ಮಲವಗೊಪ್ಪ ಕೆರೆಗೆ ಹಾಗೂ ಸ್ಮಶಾನಕ್ಕೆ ಹೋಗುವ ರಸ್ತೆ ಕಾಮಗಾರಿ ವಿಚಾರದಲ್ಲಿ ಮಹಾಪೌರರು ಹಾಗೂ ಬಿ.ಜೆ.ಪಿ.ಯ ಮುಖಂಡರಿಂದ ಸ್ಥಳಿಯ ಪಾಲಿಕೆ ಸದಸ್ಯರ ವಿರುದ್ದ ಸುಳ್ಳು ಆರೋಪ – ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕರ ನೇತ್ರತ್ವದಲ್ಲಿ ಕಾಂಗ್ರೆಸ್ ಪಾಲಿಕೆ ಸದಸ್ಯರು ಕಾಮಗಾರಿ ಸ್ಥಳಕ್ಕೆ ಭೇಟಿ ಸ್ಥಳಿಯ ನಿವಾಸಿಗಳಿಂದ ಸತ್ಯ ಸತ್ಯತೆ ಮಾಹಿತಿ ಪಡೆದರು.
ಶಿವಮೊಗ್ಗ ನಗರದ ವಾರ್ಡ್ ನಂ: 16 ರ ಮಲವಗೊಪ್ಪ ವಾರ್ಡಿನ ನಾಗರೀಕರು ಹಲವಾರು ವರ್ಷಗಳಿಂದ ಮಲವಗೊಪ್ಪ ಕೆರೆ ಹಾಗೂ ಸ್ಮಶಾನಕ್ಕೆ ಹಾದೂ ಹೋಗುವ ರಸ್ತೆಯನ್ನು ಡಾಂಬರೀಕರಣ ಮಾಡಿಸಬೇಕೆಂದು ಬೇಡಿಕೆಯ ಮನವಿಯಂತೆ ಸ್ಥಳಿಯ ಮಹಾನಗರ ಪಾಲಿಕೆ ಸದಸ್ಯರಾದ ಆರ್.ಸಿ.ನಾಯ್ಕ್ ರವರು ವಾರ್ಡ್ ಅಭಿವೃದ್ದಿ ಯೋಜನೆಯಲ್ಲಿ 2022-2023 ನೇ ಸಾಲಿನ 15 ನೇ ಹಣಕಾಸು ಆಯೋಗದ ಸಾಮಾನ್ಯ ಮೂಲ ಅನುದಾನದಲ್ಲಿ ಮಲವಗೊಪ್ಪ ಕೆರೆ ಮತ್ತು ಸ್ಮಶಾನಕ್ಕೆ ಹಾದೂ ಹೋಗುವ ರಸ್ತೆಯ ಡಾಂಬರೀಕರಣ ಕಾಮಗರಿಗೆ ಚಾಲನೆ ನೀಡಿ ಕಾಮಗಾರಿ ಕೆಲಸವು ನಡೆಯುತ್ತಿದ್ದ ಸಂದರ್ಭದಲ್ಲಿ ಕೆಲ ವಾರ್ಡಿನ ಬಿ.ಜೆ.ಪಿ ಪಕ್ಷದ ಪ್ರಮುಖರು ಮಹಾನಗರ ಪಾಲಿಕೆಯ ಮಹಾಪೌರರು ಹಾಗೂ ಆಯುಕ್ತರಿಗೆ ಸುಳ್ಳು ಮಾಹಿತಿಯನ್ನು ನೀಡಿ, ಮಹಾನಗರ ಪಾಲಿಕೆಯಲ್ಲಿ ಆಡಳಿತ ನಡೆಸುತ್ತಿರುವ ಬಿ.ಜೆ.ಪಿ ಯ ಕೆಲ ಜನ ಪ್ರತಿನಿಧಿಗಳು ತಾರತೂರಿಯಲ್ಲಿ ಅಭಿವೃದ್ದಿ ವಿಚಾರದಲ್ಲೂ ದ್ವೇಷ ರಾಜಕರಣವನ್ನ ಮಾಡುತ್ತಿದ್ದು ಮಹಾಪೌರರನ್ನು ಹಾಗೂ ಸಂಬಂಧ ಪಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ ಕಾಮಗಾರಿಯನ್ನು ಸ್ತಗಿತಗೊಳಿಸಿ ವಾರ್ಡಿನ ಕಾಂಗ್ರೆಸ್ ಪಾಲಿಕೆ ಸದಸ್ಯರಾದಂತಹ ಆರ್.ಸಿ.ನಾಯ್ಕ್ ರವರ ವಿರುದ್ದ ಸುಳ್ಳು ಆರೋಪಗಳನ್ನು ಪತ್ರಿಕೆಗಳಲ್ಲಿ ಹೇಳಿಕೆ ನೀಡುವ ಮುಖಾಂತರ ವಾರ್ಡಿನ ಜನರ ಬೇಡಿಕೆಯಂತೆ ರಸ್ತೆ ಅಭಿವೃದ್ದಿ ಕಾಮಗಾರಿಯನ್ನು ನಡೆಸುತ್ತಿರುವ ಸ್ಥಳಿಯ ಪಾಲಿಕೆ ಸದಸ್ಯರ ವಿರುದ್ದ ಅಪಪ್ರಚಾರ ಮಾಡುತ್ತಿರುವ ಬಿ.ಜೆ.ಪಿ ಆಡಳಿತದ ನಡೆಯನ್ನು ಕಾಂಗ್ರೆಸ್ ಪಕ್ಷದ ಎಲ್ಲಾ ಪಾಲಿಕೆ ಸದಸ್ಯರು ಖಂಡಿಸಿದರು.
ಖುದ್ದು ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ ರವರ ನೇತ್ರತ್ವದಲ್ಲಿ ಎಲ್ಲಾ ಕಾಂಗ್ರೆಸ್ ಪಾಲಿಕೆ ಸದಸ್ಯರು ಮಲವಗೊಪ್ಪ ಕೆರೆ ಹಾಗೂ ಸ್ಮಶಾನಕ್ಕೆ ಹಾದೂ ಹೋಗುವ ರಸ್ತೆಯ ಕಾಮಗಾರಿಯ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ ಸ್ಥಳಿಯ ನಾಗರೀಕರೊಂದಿಗೆ ಚರ್ಚಿಸಿ ಮಾಹಿತಿಯನ್ನು ಪಡೆಯುವ ಸಂದರ್ಭದಲ್ಲಿ ಸ್ಥಳಿಯ ನಾಗರೀಕರು ಮಾತನಾಡಿ ಈಗಾಗಲೇ ಮಲವಗೊಪ್ಪ ವಾರ್ಡಿನಲ್ಲಿ ಹಾದೂ ಹೋಗುವ ಬಿ.ಹೆಚ್.ರಸ್ತೆ ಅಗಲೀಕರಣವಾಗುತ್ತಿರುವುದರಿಂದ ಜೊತೆಗೆ ಈ ರಸ್ತೆಯೂ ಹೈವೆ ರಸ್ತೆಯಾಗಿದ್ದು ವಾಹನ ಸಂಚಾರ ದಟ್ಟಣೆಯಾಗಿರುವುದರಿಂದ ಮಲವಗೊಪ್ಪ ಕೆರೆಗೆ ಹಾದೂ ಹೋಗುವ ರಸ್ತೆಯಲ್ಲಿಯೇ ಗ್ರಾಮದಲ್ಲಿ ಮರಣ ಹೊಂದಿದ ಶವಗಳನ್ನು ಸ್ಮಶಾನಕ್ಕೆ ಇದೇ ಮಾರ್ಗವಾಗಿ ಕೊಂಡೊಯ್ತಾ ಬಂದಿದ್ದು ನಮ್ಮೆಲ್ಲಾ ನಾಗರೀಕರ ಹಲವು ವರ್ಷಗಳ ಮನವಿಯಂತೆ ರಸ್ತೆ ಡಾಂಬರೀಕರಣ ಕಾಮಗಾರಿಯೂ ನಡೆಯುತ್ತಿದ್ದು, ಆದರೇ ಕಳೆದ 10 ರಿಂದ 15 ದಿನಗಳ ಹಿಂದೆ ಏಕಾಏಕಿ ಪಾಲಿಕೆ ಮಹಾಪೌರರು ಹಾಗೂ ಅಧಿಕಾರಿಗಳ ವರ್ಗ ಸ್ಥಳಕ್ಕೆ ಬೇಟಿ ನೀಡಿ ಕಾಮಗಾರಿ ಸ್ತಗಿತಗೊಳಿಸಲು ಕಾರಣವೇನೆಂಬುದು ಯಕ್ಷ ಪ್ರಶ್ನೆಯಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದರು.ಕೂಡಲೆ ಸ್ತಗಿತಗೊಂಡಿರುವ ಕಾಮಗಾರಿಯನ್ನು ಪುನರ್ ಪ್ರಾರಂಭಿಸಬೇಕು ಇಲ್ಲವಾದಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮೆಹೆಕ್ ಷರೀಫ್ ರವರು, ಪಾಲಿಕೆ ಸದಸ್ಯರಾದ ಆರ್.ಸಿ.ನಾಯ್ಕ್ ರವರು, ಹೆಚ್.ಸಿ.ಯೋಗೇಶ‍್ ರವರು, ಬಿ.ಎ.ರಮೇಶ‍್ ಹೆಗ್ಡೆ ರವರು, ಮುಖಂಡರಾದ ಕೆ.ರಂಗನಾಥ್ ರವರು, ರಂಗೇಗೌಡ ರವರು, ವಾರ್ಡಿನ ನಾಗರೀಕರಾದ ಆನಂದ್ ನಾಯ್ಕ್ ರವರು, ವಸಂತ ನಾಯ್ಕ್ ರವರು, ವಕೀಲರಾದ ಶಾಂತ್ ಕುಮಾರ್, ಚಿಕ್ಕಣ್ಣ, ಗಂಗಾದರ, ರವಿ, ಹಾಗೂ ಇನ್ನಿತರಿದ್ದರು.