ಶಿವಮೊಗ್ಗ : ಸುರ್ವೆ ಕಲ್ಚರಲ್ ಅಕಾಡೆಮಿ ವತಿಯಿಂದ ಪತ್ರಿಕಾ ವಿತರಕರಾಗಿ ಸುದೀರ್ಘ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ದ ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಎನ್. ಮಾಲತೇಶ್ ಕರ್ನಾಟಕ ಸಮಾಜ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ, ಗುರು ಬಸವ ಮಹಾಸ್ವಾಮಿಗಳು, ಡಾ ಕಲ್ಮೇಶ್ವರ ಮಹಾಸ್ವಾಮಿಜಿ, ಕರ್ನಾಟಕ ಸಂಘದ ಆದ್ಯಕ್ಷ ಸುಂದರ ರಾಜ, ಚಿತ್ರ ನಟರಾದ ಎಂ ಎನ್ ಸುರೇಶ, ಮೀನಾ, ಸಿದ್ಧರಾಮ ಹೊನ್ಕಲ್, ಸುರ್ವೆ ಕಲ್ಚರಲ್ ಅಕಾಡೆಮಿ ಅದ್ಯಕ್ಷ ರಮೇಶ ಸುರ್ವೆ ಉಪಸ್ಥಿತರಿದ್ದರು.