ಶಿವಮೊಗ್ಗ ಮಲೆನಾಡಿನ ತವರೂರು, ಕಲೆ-ಸಾಹಿತ್ಯಗಳ ನೆಲೆಬೀಡು, ಚಳುವಳಿಗಳ ನೆಲೆ, ಸಾಮಾಜಿಕ ಹೋರಾಟಗಳ ಮೂಲಕ ರಾಜ್ಯದ ಗಮನ ಸೆಳೆದ ಶಿವಮೊಗ್ಗ ನಗರದಲ್ಲಿ ವಿಮಾನ ನಿಲ್ದಾಣ ಬಹುದಿನದ ಕನಸು ಆಗಿದೆ. ಇದರ ಹಿಂದೆ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪನವರ ಶ್ರಮ ಹಾಗೂ ಪ್ರಯತ್ನಗಳು ಶ್ಲಾಘನೀಯ ಹಾಗೂ ಸ್ವಾಗತಾರ್ಹ ವಿಷಯವೂ ಆಗಿದೆ.
ಆದರೆ ವಿಮಾನ ನಿಲ್ದಾಣಕ್ಕೆ ಅಂತರಾಷ್ಟ್ರೀಯ ಮೆರಗು ನೀಡಿ ಮರು ಯೋಜನೆ ರೂಪಿಸಿ ಕಾಮಗಾರಿಗೆ ತ್ವರಿತಗತಿಯಲ್ಲಿ ಚಾಲನೆ ನೀಡಿರುವುದರ ನಡುವೆಯೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಮಾಂಕಿತಗೊಳಿಸುವ ಅನೇಕ ಪ್ರಸ್ತಾಪಗಳು ಭಾರಿ ಚರ್ಚೆಯಲ್ಲಿವೆ.
ಇದನ್ನು ಮನಗಂಡು ಸಾರ್ವಜನಿಕವಾಗಿ ಒತ್ತಾಯಿಸಲು ಇಚ್ಚಿಸಿ. ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪುರವರ ಹೆಸರನ್ನು ಸರಕಾರವು ಅಂತಿಮಗೊಳಿಸಿ ಈ ಸಂಬಂಧಿಸಿದಂತೆ ಚರ್ಚಿಸಲಾಗುತ್ತಿರುವ ಉಹಾಪೋಹಗಳಿಗೆ ತೆರೆ ಎಳೆಯಬೇಕೆಂದು ವಿನಂತಿ ಮಾಡಿಕೊಂಡರು .
ಹಾಗೂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮುಂದೆ ಶಾಶ್ವತ ಕನ್ನಡ ಧ್ವಜಸ್ತಂಭದ ಸ್ಥಾಪನೆ ಮಾಡಿ ಕನ್ನಡದ ಸ್ವಾಭಿಮಾನ ಭಾವುಟವನ್ನು ಸದಾ ಹಾರಾಡುವಂತಾಗಬೇಕೆಂದು ಈ ಮೂಲಕ ಆಗ್ರಹಿಸಿದರು .
ಯಾವುದೇ ಜಾತಿ-ಮತ-ಪಂಥಗಳ ಬೇದವಿಲ್ಲದೆ ಸೌಹಾರ್ಧಯುತವಾಗಿ ಸೇರಿಕೊಳ್ಳುವ ಕನ್ನಡ ಈ ನೆಲದ ಅಸ್ಮಿತೆಯಾಗುತ್ತದೆ ಹಾಗೂ ಮಾದರಿಯೂ ಆಗುತ್ತದೆ ಅಲ್ಲದೆ ಕನ್ನಡದ ಭಾಷೆ, ಸ್ವಾಭಿಮಾನ, ಏಕತೆ. ವಿಶ್ವಮಾನವತಾ ವಾದ ಈ ಮೂಲಕ ಪಸರಿಸಲು ಮತ್ತಷ್ಟು ಸಹಕಾರಿಯಾಗಲಿದೆ ಎಂದು ಈ ಮೂಲಕ ಸರಕಾರಕ್ಕೆ ತಿಳಿಸಲು ಬಯಸುತ್ತದೆನೆ
ಹೆಸರಿಡುವುದೇ ವಿವಾದವಾಗದಿರಲಿ ಎನ್ನುವ ಕಾರಣಕ್ಕೆ ಮಲೆನಾಡಿನ ಈ ನೆಲೆಯನ್ನು ವಿಶ್ವಮಟ್ಟಕ್ಕೆ ಕೊಂಡೋಯ್ದು ಸಾಹಿತ್ಯದ ನೆಲೆಯನ್ನಾಗಿಸಿದ ಅಗ್ರಗಣ್ಯರು ಮಾನವತಾವಾದದ ಕವಿ ಕುವೆಂಪುರವರ ಹೆಸರು ಎಲ್ಲಾ ಸಂಘಟಿತ ವೇದಿಕೆಗಳು ಸೂಚಿಸಲಿ ಎಂದು ಕೋರಿದರು.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153