ಭಾರತೀಯ ಜನತಾ ಪಾರ್ಟಿಯ ವಿವಿಧ ಮೋರ್ಚಗಳ ವತಿಯಿಂದ ರಾಜ್ಯಾದ್ಯಂತ ನಡೆದಿರುವ ಸಮಾವೇಶದ ಬಗ್ಗೆ, ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ, ಪತ್ರಿಕಾಗೋಷ್ಠಿಯನ್ನು ನಡೆಸಿದರು.
ನಂತರ ಮಾತನಾಡಿದ,ರಾಜ್ಯ ಬಿಜೆಪಿ ಉಪಾಧ್ಯಕ್ಷರು ಮತ್ತು ಮೂರ್ಚಗಳ ಸಮಾವೇಶದ ಸಂಚಾಲಕರಾದ ಶ್ರೀ ಬಿ ವೈ ವಿಜಯೇಂದ್ರ ಅವರು, ಬಹುತೇಕ ಚುನಾವಣಾ ಸಂದರ್ಭದಲ್ಲಿರುವ ಕರ್ನಾಟಕ ರಾಜ್ಯ ಈ ಸಂದರ್ಭದಲ್ಲಿ ವಿರೋಧ ಪಕ್ಷದವರು ಸುಳ್ಳು ಭರವಸೆಯನ್ನ ಕೊಡುವುದರ ಮೂಲಕ ಮತದಾರರನ್ನ ಗೆಲ್ಲುವ ಪ್ರಯತ್ನವನ್ನ ಮಾಡುತ್ತಿರುವುದು ಹಾಸ್ಯಾಸ್ಪದ, ಅವರ ನಡುವಳಿಕೆಯನ್ನ ನಾವು ನೋಡುತ್ತಿದ್ದೇವೆ, ಆದರೆ ನಮ್ಮ ಪಕ್ಷದ ಸಾಧನೆ ಬೆಟ್ಟದಷ್ಟಿದೆ.
ನಮ್ಮ ಭಾರತೀಯ ಜನತಾ ಪಕ್ಷ, ಕೇಂದ್ರದಲ್ಲಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಅವರ ನೇತೃತ್ವ ಸರ್ಕಾರ ಮತ್ತು ಅದೇ ರೀತಿ ಕರ್ನಾಟಕದಲ್ಲಿ ಶ್ರೀ ಬಸವರಾಜ ಎಸ್ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಜಾರಿಗೆ ತಂದ ಅನೇಕ ಜನಪರ ಯೋಜನೆಗಳು ಮತ್ತು ಕಾರ್ಯಗಳನ್ನ ನಾವು ಜನತೆಗೆ ತಲುಪಿಸಬೇಕು,ಪ್ರತಿ ಮನೆ ಮನೆಗೆ ಮತ್ತು ಜನರ ಮನಕ್ಕೆ ಮುಟ್ಟಿಸುವಂತಹ ಕಾರ್ಯಗಳಲ್ಲಿ ನಾವು ಯಶಸ್ವಿಯಾಗಬೇಕು,ಎಂಬ ದೃಷ್ಟಿಯಿಂದ ಭಾರತೀಯ ಜನತಾ ಪಕ್ಷದ ಮೋರ್ಚಗಳು ಕೆಲಸ ಮಾಡಲಿವೆ, ಈ ಹಿನ್ನೆಲೆಯಲ್ಲಿ ವಿವಿಧ ಭಾಗಗಳಲ್ಲಿ ಸಮಾವೇಶಗಳು ನಡೆಯಲಿವೆ,ಕರ್ನಾಟಕದಲ್ಲಿ ಮತ್ತೆ ಈ ಬಾರಿಯೂ ಬಿಜೆಪಿ ಆಡಳಿತಕ್ಕೆ ಬರಲಿದೆ, ಎಂದರು.
ಈ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಶ್ರೀ ಜಗದೀಶ್ ಹಿರೇಮನಿ, ಒಬಿಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಯಶಪಾಲ್ ಸುವರ್ಣ ಸೇರಿದಂತೆ ಪ್ರಮುಖರಿದ್ದರು.