ದೇಶಿಯ ವಿದ್ಯಾ ಶಾಲಾ ಸಮಿತಿ ಡಿವಿಎಸ್ ಕಲಾ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಮತ್ತು ಜಿಲ್ಲಾ ಪೊಲೀಸ್ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ರಸ್ತೆ ಸಾರಿಗೆ ಮತ್ತು ಮಾದಕ ವಸ್ತುಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಿವಮೊಗ್ಗ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿಗಳಾದ ಶ್ರೀ ಮಿಥುನ್ ಕುಮಾರ್ ಅವರು ವಿದ್ಯಾರ್ಥಿಗಳಿಗೆ ವಾಹನ ಚಲಾವಣೆ ಮಾಡುವಾಗ ರಸ್ತೆ ಸುರಕ್ಷಿತ ನಿಯಮಗಳನ್ನು ಪಾಲನೆ ಮಾಡುವುದು ಎಷ್ಟು ಮುಖ್ಯ ಎಂಬುದನ್ನು ತಿಳಿಸಿದರು.
ಅದೇ ರೀತಿ ಇಂದು ವ್ಯಾಪಕವಾಗಿ ಹಬ್ಬುತ್ತಿರುವ ಮಾದಕ ವಸ್ತುಗಳ ಸೇವನೆ ಯಾವ ರೀತಿ ಯುವ ಜನಾಂಗವನ್ನು ಅನಾರೋಗ್ಯ ಮತ್ತು ದುರ್ವರ್ತನೆಗಳಿಗೆ ಕಾರಣ ಮಾಡುತ್ತಿದೆ ಎಂಬುದನ್ನು ಮನವರಿಕೆ ಮಾಡಿದರು.ಇದೇ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಷಣ ಮಾಡಿದ ಶಿವಮೊಗ್ಗ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾಧ ಶ್ರೀ ಅನಿಲ್ ಕುಮಾರ್ ಬೂಮರೆಡ್ಡಿ ಅವರು ಅಪಘಾತದಿಂದ ಆಗಬಹುದಾದ ಹಾನಿ ಮತ್ತು ಆ ಕುಟುಂಬದ ವರ್ಗದವರು ಅನುಭವಿಸುವ ಸಂಕಷ್ಟಗಳನ್ನು ಕುರಿತು ವಿವರಿಸಿದರು ಮತ್ತು ಮಾದಕ ವಸ್ತುಗಳ ಸೇವನೆಯನ್ನು ನಿಗ್ರಹಿಸಲು ಇಂದಿನ ಯುವ ಜನಾಂಗ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಬೇಕೆಂದು ಕೋರಿದರು.ಮತ್ತೊಬ್ಬ ವಿಶೇಷ ಅತಿಥಿಗಳಾದ ಶ್ರೀ ಬಾಲರಾಜ್ ಡಿವೈಎಸ್ ಪಿ ಶಿವಮೊಗ್ಗ ಇವರು ರಸ್ತೆ ಸುರಕ್ಷತೆ ಮತ್ತು ಮಾದಕ ವಸ್ತುಗಳ ಕುರಿತು ಇಂದು ಸಮಾಜದಲ್ಲಿ
ಸಮಾಜದಲ್ಲಿ ಸಂಭವಿಸುತ್ತಿರುವ ಅನೇಕ ರೀತಿಯ ಅವಘಡಗಳಿಗೆ ಯುವ ಜನಾಂಗ ವರ್ತಿಸುತ್ತಿರುವ ರೀತಿ ಮತ್ತು ಇಂದಿನ ಸೈಬರ್ ಅಪರಾಧಗಳು ಕಾರಣವೆಂದು ಅಭಿಪ್ರಾಯಪಟ್ಟರು.
ಈ ಕಾರ್ಯಕ್ರಮದಲ್ಲಿ ಕೋಟೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆದ ಶ್ರೀ ಚಂದ್ರಶೇಖರ್ ಅವರು ಉಪಸ್ಥಿತರಿದ್ದರು ಕಾಲೇಜಿನ ಪ್ರಾಂಶುಪಾಲರಾದ
ಡಾ. ಎಂ ವೆಂಕಟೇಶ್ ಇವರು ಅಧ್ಯಕ್ಷತೆಯನ್ನು ವಹಿಸಿದ್ದರು.