ಕರ್ನಾಟಕ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಆಯಾ ಜಾತಿಗೆ ಅನುಗುಣವಾಗಿ ನಿಗಮ ಮಂಡಳಿಗಳನ್ನು ಸ್ಥಾಪಿಸಿ ದುರ್ಬಲ ವರ್ಗದವರ ಅಭಿವೃದ್ಧಿಗಾಗಿ ಬಜೆಟ್ ನಲ್ಲಿ ಪ್ರತ್ಯೇಕವಾಗಿ ಎಸ್ ಸಿ ಪಿ/ ಟಿ ಎಸ್ ಪಿ ಅಡಿಯಲ್ಲಿ ವಾರ್ಷಿಕ 26 ಸಾವಿರ ಕೋಟಿ ರುಪಾಯಿಗಳನ್ನು ಮೀಸಲಿರಿಸಲಾಗಿದೆ. ಎಂದು ಹೇಳುವ ಮಾನ್ಯ ಮುಖ್ಯಮಂತ್ರಿಗಳು ತಮ್ಮದೇ ಸ್ವ ಕ್ಷೇತ್ರವಾದ ಶಿವಮೊಗ್ಗದಲ್ಲಿ ಎಸ್ ಸಿ ಪಿ/ ಟಿ ಎಸ್ ಪಿ ಯ 2019-2020 ನೇ ಸಾಲಿನ ಹಣವನ್ನು ಕಾರ್ಯಪಾಲಕ ಇಂಜಿನಿಯರಿಂಗ್ (ಕ.ನೀ.ನಿ.ನಿ)ನ೦ 04 ಉಪವಿಭಾಗ ,ತುಂಗಾ ಅಣೆಕಟ್ಟು , ಶಿವಮೊಗ್ಗ ಇವರು ಕೃಷಿಗೆ ಸಂಬಂಧಿತ ಯೋಜನೆಗೆ ಮೀಸಲು ಇರಿಸಿದ್ದ ಮೀಸಲಿರಿಸಲಾಗಿದ್ದ ಸುಮಾರು 1 ಕೋಟಿ 50 ಲಕ್ಷ ರೂಪಾಯಿಗಳನ್ನು ಶಿವಮೊಗ್ಗ ನಗರದ ವಾರ್ಡ್ ನಂ. 34,(ಹಳೆಯ ವಾರ್ಡ್ -16) ಊರುಗಡೂರು ಸರ್ವೇ ನಂಬರ್ 73,74,72,72 ಗೆ ಅವನು ಬಡತನದಲ್ಲಿರುವ ತಳ ಸೇರಿದ ವಿದ್ಯಾನಗರದ ಹಿಂಭಾಗದಲ್ಲಿ ನಿರ್ಮಿಸಿರುವ “ಪ್ರಿಯಾಂಕಾ ಬಡಾವಣೆ” ಎಂಬ ಖಾಸಗಿ ಲೇಔಟ್ ಗೆ ರಸ್ತೆ ಮತ್ತು ಚರಂಡಿ ಕಾಮಗಾರಿಯ ಅಭಿವದ್ಧಿಗೆ ಬಳಸಿರುವುದು ಈ ರಾಜ್ಯದ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಜನರಿಗೆ ಮಾಡಿದ ದೊಡ್ಡ ಮೋಸವಾಗಿದೆ. ಸರ್ಕಾರಿ ಮಾರ್ಗ ಸೂಚಿಯಂತೆ ಶೇಕಡಾ 40% ಎಸ್ ಸಿ /ಎಸ್ ಟಿ ಜಾತಿಯವರು ವಾಸವಾಗಿರೋ ಬಡಾವಣೆಗಳಲ್ಲಿ ಈ ಅನುದಾನದ ಹಣವನ್ನು ಅಭಿವೃದ್ಧಿ ಕಾಮಗಾರಿಗಾಗಿ ಖರ್ಚು ಮಾಡಬಹುದು.ಶಿವಮೊಗ್ಗ ನಗರದಲ್ಲಿ ಪ.ಜಾ.ಪ.ಪಂ. ರವರು ಹೆಚ್ಚು ವಾಸವಾಗಿರುವ ಸ್ಲಮ್ ಗಳು/ ಕೇರಿ/ ಬಡಾವಣೆಗಳು ಇದ್ದರೂ ಸಹ ಅಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಈ ಹಣವನ್ನು ಬಳಸದೆ ಅಷ್ಟಾಗಿ ದಲಿತರು ವಾಸವಾಗಿರದ ಈ ಖಾಸಗಿ ಬಡಾವಣೆಯ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಎಸ್ ಸಿ ಪಿ/ ಟಿ ಎಸ್ ಪಿ ಹಣವನ್ನು ಬಳಸಲು ಕಾರಣವಾಗಿರುವ ಹಾಗೂ ಇದೆ ಬಡಾವಣೆಯಲ್ಲಿರುವ ತಮ್ಮ ಸಂಬಂಧಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸ್ವಜನಾಪಕ್ಷಪಾತಿತನ ತೋರಿದ ರುದ್ರೇಗೌಡರು ಎಂ.ಎಲ್.ಸಿ. ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಹಾಗೂ ಉದ್ದೇಶಪೂರ್ವಕವಾಗಿಯೇ ಖಾಸಗಿ ಲೇ ಔಟ್ ಗೆ ಎಸ್. ಸಿ.ಪಿ /ಟಿ. ಎಸ್. ಪಿ ದಲಿತರ ಹಣವನ್ನು ಬಳಸಿದ ಕಾರ್ಯಪಾಲಕ ಅಭಿಯಂತರರು ಮತ್ತು ಸಹಾಯಕ ಕಾರ್ಯಪಾಲಕ ಅಭಿಯಂತರರು.ಎ ಈ ಈ ತುಂಗಾ ಅಣೆಕಟ್ಟು ಉಪವಿಭಾಗ-4 ಶಿವಮೊಗ್ಗ ಇವರನ್ನು ಅಮಾನತ್ತು ಗೊಳಿಸಿ ಅಟ್ರಾಸಿಟಿ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಬೇಕು ಹಾಗೂ ಶಿವಮೊಗ್ಗ ಜಿಲ್ಲೆಯ ಎಲ್ಲಾ ಇಲಾಖೆಗಳಲ್ಲಿ SCP/TSP ಹಣ ದುರ್ಬಳಕೆಯಾಗಿರುವ ಸಾಧ್ಯತೆಗಳು ಇರುವುದರಿಂದ ಹಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಈ ಮೂಲಕ ಸಮಿತಿಯು ಒತ್ತಾಯಿಸುತ್ತದೆ.
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153