ಶಿವಮೊಗ್ಗ: ಶ್ರೀ ಶಿವಗಂಗಾ ಯೋಗಕೇಂದ್ರದಲ್ಲಿ ಗೌರವ ಯೋಗ ಶಿಕ್ಷಕರ ಉಚಿತ ಸೇವೆಯನ್ನು ಗುರುತಿಸಿ ವಾರಣಾಸಿಯ ಜಂಗಮವಾಡಿ ಮಠದ ಕಾಶಿ ಜಗದ್ಗುರು ಡಾ. ಶ್ರೀ ಚಂದ್ರಶೇಖರ ಶಿವಾಚಾರ್ಯ ಭಗವಾತ್ಪಾದರು ಆಶೀರ್ವದಿಸಿದರು.
ನಗರದ ಕಲ್ಲಳ್ಳಿಯಲ್ಲಿ ಇರುವ ಶ್ರೀ ಶಿವಗಂಗಾ ಯೋಗ ಕೇಂದ್ರದ ಅವ್ವ ಅಯ್ಯಾ ಬಯಲು ಚಾವಡಿ ಮಂಗಳ ವೇದಿಕೆಯಲ್ಲಿ ಕಾಶಿ ಜಗದ್ಗುರುಗಳ ದ್ವಾದಶ ದಿನಗಳ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಸಮಾರೋಪದಲ್ಲಿ ಶಿಕ್ಷಕರಿಗೆ ಆಶೀರ್ವದಿಸಿದರು.
ಅಥರ್ವ ಆಯುರ್ಧಾಮ ಮತ್ತು ಸಂಶೋಧನಾ ಸಂಸ್ಥೆಯ ಡಾ. ಮಲ್ಲಿಕಾರ್ಜುನ ಡಂಬಳ ಅವರು ಗುರುಗಳಾದ ಪೂಜ್ಯನೀಯ ಡಾ. ಎಂ.ಈಶ್ವರ್ ರೆಡ್ಡಿ ಅವರ 73ನೇ ಜನ್ಮ ಮಹೋತ್ಸವ ಪ್ರಯುಕ್ತ ಶ್ರೀಮದ್ ಕಾಶಿ ಸಿಂಹಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ವಿದ್ಯಾವಾಚಸ್ಪತಿ, ಡಾ. ಚಂದ್ರಶೇಖರ ಶಿವಾಚಾರ್ಯ ಭಗತ್ಪಾದರು, ಕಾಶಿ ಪರಮಪೂಜ್ಯರಿಂದ ಆರೋಗ್ಯ ಮತ್ತು ಪಂಚಾಚಾರ್ಯ ಪಂಚ ಸೂತ್ರಗಳು ಕುರಿತು ದ್ವಾದಶ ದಿನಗಳ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ ಏರ್ಪಡಿಸಿದ್ದರು.
ಸಮಾರೋಪ ಕಾರ್ಯಕ್ರಮದಲ್ಲಿ ಶ್ರೀ ಶಿವಗಂಗಾ ಯೋಗ ಕೇಂದ್ರದಲ್ಲಿ ಗೌರವ ಯೋಗ ಶಿಕ್ಷಕರ ಉಚಿತ ಸೇವೆಯನ್ನು ಗುರುತಿಸಿ ಕಾಶಿ ಪರಮ ಪೂಜ್ಯರು ಆಶೀರ್ವದಿಸಿ ಗೌರವಿಸಿದರು. ಯೋಗಾಚಾರ್ಯ ಡಾ. ಸಿ.ವಿ.ರುದ್ರಾರಾಧ್ಯ ಅವರನ್ನು ಕುರಿತು ಯೋಗದ ಮೂಲಕ ಸಮಾಜಮುಖಿ ಸೇವಾ ಕಾರ್ಯಗಳನ್ನು ಸಲ್ಲಿಸುತ್ತಿದ್ದಾರೆ. ಯೋಗ ಕೇಂದ್ರವನ್ನು ಧರ್ಮ ಕೇಂದ್ರವನ್ನಾಗಿ ಮಾಡಿ ಮಹಾನಿಧಿ ರುದ್ರಾರಾಧ್ಯ ಆಗಿದ್ದಾರೆ ಎಂದು ತಿಳಿಸಿದರು.
ಯೋಗಾಚಾರ್ಯ ಸಿ.ವಿ.ರುದ್ರಾರಾಧ್ಯ, ಯೋಗ ಶಿಕ್ಷಕಕರಾದ ಜಿ.ಎಸ್.ಓಂಕಾರ್, ಹರೀಶ್.ಹೆಚ್.ಕೆ, ಕಾಟನ್ ಜಗದೀಶ್, ಜಿ.ವಿಜಯಕುಮಾರ್, ವಿಜಯ ಬಾಯರ್, ಲವಕುಮಾರ್, ಬಸವರಾಜ್ ಹಾಗೂ ಯೋಗ ಶಿಕ್ಷಕರು ಉಪಸ್ಥಿತರಿದ್ದರು.