12/7/21 ದುರ್ಗಿಗುಡಿ ಆಂಗ್ಲಾ ಮಾಧ್ಯಮ ಶಾಲೆ ಶಿವಮೊಗ್ಗ, ನಗರದ ದುರ್ಗಿಗುಡಿ ಆಂಗ್ಲಾ ಮಾಧ್ಯಮ ಶಾಲೆಯಲ್ಲಿ ಮಕ್ಕಳ ತಂದೆ ತಾಯಿ ಹಾಗೂ ಪೋಷಕರು ಈ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಲು ಮುಗಿಬಿದ್ದಿದ್ದು ಶಾಲೆಯ ಅಡ್ಮಿಷನ್ ಕ್ಲೋಸ್ ಎಂಬ ಫಲಕವನ್ನು ನೋಡಿ, ಶಾಲೆಯ ಮಾಜಿ SDMC ಸದಸ್ಯರು ಹಾಗೂ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಚನ್ನವೀರಪ್ಪ ಗಾಮನಗಟ್ಟಿ ಅವರಿಗೆ ಪೋಷಕರು ಕರೆ ಮಾಡಿ ನಮ್ಮ ಮಕ್ಕಳಿಗೆ ಶಾಲೆಯಲ್ಲಿ ದಾಖಲೆ ಮಾಡಲು ಕೇಳಿಕೊಂಡರು.

ಶಾಲೆಗೆ ಭೇಟಿನೀಡಿದ ಅಧ್ಯಕ್ಷರು ಪ್ರಭಾರಿ ಮುಖ್ಯ ಶಿಕ್ಷಕರಾದ ವೀರಪ್ಪ ದೊಡ್ಡಮನೆರೊಂದಿಗೆ ಮಾತನಾಡಿದಾಗ 1ನೇ ತರಗತಿಗೆ 130 ಮಕ್ಕಳು, 2ನೇ ತರಗತಿಗೆ 120 ಮಕ್ಕಳು ಹಾಗೂ 6 ಮತ್ತು 7ನೇ ತರಗತಿಗೆ 180 ಮಕ್ಕಳು ಇರುವರು ಒಟ್ಟು ಮಕ್ಕಳ ಸಂಖ್ಯೆ ಸಾವಿರದ ಗಡಿ ದಾಟಿದೆ. ಶಾಲೆಯಲ್ಲಿ ಶಿಕ್ಷಕರ ಕೊರತೆಯಿದೆ ಜೊತೆಗೆ ಕೊಠಡಿಗಳ ಕೊರತೆಯಿದೆ ಎಂದು ವಾಸ್ತವಾಂಶ ತಿಳಿಸಿದರು.

ಮುಖ್ಯ ಶಿಕ್ಷಕರಿಗೆ ಯಾವ ಮಕ್ಕಳು ಶಿಕ್ಷಣ ದಿಂದ ವಂಚಿತರಾಗಬಾರದು ದಾಖಾಲಾತಿಗೆ ಬರುವ ಅಷ್ಟು ಮಕ್ಕಳಿಗೂ ಶಾಲೆಗೆ ದಾಖಲೆ ಮಾಡಿಸಿಕೋಳಿ. ನಾನು ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಮಾತನಾಡುತ್ತೇವೆ ಎಂದು ತಿಳಿಸಿದರು.

ಶಿವಮೊಗ್ಗ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪಿ ನಾಗರಾಜ್ ರವರನ್ನು ಭೇಟಿ ಮಾಡಿ ಈ ಹಿಂದೆ ಶಾಲೆಯಲ್ಲಿ 16 ಜನ ಶಿಕ್ಷಕರು ಇದ್ದು ನಂತರ 24 ಜನ ಶಿಕ್ಷಕರ ತರಲು ಮಾಜಿ SDMCಯ ಅಧ್ಯಕ್ಷರು ಹಾಗೂ ಸದಸ್ಯರ ಶ್ರಮ ಬಹಳ ಇದೆ ನೂತನ ಕಟ್ಟಡ ಹಾಗೂ ಶೌಚಾಲಯ ನಿರ್ಮಾಣ ಇತರೆ ಶಾಲಾಭಿವೃದ್ಧಿ ಬಗ್ಗೆ ಗಮನಕ್ಕೆ ತರಲಾಯಿತು.

ಈಗ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ವಯೋಸಹಜ ನಿವೃತ್ತಿಯಿಂದ ಶಾಲೆಯಲ್ಲಿ ಶಿಕ್ಷಕರ ಕೊರತೆಯಾಗಿದೆ, ದಾಖಲಾತಿ ಅನುಗುಣವಾಗಿ ಶಿಕ್ಷಕರ ನಿಯೋಜನೆ ಮಾಡಿ ಈಗ ಎಲ್ಲಾ ಪೋಷಕರು ಸರ್ಕಾರಿ ಶಾಲೆಗಳಿಗೆ ಮಕ್ಕಳ ಸೇರಿಸಲು ಮನಸು ಮಾಡಿರುವರು ಯಾವ ಮಕ್ಕಳು ಶಿಕ್ಷಣ ದಿಂದ ವಂಚಿತರಾಗಬಾರದು
ಎಂದು ಮನವಿ ಮಾಡಲಾಯಿತು.

ನಮ್ಮಲ್ಲಿ ಶಿಕ್ಷಕರ ಕೊರತೆಯಿದೆ ಲಭ್ಯವಿರುವ ಶಿಕ್ಷಕರ ನೀಡುತ್ತೇವೆ ಹಾಗೆ ಗೆಸ್ಟ್ ಟೀಚರ್ ನೀಡಲು ಪ್ರಯತ್ನಿಸುತ್ತೇವೆ ನಿಮ್ಮಲ್ಲಿ ಇರುವ ಕೊಠಡಿಗಳ ಲಭ್ಯತೆ ಮೇಲೆ ಮಕ್ಕಳ ದಾಖಲೆ ಅಗಲಿ ಎಂದು ಸಕಾರಾತ್ಮಕ ಸ್ಪಂದನೆ ನೀಡಿದರು.

ಈ ಸಂದರ್ಭದಲ್ಲಿ ದುರ್ಗಿಗುಡಿ ಆಂಗ್ಲಾ ಮಾಧ್ಯಮ ಶಾಲೆಯ SDMC ಮಾಜಿ ಅಧ್ಯಕ್ಷರಾದ ಟಿ ನಾಗರಾಜ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153