ಬೆಳಗಾವಿ ನ್ಯೂಸ್…
ಬೆಳಗಾವಿ ಜಿಲ್ಲೆಯ
ರಾಯಬಾಗ ತಾಲೂಕಿನ ಖೇಮಲಾಪೂರ ಗ್ರಾಮದಲ್ಲಿ
ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ, ಜಿಲ್ಲಾ ಪಂಚಾಯಿತಿ ಬೆಳಗಾವಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ರಾಯಬಾಗ ಹಾಗೂ ಸಮೂಹ ಸಂಪನ್ಮೂಲ ಕೇಂದ್ರ ಖೇಮಲಾಪೂರ ಇವರ ಸಂಯುಕ್ತ ಆಶ್ರಯದಲ್ಲಿ ಎರಡು ದಿನದ ಕಲಿಕಾ ಹಬ್ಬ ಜರುಗಿತು.
ಗ್ರಾಮದ ಅರಣ್ಯ ಸಿದ್ದೇಶ್ವರ ದೇವಸ್ಥಾನ ರಸ್ತೆಯ ಮೂಲಕ ಅಲಂಕಾರಿಕ ಚಿಕ್ಕ ಟ್ರಾಕ್ಟರ್ ದೊಂದಿಗೆ ಶಾಲಾ ಮಕ್ಕಳು ವಿವಿಧ ಗಣ್ಯರು ವೇಶಭೂಷಣ ತೊಟ್ಟು ಕಲಿಕಾ ಹಬ್ಬಕ್ಕೆ ಮೆರಗು ತಂದರು ಈ ಕಲಿಕಾ ಹಬ್ಬ ಜಾಥಾದಲ್ಲಿ ಶಿಕ್ಷಕರು ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಲ್ಲಾ ಸದಸ್ಯರು ಸಿಬ್ಬಂದಿಗಳು
ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಶ್ರೀಮತಿ ಸುಜಾತಾ ರವಿ ಚೌಗಲಾ. ಇವರು ಮಾತನಾಡಿ ಕಲಿಕಾ ಹಬ್ಬದಲ್ಲಿ ಮಕ್ಕಳು ಮತ್ತು ಶಿಕ್ಷಕರು ಭಾಗವಹಿಸಿಕೆಯನ್ನು ಕಂಡು ಮುಕ್ತ ಮನಸ್ಸಿನಿಂದ ಪ್ರಶಂಸಿಸಿದರು ಮಕ್ಕಳಿಗೆ ಜ್ಞಾನ ಇಮ್ಮಡಿಗೊಂಡು ಮಕ್ಕಳು ಕೌಶಲ್ಯಗಳ ಅಭಿವೃದ್ಧಿ ಅವರ ಜೀವನಜೀವನಕ್ಕೆ ಮಾರ್ಗದರ್ಶಿ ಸಾಧನಗಳಾಗಲಿವೆ. ಶಾಲೆ ಎಂಬ ಪುಟ್ಟ ಸಮಾಜದಲ್ಲಿ ಹಿರಿದಾದ ಕಲ್ಪನೆಗಳು ವಿಶಾಲವಾದ ಮರವಾಗಲು ಕಲಿಕಾ ಹಬ್ಬ ಎಂಬ ಚಟುವಟಿಕೆಯ ವಸ್ತುಗಳು ಅವಶ್ಯಕತೆ. ಇಂತಹ ಶಿಕ್ಷಣ ಅಂದಲ್ಲಿ ಮಕ್ಕಳು ಅಭಿವೃದ್ಧಿ ಕಾರ್ಯಕ್ಕೆ ಸಹಕಾರ ನಿಡಲು ಗ್ರಾಮ ಪಂಚಾಯಿತಿ ಸದಾ ಸಿದ್ಧ ಇದ್ದೇವೆ ಎಂದರು.
ಈ ಸಂದರ್ಭದಲ್ಲಿ
ಶ್ರೀ ಸತ್ಯಪ್ಪ ಕವಟಕೊಪ್ಪ. ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು
ಶ್ರೀ ಶಶಿಧರ ಮೂಡಲಗಿ. ಬಿಜೆಪಿ ಯುವದೂರಿಣರು ಸಮಾಜ ಸೇವಕರು ಒಂದು ದಿನದ ಸಿಹಿ ಊಟವನ್ನು ಮಕ್ಕಳಿಗೆ ವಿತರಿಸಿದರು
ಶ್ರೀ ಬಸನಗೌಡ ಪಾಟೀಲ. ಶಾಲೆಯ ಮುಖ್ಯ ಶಿಕ್ಷಕರು
ಶ್ರೀ ಗೀರಿಶ ಚಿಟ್ಟಿ. SDMC ಅಧ್ಯಕ್ಷರು.
ಶ್ರೀಮತಿ ಪ್ರವಿನ್ ಮುಲ್ಲಾ. ಸಂಪನ್ಮೂಲ ವ್ಯಕ್ತಿಗಳು
ಶ್ರೀಮತಿ ನಿರ್ಮಲಾ ಬರಡಗಿ
ಶ್ರೀ ಎಚ್ ಪಿ ನಾವಿ. ಹಾಗೂ ಗ್ರಾಮ ಗಣ್ಯರು ಗ್ರಾಮಸ್ಥರು ಮಕ್ಕಳು ಪಾಲಕರು ಶಿಕ್ಷಕರು ಮತ್ತು ಶಿಕ್ಷಕಿಯರ ಭಾಗವಹಿಸಿದ್ದರು.