಒಂದು ವೇಳೆ ತಪಾಸಣೆಯ ಸಮಯದಲ್ಲಿ ಅಪ್ರಾಪ್ತ ವಯಸ್ಸಿನವರು ವಾಹನಗಳನ್ನು ಚಾಲನೆ ಮಾಡುವುದು ಕಂಡುಬಂದಲ್ಲಿ, ಅಂತಹ ಪೋಷಕರ/ವಾಹನಗಳ ಮಾಲೀಕರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು.

4) ಸಿಟಿ ಬಸ್ ಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುತ್ತಿದ್ದು, ಈ ಕುರಿತಂತೆ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಆಯ್ದ ಬಸ್ ನಿಲ್ದಾಣಗಳನ್ನು ಗುರುತಿಸಲಾಗಿದ್ದು ಅಧಿಸೂಚನೆಯನ್ನು ಹೊರಡಿಸಲಾಗುವುದು, ಆನಂತರ ಸಿಟಿ ಬಸ್ ಗಳನ್ನು ಗುರುತಿಸಿದ ನಿಲ್ದಾಣಗಳಲ್ಲದೆ ಬೇರೆ ಕಡೆಗಳಲ್ಲಿ ನಿಲ್ಲಿಸಿದ್ದಲ್ಲಿ ಅಂತಹ ಸಿಟಿ ಬಸ್ ಚಾಲಕ / ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

ಈ ಸಂದರ್ಭದಲ್ಲಿ RTO ಶಿವಮೊಗ್ಗ DySP ಶಿವಮೊಗ್ಗ ಉಪವಿಭಾಗ, ಸಿಪಿಐ ಮತ್ತು ಪಿಎಸ್ಐ ರವರು ಹಾಜರಿದ್ದರು.

ವರದಿ ಪ್ರಜಾಶಕ್ತಿ…