ಶಿವಮೊಗ್ಗ ಮಹಾನಗರ ಪಾಲಿಕೆ ಇಂದಿರಾ ಕ್ಯಾಂಟಿನ್‌ಗಳ ನಿರ್ವಹಣೆಯನ್ನು ಕಡೆಗಣಿಸುತ್ತಾ ಕ್ಯಾಂಟಿನ್ ಮುಚ್ಚುವ ಹುನ್ನಾರ ನಡೆಸುತ್ತಿರುವುದನ್ನು ಶಿವಮೊಗ್ಗ ನಗರ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಖಂಡಿಸಿ ಇಂದು ಪ್ರತಿಭಟನೆ ನಡೆಸಿದರು.
ಯಾವುದೇ ವ್ಯಕ್ತಿ ಹಸಿವಿನಿಂದ ನರಳಬಾರದು, ಹಸಿವು ಮುಕ್ತ ರಾಜ್ಯವನ್ನಾಗಿ ಮಾಡಬೇಕೆಂಬ ಮಹತ್ವಾಕಾಂಕ್ಷೆಯಿಂದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದಿರಾ ಕ್ಯಾಂಟಿನ್ ಯೋಜನೆ ರೂಪಿಸಿ ಅದಕ್ಕೆ ಚಾಲನೆ ನೀಡಿದ್ದರು. ಇದರಿಂದಾಗಿ ಲಕ್ಷಾಂತರ ಮಂದಿಗೆ ನಿತ್ಯ ಕೇವಲ 5 ರೂ ಗೆ ತಿಂಡಿ, 10 ರೂ ಗೆ ಊಟ ದೊರೆಯುತ್ತಿತ್ತು. ಸಿದ್ದರಾಮಯ್ಯನವರ ದೂರದೃಷ್ಟಿಯ ಯೋಜನೆಯಿಂದಾಗಿ ಲಕ್ಷಾಂತರ ಮಂದಿ ಹಸಿವಿನಿಂದ ಬಳಲುವುದು ನಿಂತಿತ್ತು. ಇಡೀ ದೇಶವು ಕೋವಿಡ್ ಸಂಕಷ್ಟಕ್ಕೊಳಗಾದ ಸಂದರ್ಭದಲ್ಲಿ ನಿರ್ಗತಿಕರಿಗೆ, ಬಡವರಿಗೆ ಇಂದಿರಾ ಕ್ಯಾಂಟಿನ್ ವರದಾನವಾಗಿತ್ತು. ಹಸಿವಿನ ಬೆಲೆ ಅಮದು ಎಲ್ಲರಿಗೂ ಗೊತ್ತಾಗಿತ್ತು. ಯಾರೋಬ್ಬರೂ ಹಸಿವಿನಿಂದಿರಬಾರದೆಂಬ ಉದ್ದೇಶದಿಂದ ಇಂದಿರಾ ಕ್ಯಾಂಟಿನ್‌ಗೆ ಚಾಲನೆ ನೀಡಿದ್ದ ಸಿದ್ದರಾಮಯ್ಯ ರವರು ಎಂದರು.
ಆದರೆ ಬಡವರ ವಿರೋಧಿಯಾದ ಬಿಜೆಪಿ ತನ್ನ ನೀತಿಯಿಂದಾಗಿ ಇಂದಿರಾ ಕ್ಯಾಂಟಿನ್‌ಗಳಿಗೆ ಮೂಲ ಸೌಕರ್ಯಗಳನ್ನು ಕಡಿರಗೊಳಿಸುತ್ತಾ ಬಂದಿದೆ. ಇದರಿಂದಾಗಿ ರಾಜ್ಯದ ಹಲವೆಡೆ ಇಂದಿರಾ ಕ್ಯಾಂಟಿನ್‌ಗಳು ಮುಚ್ಚಿವೆ. ಶಿವಮೊಗ್ಗದಲ್ಲೂ ಇದೇ ರೀತಿ ಇಂದಿರಾ ಕ್ಯಾಂಟಿನ್‌ಗಳನ್ನು ಮುಚ್ಚುವ ಹುನ್ನಾರ ನಡೆಸುತ್ತಿದ್ದು, ಮೂಲಭೂತ ಸೌಕರ್ಯಗಳನ್ನು ಕಡೆಗಣಿಸುತ್ತಾ ಬರಲಾಗುತ್ತಿದೆ. ನಗರದಲ್ಲಿ ನಾಲ್ಕು ಇಂದಿರಾ ಕ್ಯಾಂಟಿನ್‌ಗಳಿದ್ದು, ಇಲ್ಲಿ ಹಿಂದಿನಂತೆ ಗುಣಮಟ್ಟದ ಆಹಾರ ಒದಗಿಸುತ್ತಿಲ್ಲ. ಶುಚಿತ್ವವಂತೂ ಇಲ್ಲವೇ ಇಲ್ಲ ಎನ್ನುವಂತಾಗಿದೆ. ಗುಣಮಟ್ಟದ ಆಹಾರ ಒದಗಿಸದೆ ಶುಚಿತ್ವವನ್ನು ಕಡೆಗಣಿಸಿ ನಾಗರಿಕರು ಇಂದಿರಾ ಕ್ಯಾಂಟಿನ್ ಕಡೆ ತಲೆ ಹಾಕದಂತೆ ಮಾಡಲಾಗುತ್ತಿದೆ.
ಇಂದಿರಾ ಕ್ಯಾಂಟಿನ್‌ಗೆ ಆಹಾರ ಪೂರೈಸುವುದು ಮತ್ತು ನಿರ್ವಹಿಸುವುದು ಮಹಾನಗರ ಪಾಲಿಕೆ ಕೆಲಸವಾಗಿದ್ದು, ಪಾಲಿಕೆಯಲ್ಲಿರುವ ಬಿಜೆಪಿ ಆಡಳಿತ ಇಂದಿರಾ ಕ್ಯಾಂಟಿನ್‌ನಲ್ಲಿ ಕಳಪೆ ಆಹಾರ ಪೂರೈಸಿ ಶುಚಿತ್ವ ಕಡೆಗಣಿಸುವ ಮೂಲಕ ಅದನ್ನು ಮುಚ್ಚುವ ಕೆಲಸಕ್ಕೆ ಕೈ ಹಾಕಿದೆ. ಬಡವರ ಅನ್ನ ಕಸಿದುಕೊಳ್ಳುತ್ತಿರುವ ಬಿಜೆಪಿ ದುರಾಡಳಿತವನ್ನು ನಾವು ಖಂಡಿಸುತ್ತಿದ್ದು, ಕೂಡಲೇ ಪಾಲಿಕೆ ಆಡಳಿತ ನಗರದಲ್ಲಿರುವ ಎಲ್ಲಾ ಇಂದಿರಾ ಕ್ಯಾಂಟಿನ್‌ಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಹಿಂದಿನಂತೆ ಕ್ಯಾಂಟಿನ್‌ಗಳನ್ನು ಶುಚಿತ್ವವಾಗಿಟ್ಟುಕೊಂಡು ಗುಣಮಟ್ಟದ ಆಹಾರವನ್ನು ನಾಗರಿಕರಿಗೆ ಮುಂದಿನ ದಿನಗಳಲ್ಲಿ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸುತ್ತದ್ದೇವೆ. ಒದಗಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸುತಿದ್ದೇವೆ.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಲೀಂ ಪಾಷ, ದೀಪಕ್ ಸಿಂಗ್, ಮಾಜಿ ಶಾಸಕರಾದಕೆ ಬಿ ಪ್ರಸನ್ನ ಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷರಾದ ಎನ್ ರಮೇಶ್, ವಿಶ್ವನಾಥ್ ಕಾಶಿ, ಮಹಾನಗರ ಪಾಲಿಕೆ ಸದಸ್ಯರಾದ ಯೋಗೇಶ್, Nsui ಅಧ್ಯಕ್ಷರಾದ ವಿಜಯ್, ಕುಮಾರಸ್ವಾಮಿ, ಶೇಷಾದ್ರಿ, ಅರ್ಚನಾ, ಸುವರ್ಣ ನಾಗರಾಜ್ ಹೆಚ್ಚಿನ ಕಾರ್ಯಕರ್ತರು ಉಪಸ್ಥಿರಿದರು.