ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿ ಯವರ ಮೂಲಮಂತ್ರ ವಾದ, ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಪರಿಕಲ್ಪನೆಯನ್ನು ಸಾಕಾರ ಗೊಳಿಸುವ, ಬಜೆಟ್ ಅನ್ನು ಕೇಂದ್ರ ವಿತ್ತ ಸಚಿವೆ, ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದಾರೆ.

ರಾಜ್ಯದ ದೃಷ್ಟಿಯಿಂದ ಅತ್ಯಂತ ಮಹತ್ವ ಹೊಂದಿರುವ, ಬಜೆಟ್ ನಲ್ಲಿ, ಮಧ್ಯ ಕರ್ನಾಟಕದ ಬರ ಪೀಡಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಸುಮಾರು 5300 ಕೋಟಿ ರೂಪಾಯಿಗಳ ಆರ್ಥಿಕ ನೆರವು ಘೋಷಿಸಿದ್ದು, ಅತ್ಯಂತ ಸ್ವಾಗತಾರ್ಹ.

ಸಮಾಜದ ಎಲ್ಲಾ ವರ್ಗದ ಸರ್ವೊತೋಮುಖ ಬೆಳವಣಿಗೆಯನ್ನು, ಗಮನ ದಲ್ಲಿಟ್ಟು ಮಂಡಿಸಿದ ಬಜೆಟ್ ನಲ್ಲಿ, ಸಾಮಾಜಿಕ ಮೂಲ ಸೌಕರ್ಯ ಅಭಿವೃದ್ಧಿ ಕಲ್ಪಿಸಲು ಹೆಚ್ಚಿನ ಆದ್ಯತೆ ನೀಡಲಾಗಿದೆ.

ಕೋವಿಡ್ ಮಹಾಮಾರಿಯಿಂದ ಬಾಧಿತವಾದ, ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ಗಾತ್ರದ ಕೈಗಾರಿಕೆಗಳಿಗೆ, ಆರ್ಥಿಕ ಚೈತನ್ಯ ನೀಡುವ ಪ್ರಸ್ತಾವನೆ, ಹೊಸ ಭರವಸೆ ಮೂಡಿಸಲಿದೆ.

ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ, ದೇಶದ ರೈಲ್ವೇ ವಲಯಕ್ಕೆ, ಅತ್ಯಂತ ದೊಡ್ಡ ಮೊತ್ತ ವಾದ 2.41 ಲಕ್ಷ ಕೋಟಿ ರೂಪಾಯಿಗಳ ಅನುದಾನ, ದೇಶದ ಸಂಪರ್ಕ ವ್ಯವಸ್ಥೆ ಇನ್ನಷ್ಟು ಬಲ ಪಡೆಯಲು ಸಹಾಯ ವಾಗುತ್ತದೆ.

ದೇಶದ ಬಡ ಹಾಗೂ ದಲಿತ ವರ್ಗದ ನಾಗರಿಕರಿಗೆ, ಅನುಕೂಲ ಕಲ್ಪಿಸುವ ಉದ್ದೇಶದ, ಉಚಿತ ವಾಗಿ ವಿತರಿಸಲಾಗುವ ಆಹಾರಧಾನ್ಯ ಪೂರೈಕೆ ಯನ್ನು ಮುಂದಿನ ಎರಡು ವರ್ಷಗಳ ವರೆಗೆ ವಿಸ್ತರಿಸುವ ನಿರ್ಧಾರ, ಅತ್ಯಂತ ಸಕಾಲಿಕ ವಾಗಿದೆ.

ರಾಷ್ಟ್ರದ ಆರ್ಥಿಕತೆಯ ಬೆನ್ನೆಲುಬಾಗಿರುವ, ಕೃಷಿ ಕ್ಷೇತ್ರಕ್ಕೆ ಆದ್ಯತೆ ನೀಡಿರುವುದು, ರೈತ ಸಮುದಾಯದ ಅಭಿವೃದ್ದಿಗೆ, ಸಹಾಯಕ ವಾಗಲಿದೆ.

ಗ್ರಾಮೀಣ ಪ್ರದೇಶದ ಹಾಗೂ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಗೆ ವಿಶೇಷ ಗಮನ ನೀಡಲಾಗಿದ್ದು, ದೇಶದ ಸರ್ವೋತೋಮುಖ ಅಭಿವೃದ್ದಿಗೆ, ಕೇಂದ್ರ ಬಜೆಟ್ ಪೂರಕವಾಗಿ ನೆರವಾಗಲಿದೆ.

ವರದಿ ಪ್ರಜಾ ಶಕ್ತಿ…