2021 ಮತ್ತು 2022 ನೆ ಶೈಕ್ಷಣಿಕ ವರ್ಷದಲ್ಲಿ ಶಾಲೆ ಆರಂಭಗೊಂಡಿದ್ದು ಶಿವಮೊಗ್ಗ ನಗರದ ಮಂದಾರ ಶಾಲೆಯಲ್ಲಿ ಮಗು 5 ತರಗತಿ ಮುಗಿಸಿದ್ದು ಅವರ ಮನೆ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಕಾರಣ ಶಿವಮೊಗ್ಗ ನಗರದ ದುರ್ಗಿಗುಡಿ ಸರ್ಕಾರಿ ಶಾಲೆಗೆ ಸೇರಿಸಲಾಗಿದ್ದು ಆದುದರಿಂದ ಮಂದಾರ ಶಾಲೆಯ ಆಡಳಿತ ಮಂಡಳಿಯ ಬಳಿ ಹೋಗಿ ನಮ್ಮ ಮಗುವಿನ ಟಿ ಸಿ ಕೊಡಿ ಎಂದು ಕೇಳಲು ಹೋದರೆ ಆ ಶಾಲೆಯ ಆಡಳಿತ ಮಂಡಳಿ ಜೈ ಶ್ರೀ ಶೆಟ್ಟಿ ಅವರು ಮಗುವಿನ ಪೋಷಕರಿಗೆ ನಮ್ಮ ಶಾಲೆಯ ಪೂರ್ಣ ಶುಲ್ಕವನ್ನು ಕಟ್ಟಿದರೆ ಮಾತ್ರ ಕಟ್ಟಿಸಿ ಕೊಡುವುದಾಗಿ ಹೇಳುತ್ತಿದ್ದಾರೆ ಪೋಷಕರು ಕೊರೋನಾ ಕೋವಿಡ ಇರುವುದರಿಂದ ಸರ್ಕಾರ 70% ರಷ್ಟು ಶುಲ್ಕ ಕಟ್ಟಿ ಎಂದು ಸರ್ಕಾರ ಘೋಷಣೆ ಮಾಡಿದ್ದರೂ ಇದನ್ನು ನಾವು ಶಾಲೆಯ ಆಡಳಿತ ಮಂಡಳಿಗೆ ಹೇಳಿದರೆ ಅದೆಲ್ಲ ನಮಗೆ ಗೊತ್ತಿಲ್ಲ ಯಾವ ಸರ್ಕಾರ ಏನು ಘೋಷಣೆ ಮಾಡಿದರೂ ನಮಗೆ ಗೊತ್ತಿಲ್ಲ ಶಿವಮೊಗ್ಗ ಶಿಕ್ಷಣ ಕ್ಷೇತ್ರ ಅಧಿಕಾರಿಗಳು ಹೇಳಿದರು ನಮಗೆ ಗೊತ್ತಿಲ್ಲ ನಾವು ಶಾಲೆಯ ಆಡಳಿತ ಮಂಡಳಿ ಏನು ಶುಲ್ಕ ಕಟ್ಟಿ ಎಂದು ಹೇಳುತ್ತಿದ್ದೇವೆ ಅಷ್ಟೆ ಕಟ್ಟಬೇಕೆಂದು ಪೋಷಕರಿಗೆ ದೌರ್ಜನ್ಯ ಮಾಡುತ್ತಿದ್ದಾರೆ ನಮಗೆ ಯಾರೂ ಏನೂ ಮಾಡುವುದಕ್ಕೆ ಆಗುವುದಿಲ್ಲ ಎಂದು ಹೇಳುತ್ತಿದ್ದಾರೆ ಆದುದರಿಂದ ಜಿಲ್ಲಾಧಿಕಾರಿಗಳಿಗೆ ಕೇಳಿಕೊಳ್ಳುವುದೇನಂದರೆ ನಮ್ಮ ಮಗುವಿನ ಟಿ. ಸಿ ಯನ್ನು ಕೊಡಬೇಕೆಂದು ಕೇಳಿಕೊಳ್ಳುತ್ತೇವೆ ಮತ್ತು ಮಂದಾರ ಶಾಲೆಯ ಆಡಳಿತ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೇಳಿಕೊಳ್ಳುತ್ತೇವೆ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153