ಡಿಕೆ ಶಿವಕುಮಾರ್ ಮೇಲೆ ವಿನಾಕಾರಣ ಆರೋಪ ಕೆಪಿಸಿಸಿ ತೀವ್ರ ಖಂಡನೆ ಇತ್ತೀಚೆಗೆ ಮಂಡ್ಯ ಖಾಸಗಿ ನರ್ಸಿಂಗ್ ಹೋಮ್ ನಲ್ಲಿ ಮಾಜಿ ಸಂಸದ ಹಾಗೂ ಹೋರಾಟಗಾರರಾದ ಜಿ ಮಾದೇಗೌಡ ಆರೋಗ್ಯ ವಿಚಾರಿಸಿ ಹೊರಬರುತ್ತಿದ್ದಾಗ ವ್ಯಕ್ತಿಯೋರ್ವರು ಕೆ ಪಿ ಸಿ ಸಿ ಅಧ್ಯಕ್ಷರ ಬೆನ್ನಮೇಲೆ ಕೈ ಹಾಕಿದಾಗ ಡಿ .ಕೆ ಶಿವಕುಮಾರ್ ಅವರು ಮಾಧ್ಯಮ ಹಾಗೂ ಆಗುವ ಜನರ ಮುಂದೆ ಈ ರೀತಿ ಕೈ ಹಾಕಬೇಡ ಎಂದು ತಲೆಮೇಲೆ ಸ್ನೇಹಪೂರ್ವಕವಾಗಿ ಏಟು ಕೊಟ್ಟು ಈ ರೀತಿ ಮಾಡಬೇಡ ಎಂದು ಬುದ್ಧಿ ಹೇಳಿದರು ಇದು ಇವರ ಕಾರ್ಯಕರ್ತರು ಮತ್ತು ನಾಯಕರ ಮಧ್ಯೆ ಇರುವ ಸ್ನೇಹ ಸಂಬಂಧಗಳು ಸಾಮಾನ್ಯ ಆದರೆ ಇದನ್ನೇ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ನಾಯಕರು ವಿನಾಕಾರಣ ವಿವಿಧ ಭಾಷೆಗಳೊಂದಿಗೆ ಅವರನ್ನು ತೇಜೋವಧೆ ಮಾಡುವ ಮೂಲಕ ಅವರ ಘನತೆಗೆ ಧಕ್ಕೆ ಉಂಟು ಮಾಡುವ ಕೆಲಸ ಮಾಡುತ್ತಿದ್ದಾರೆ ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮತ್ತು ಸಚಿವರು ಸನ್ಮಾನ್ಯ ಶ್ರೀ ಡಿ ಕೆ ಶಿವಕುಮಾರ್ ಅವರ ಮೇಲೆ ಮನಸೋ ಇಚ್ಛೆ ಮಾಡುತ್ತಿದ್ದು ವಿನಾಕಾರಣ ಇಲ್ಲಸಲ್ಲದ ಆರೋಪವನ್ನು ಮಾಡುತ್ತಿದ್ದಾರೆ ಇಂಥ ಆ ಆರೋಪವನ್ನು ಕಾಂಗ್ರೆಸ್ ಪಕ್ಷವನ್ನು ಸಹಿಸುವುದಿಲ್ಲ ಕಾಂಗ್ರೆಸ್ ಪಕ್ಷ ಹಾಗೂ ಪಕ್ಷದ ಬಗ್ಗೆ ಜೀವಕ್ಕೆ ಜೀವಕೊಟ್ಟು ಕಾಪಾಡುವ ದಿನದ 18 ಗಂಟೆಗಳ ಕಾಲ ಪಕ್ಷದ ಮತ್ತು ಸಾರ್ವಜನಿಕರ ಬದುಕಿನಲ್ಲಿ ಉತ್ತಮ ಕಾರ್ಯನಿರ್ವಹಿಸುವ ನಮ್ಮ ಕಾಂಗ್ರೆಸ್ ಮುಖಂಡರಾದ ಡಿ ಕೆ ಶಿವಕುಮಾರ್ ಅವರು ಕೆಲವೊಂದು ವೇಳೆ ಕಾರ್ಯಕರ್ತರು ಮೈಮೇಲೆ ಬಿದ್ದು ರಂಪಾಟ ಮಾಡಿದರು ಬುದ್ಧಿ ಹೇಳಿ ಕಳುಹಿಸುತ್ತಿದ್ದರು ಇದು ಅತಿಯಾದಾಗ ಸ್ಥಳದಲ್ಲಿಯೇ ಏಟು ಕೊಟ್ಟು ನಂತರ ಅವರ ರಾಜಕೀಯ ಚಟುವಟಿಕೆ ಬಗ್ಗೆ ಆಶೀರ್ವಾದ ಮಾಡುವಂತೆ ಡಿಕೆ ಶಿವಕುಮಾರ್ ಅವರು ನಮ್ಮ ಕಾಂಗ್ರೆಸ್ ಪಕ್ಷದ ಕುಟುಂಬದ ಯಜಮಾನ ಇತ್ತಂತೆ ಕುಟುಂಬದ ಸದಸ್ಯರು ತಪ್ಪು ಮಾಡಿದಾಗ ಅಥವಾ ಅಭಿಯಾನ ಅತಿರೇಕ ಆದಾಗ ದಂಡಿಸುವ ಹಕ್ಕು ಮನೆಯ ಯಜಮಾನಿ ನನಿಗೆ ಇರುತ್ತದೆ ನಂತರ ಸದಸ್ಯರ ಆರೋಗ್ಯದ ಮತ್ತು ಜೀವನದ ಬಗ್ಗೆ ಕಾಳಜಿವಹಿಸುವ ಹಕ್ಕು ಕೂಡ ಅವರಿಗೆ ಇರುತ್ತದೆ ಇದು ನಮ್ಮ ಕುಟುಂಬದ ಸದಸ್ಯರ ಪ್ರೀತಿ ವಿಶ್ವಾಸ ಸಣ್ಣಪುಟ್ಟ ಕಲಹಗಳು ಇರುತ್ತವೆ ಆದರೆ ಇದನ್ನೇ ನೆಪವಾಗಿಟ್ಟುಕೊಂಡು ಬಿಜೆಪಿ ಮುಖಂಡರುಗಳು ಕೆಪಿಸಿಸಿ ಅಧ್ಯಕ್ಷರ ಬಗ್ಗೆ ಬಹಳ ದೊಡ್ಡ ತಪ್ಪು ಮಾಡಿಬಿಟ್ಟೆವೇನೋ ಎಂಬಂತೆ ಮಾಧ್ಯಮಗಳಲ್ಲಿ ಪ್ರಚಾರ ಪಡಿಸಿ ಹಾಸ್ಯಾಸ್ಪದ ಏಕೆಂದರೆ ನಿಮ್ಮ ಪಕ್ಷದಿಂದ ರಾಜ್ಯಾದ್ಯಂತ ಸಚಿವಸಂಪುಟ ಕೊಲೆಗಡುಕರು ಅತ್ಯಾಚಾರಿಗಳು ಭ್ರಷ್ಟಾಚಾರ ರೇಖೆಗಳಿಂದ ತುಂಬಿದ್ದಾರೆ.ರಾಜ್ಯದ ಹಲವಾರು ಬಿಜೆಪಿ ಶಾಸಕರು ಹಲವಾರು ವಿವಿಧ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ .ಹಾಲಿ ರಮೇಶ ಜಾರಕಿಹೊಳಿ ಅಂತಹ ಮಾಜಿ ಸಚಿವರ ರಾಸಲೀಲೆ ಪ್ರಕರಣದಲ್ಲಿ ಭಾಗಿಯಾಗಿದ್ದವನಿಗೆ.ಮತ್ತೆ ಸಚಿವ ಸಂಪುಟದಲ್ಲಿ ಸೇರ್ಪಡೆಗೊಳಿಸಲು ಹಿಂಬದಿ ಯತ್ನ ನಡೆಯುತ್ತಿದೆ ಸರ್ಕಾರಿ ಸಚಿವ ಸಂಪುಟದಲ್ಲಿ ಹೊಂದಾಣಿಕೆಯಿಲ್ಲದೆ ರಾಜ್ಯಪಾಲರಿಗೆ ಮುಖ್ಯಮಂತ್ರಿಗಳ ಬಗ್ಗೆ ಪತ್ರ ಬರೆಯುವ ಮೂಲಕ ಮುಖ್ಯಮಂತ್ರಿಗಳ ಮಾನ ಹರಾಜು ಆಗುತ್ತಿದ್ದೀರಿ ,ಅವರ ಶಾಸಕಾಂಗದಲ್ಲಿ ವಿಶ್ವನಾಥ್ ಮತ್ತು ಬಸವರಾಜ್ ಪಾಟೀಲ್ ಯತ್ನಾಳ್ ಮತ್ತು ಸಚಿವ ಯೋಗೀಶ್ವರ್ ಮುಖ್ಯಮಂತ್ರಿ ಯಡಿಯೂರಪ್ಪ ಮಕ್ಕಳ ಬಗ್ಗೆ ದಿನಕ್ಕೆ ನೂರಾರು ಕೋಟಿ ಹಣ ಲೂಟಿ ಹೊಡೆಯುತ್ತಿದ್ದಾರೆ ಎಂದು ನೇರವಾಗಿ ಆರೋಪ ಮಾಡುತ್ತಿದ್ದಾರೆ .
ಸದನದಲ್ಲಿ ನೀಲಿ ಚಿತ್ರ ವೀಕ್ಷಿಸಿದ ಸೋತು ಸುಣ್ಣವಾದ ಅವರಿಗೆ ಉಪ ಮುಖ್ಯಮಂತ್ರಿ ಪದವಿ ಕೊಟ್ಟಿದ್ದೀರಿ. ಇಂಥ ಹಲವಾರು ನ್ಯೂನತೆಗಳು ತಮ್ಮ ಪಕ್ಕದಲ್ಲೇ ಇದ್ದರೂ ಕೂಡ ಅದರ ಬಗ್ಗೆ ಪ್ರಶ್ನೆ ಮಾಡದೆ ನೀವು ನಿಮ್ಮ ಅಂಗಳದಲ್ಲಿ ಕತ್ತೆ ಸತ್ತು ಬಿದ್ದಿದೆ ಅದನ್ನು ಮೊದಲು ತೆಗೆಯಿರಿ ಆಮೇಲೆ ನಮ್ಮ ತಟ್ಟೆಯಲ್ಲಿರುವ ನೊಣದ ಓಡಿಸಲು ಬನ್ನಿ , ಕಾಂಗ್ರೆಸ್ ಡಿ ಕೆ ಶಿವಕುಮಾರ್ ಹಾಗೂ ಇತರ ಪ್ರಮುಖ ನಾಯಕರ ಮೇಲೆ ಕೆಲವು ಹುಚ್ಚರಂತೆ ಆರೋಪ ಮಾಡಿ ಮಾಧ್ಯಮದಲ್ಲಿ ಬಂದರೆ ಸರ್ಕಾರದಿಂದ ಸಚಿವ ಹಾಗೂ ನಾಮನಿರ್ದೇಶನ ಮಂಡಳಿ ಅಧ್ಯಕ್ಷರಾಗಬಹುದು ಎಂಬ ದುರಾಲೋಚನೆಯಿಂದ ಈ ರೀತಿ ಹೇಳಿಕೆ ಕೊಡುವುದು ಸರಿಯಲ್ಲ ನಿಮಗೇನಾದರೂ ಸಾರ್ವಜನಿಕರ ಬದುಕಿನಲ್ಲಿ ಸಮಾಜ ಕಟ್ಟುವಲ್ಲಿ ಕಾಳಜಿ ಇದ್ದರೆ ಮೊದಲು ನಿಮ್ಮ ಪಕ್ಷದಲ್ಲಿ ಇರುವ ಅತ್ಯಾಚಾರಿಗಳನ್ನು ಭ್ರಷ್ಟಾಚಾರಿಗಳು ಹಾಗೂ ಕಾಮುಕರ ಬಗ್ಗೆ ಧ್ವನಿ ಎತ್ತಿ .ಇದೇ ರೀತಿ ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಮೇಲೆ ವಿನಾಕಾರಣ ಆರೋಪ ಮಾಡಿದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಚಿವರ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರ ತೀವ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಕವಿತ ರಾಘವೇಂದ್ರ ಅಧ್ಯಕ್ಷರು ಜಿಲ್ಲಾ I.N.T.U.C ಮಹಿಳಾ ವಿಭಾಗ , ನಿಹಾಲ್ ಸಿಂಗ್ ವಿದ್ಯಾರ್ಥಿ ಕಾಂಗ್ರೆಸ್ ಮುಖಂಡರು , ಅರ್ಜುನ್ , ನಿಷಾರ್ ಅಹಮದ್ , ಬಿ .ಸಿ ರಾಘವೇಂದ್ರ ಉಪಸ್ಥಿತರಿದ್ದರು
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153