ಮಲೆನಾಡಿನ ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಾಪಕವಾಗಿ ಗಾಂಜಾ ಗಲಾಟೆ ಆಗುತ್ತಿದೆ ದುಂಡಾವರ್ತನೆ ಗಳಿಂದ ಸಾಮಾಜಿಕ ಸ್ವಾಸ್ಥ್ಯ ಹಾಳಾಗುತ್ತಿದೆ ಈಗಾಗಲೇ ಇಂತಹ ಪ್ರಕರಣಗಳು ಆಯಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಉದಾಹರಣೆಗಳಿವೆ ಅಲ್ಲದೆ ಮಲೆನಾಡಿನಲ್ಲಿ ಕಳ್ಳ ಹಾದಿಯಿಂದ ಬೆಳೆಯಲಾಗುವ ಗಾಂಜಾವನ್ನು ದೂರದ ದೇಶಗಳಾದ ಶ್ರೀಲಂಕಾ ನೇಪಾಳ ಹೊರ ರಾಜ್ಯಗಳಾದ ಗೋವಾ ಮುಂಬೈ ಹಾಗೂ ಹೊರ ಜಿಲ್ಲೆಗಳಿಗೂ ಇಲ್ಲಿಂದಲೇ ಸರಬರಾಜು ಆಗುತ್ತಿರುವ ಮಾಹಿತಿಗಳು ಕೇಳಿಬಂದಿವೆ ಮಲೆನಾಡಿ ನಲ್ಲಿಯೇ ಗಾಂಜಾ ಸರಬರಾಜಿನ ಕಿಂಗ್ ಪಿನ್ ಗಳು ಇರುವುದು ಸಾಕಷ್ಟು ಪ್ರಕರಣಗಳು ಮಾಹಿತಿಗಳಿಂದ ದೃಢಪಡುತ್ತದೆ. ಜಿಲ್ಲಾ ರಕ್ಷಣಾಧಿಕಾರಿಗಳು ಈ ಕೂಡಲೇ ಗಾಂಜಾ ಗಲಾಟೆಗಳನ್ನು ಹತ್ತಿಕ್ಕಲು ಹಾಗೂ ಕಿಂಗ್ ಪಿನ್ ಗಳನ್ನು ಪತ್ತೆ ಹಚ್ಚಲು ನುರಿತ ಪೊಲೀಸ್ ತಂಡವನ್ನು ರಚಿಸಿ ಕಾರ್ಯಾಚರಣೆ ಗಳಿಸುವಂತೆ ಕರವೇ -ಯುವಸೇನೆ ಈ ಮೂಲಕ ಮನವಿ ಮಾಡಿಕೊಳ್ಳುತ್ತದೆ. ಗಾಂಜಾ ಗಲಾಟೆ ಎನ್ನುವುದು ಡ್ರಗ್ಸ್ ಮಾಫಿಯಾದ ಜಾಲವೇ ಆಗಿದೆ.ಸಾಕಷ್ಟು ವರ್ಷಗಳಿಂದ ಶಿವಮೊಗ್ಗದಲ್ಲಿ ಡ್ರಗ್ಸ್ ಮಾಫಿಯಾ ಸಕ್ರಿಯವಾಗಿದ್ದರೂ ಅದನ್ನು ಸಮರ್ಪಕವಾಗಿ ಭೇದಿಸದೆ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಈ ಮಾಫಿಯಾ ಯುವ ಸಮುದಾಯಗಳು ಮೇಲೆ ದುಷ್ಪರಿಣಾಮಗಳನ್ನು ಬೀರುತ್ತಿದೆ ಅಲ್ಲದೆ ಯುವ ಜೀವನ ಹಾಳುಗೆಡವುತ್ತಿವೆ ಎನ್ನುವುದು ತಮ್ಮ ಗಮನಕ್ಕೆ ತರಬಯಸುತ್ತೇವೆ ಈ ಜಾಲ ಮತ್ತೊಂದು ಹೆಜ್ಜೆ ಮುಂದೆ ಸಾಗಿ ಕಾಲೇಜು ಕ್ಯಾಂಪಸ್ ವಿದ್ಯಾರ್ಥಿಗಳಿಗೂ ಬ್ರಹ್ಮಾಲೋಕವನ್ನು ಸೃಷ್ಟಿಸುವ ಅಮಲಿಗೆ ಬೀಳಿಸುತ್ತಿದೆ ಎನ್ನುವುದು ಈಗಾಗಲೇ ಸಿಮ್ಸ್ ಮೆಡಿಕಲ್ ಕಾಲೇಜಿನ ಹೊರರಾಜ್ಯದ ವಿದ್ಯಾರ್ಥಿಗಳನ್ನು ಗಾಂಜಾ ಅಮಲಿನಲ್ಲಿ ತೇಲುವಂತೆ ಮಾಡುತ್ತಿರುವದು ಬಹಿರಂಗವೂ ಆಗಿದೆ. ನಗರದ ಪ್ರಮುಖ ಏರಿಯ ಗಳಾದ ಬಸ್ಸ್ಟ್ಯಾಂಡ್ , ಎಂಕೆ.ಕೆ ರಸ್ತೆ, ಮಾರ್ನಮಿಬೈಲ್, ಅಣ್ಣಾನಗರ ,ತುಂಗಾನಗರ, ಟಿಪ್ಪು ನಗರ ,ಅಶೋಕನಗರ, ಮಿಳ್ಳಗಟ್ಟ ,ಬುದ್ಧನಗರ, ರಾಗಿಗುಡ್ಡ , ಗೋಪಾಳ , ಇಲ್ಲಿ ಬಿಡಾಡಿ ಹುಡುಗರಿಗೆ ನಶೆ ಪೀಡಿತ ಹುಡುಗರಿಗೆ ಪೊಟ್ಟಣ ಮಾಡಿ ಮಾರಾಟ ಮಾಡುತ್ತಿರುವುದು ಸಾರ್ವಜನಿಕ ವಾಗಿ ತಿಳಿದಿರುವ ಸಂಗತಿಯೇ ಆಗಿದೆ ಆದರೂ ಇದನ್ನು ಹತ್ತಿಕ್ಕಲು ಸಾಧ್ಯವಾಗದೇ ಇರುವು ದರಿಂದ ತಾವುಗಳು ಗಾಂಜಾ ಗಲಾಟೆ ಹಾಗೂ ಸರಬರಾಜು ಮಾಫಿಯಾ ಸೃಷ್ಟಿಸಿರುವ ಮಲೆನಾಡಿನ ಗಾಂಜಾ ಕಿಂಗ್ ಪಿನ್ ಗಳ ಪತ್ತೆಗಾಗಿ ತಂಡ ರಚಿಸಿ ಕಾರ್ಯಾಚರಣೆಗಿಳಿಸಲು ಈ ಮೂಲಕ ಆಗ್ರಹಿಸುತ್ತೇವೆ . ಈ ಎಲ್ಲ ಸಂಗತಿಗಳನ್ನು ಮನಗಂಡು ಕೂಡಲೇ ತಂಡವೊಂದನ್ನು ರಚನೆ ಮಾಡಿ ಕಾಲೇಜುಗಳಲ್ಲಿ ಹಾಗೂ ಸಾರ್ವಜನಿಕವಾಗಿ ಗಾಂಜಾ ವಿರುದ್ಧ ಜಾಗೃತಿ ಮಾಡಲಾಗುವುದು ಎಂದು ಕಳೆದ ಬಾರಿ ಹೇಳಿ ದ ಜಿಲ್ಲಾ ರಕ್ಷಣಾಧಿಕಾರಿ “ಅಭಿನವ್ ಖರೆ”ಯವರು ವಿಶೇಷ ತಂಡ ರಚಿಸದೆ ಇರುವುದು ಮಲೆನಾಡಿನ ಗಾಂಜಾ ಕಿಂಗ್ ಪಿನ್ ಗಳಿಗೆ ಮತ್ತಷ್ಟು ಪ್ರೋತ್ಸಾಹ ಸಿಕ್ಕಿದಂತಾಗಿದೆ. 1 ಮೂಲದ ಪ್ರಕಾರ ಸಾಗರ, ತೀರ್ಥಹಳ್ಳಿ ,ಶಿಕಾರಿಪುರ, ಹೊಸನಗರ,ಭಾಗಗಳಲ್ಲಿ ಬಹಳಷ್ಟು ಕಳ್ಳಹಾದಿಯಲ್ಲಿ ಬೆಳೆಯಲಾಗುವ ಗಾಂಜಾವನ್ನು ಸರಬರಾಜು ಮಾಡುವ ಮಾಫಿಯಾ ವರ್ಷಕ್ಕೆ ನೂರಾರು ಕೋಟಿ ಲಾಭದಾಯಕ ದಂಧೆಯನ್ನಾಗಿಸಿಕೊಂಡಿದೆ ಎನ್ನುವುದು ಚರ್ಚಿತಗೊಳ್ಳುತ್ತಿವೆ ಇಂತಹ ನೆಶೆ ಜಾಲದ ಹಿಂದೆ ಕೆಲ ಪೊಲೀಸ್ ಸಿಬ್ಬಂದಿಗಳು ಶಾಮೀಲಾಗಿದ್ದಾರೆ ಎನ್ನುವ ಮಾಹಿತಿಗಳು ದೂರ ತಳ್ಳುವಂತಿಲ್ಲ ಈ ಎಲ್ಲ ಕಾರಣಗಳಿಂದ ಹಾಗೂ ಶಿವಮೊಗ್ಗದ ಕೆಲ ಏರಿಯಾಗಳಲ್ಲಿ ಬೈಕ್ ಸುಡುವುದು, ಕಾರುಗಳು, ಜಖಂಗೊಳಿಸುವುದು, ಕಳ್ಳತನ ,ಪ್ರಕರಣಗಳು ಮಹಿಳೆಯರನ್ನು ಚುಡಾಯಿಸುವುದು ,ತಂಡ ದುಂಡಾವರ್ತನೆ ಗಳಿಂದ ಗುಂಪುಗೂಡಿಕೊಂಡು ಮಾರಕಾಸ್ತ್ರಗಳನ್ನು ತೋರಿಸಿ ಜನರನ್ನು ಆತಂಕಕ್ಕೀಡು ಮಾಡುವುದು ಹಾಗೂ ಇದೇ ನಷ್ಟಪೀಡಿತ ಹುಡುಗರಿಂದ ಸುಂದರಾಆಶ್ರಯ ಹಿಂಬದಿ ಹೋಟೆಲ್ ನಲ್ಲಿ ಮರ್ಡರ್ ಮಾಡಿರುವುದು’ ಸಾರ್ವಜನಿಕವಾಗಿ ಅಟ್ಯಾಕ್ ಮಾಡುವ ಇಂತಹ ಹತ್ತಾರು ಪ್ರಕರಣಗಳು ಗಾಂಜ ಗಲಾಟೆ ಎಂದೇ ಸಾಬೀತಾಗಿದೆ . ಜಿಲ್ಲಾರಕ್ ಣಾಧಿಕಾರಿಗಳಾದ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ಮಲೆನಾಡಿನ ಜನತೆಗೆ ಉತ್ತಮ ಆರೋಗ್ಯ ವಾತಾವರಣ ಸೃಷ್ಟಿಸುವ ದೃಷ್ಟಿಯಿಂದ ಗಾಂಜಾ ಗಲಾಟೆಯನ್ನು ಸಂಪೂರ್ಣವಾಗಿ ಹತ್ತಿಕ್ಕಲು ಹಾಗೂ ಗಾಂಜಾ ಕಿಂಗ್ ಪಿನ್ ಗಳನ್ನು ಸೆರೆ ಹಿಡಿಯಲು ಕೂಡಲೇ ವಿಶೇಷ ತನಿಖಾ ತಂಡವನ್ನು ರಚಿಸುವಂತೆ ಈ ಮೂಲಕ ಯುವ ಸೇನೆ ಮನವಿ ಮಾಡಿಕೊಳ್ಳುತ್ತೇವೆ .
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಕಿರಣ್ ಕುಮಾರ್ , ಶಿವುಕುಮಾರ್ ,ಸತೀಶ್ , ಶ್ರೀಧರ್, ಜಯಪ್ಪ ಮುಂತಾದವರು ಉಪಸ್ಥಿತರಿದ್ದರು .
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153