ಶಿವಮೊಗ್ಗದ ಸೋಗಾನೆಯಲ್ಲಿ ನಿರ್ಮಿಸಲಾಗಿರುವ ನೂತನ್ ಐತಿಹಾಸಿಕ ವಿಮಾನ ನಿಲ್ದಾಣವನ್ನ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದರು.
ಶಿವಮೊಗ್ಗದ ಸೋಗಾನೆಯ 775 ಎಕರೆ ಪ್ರದೇಶದಲ್ಲಿ384 ಕೋಟಿ ರೂ. ವೆಚ್ಚದಲ್ಲಿ ನೂತನ ಏರ್ ಪೋರ್ಟ್ ನಿರ್ಮಾಣ ಮಾಡಲಾಗಿದ್ದು, 3200 ಮೀ ಉದ್ದದ ರನ್ ವೇಯನ್ನು ಹೊಂದಿದೆ. ಇಂದು ಪ್ರಧಾನಿ ಮೋದಿ ಈ ವಿಮಾನ ನಿಲ್ದಾಣವನ್ನ ಲೋಕಾರ್ಪಣೆ ಮಾಡಿದರು.
ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಸಚಿವರಾದ ನಾರಾಯಣಗೌಡ, ಭೈರತಿ ಬಸವರಾಜ್, ಸಿಸಿ ಪಾಟೀಲ್, ಅರಗ ಜ್ಞಾನೇಂದ್ರ,ಎಸ್ ಟಿ ಸೋಮಶೇಖರ್ ವಿ.ಸೋಮಣ್ಣ, ಸಂಸದ ಬಿವೈ ರಾಘವೇಂದ್ರ, ಶಾಸಕ ಕೆ.ಎಸ್ ಈಶ್ವರಪ್ಪ ಸೇರಿ ಹಲವರು ಉಪಸ್ಥಿತರಿದ್ದರು.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಕೊಟ್ಟ ಮಾತಿನಂತೆ ವಿಮಾನ ನಿಲ್ದಾಣ ನಿರ್ಮಾಣ ಮಾಡಿ ಉದ್ಘಾಟಿಸಲಾಗಿದೆ. ಈ ದಿನ ಬಹಳ ವೈಶಿಷ್ಟ್ಯಪೂರ್ಣವಾದದ್ದು ಮಲೆನಾಡು ಭಾಗದ ಜನರ ಕನನಸು ನನಸಾಗುತ್ತಿರುವ ಶುಭ ಸಂಕೇತ. ಮೋದಿ ಆಶೀರ್ವಾದದಿಂದ ನಾಡಿನ ಜನರ ಸೇವೆ ಮಾಡಲು ಅವಕಾಶ ಸಿಕ್ಕಿದೆ. ಶಿವಮೊಗ್ಗ ಜನರಿಗೆ ಇಂದು ಸಾರ್ಥಕತೆ ದಿನ ಎಂದರು.
ಮೋದಿ ಅಭಿವೃದ್ದಿಗೆ ಕರ್ನಾಟಕವೇ ಪ್ರೇರಣೆ . ಡಬಲ್ ಎಂಜಿನ್ ಸರ್ಕಾರದಿಂದ ಹಳ್ಳಿಗಳ ಅಭಿವೃದ್ಧಿ, ರಾಜ್ಯದಲ್ಲಿ ಸಾಕಷ್ಟು ಅಭಿವೃದ್ದಿಯಾಗುತ್ತಿದೆ. ಕರುನಾಡ ಅಭಿವೃದ್ದಿಗೆ ಮೋದಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಬಸವಣ್ಣನವರ ಕಾಯಕತತ್ವವನ್ನ ಉಲ್ಲೇಖಿಸುತ್ತಾರೆ ಮೋದಿ .ಮೋದಿ ಆಶೀರ್ವಾದದಿಂದ ನಾಡಿನ ಜನರ ಸೇವೆ ಮಾಡಲು ಅವಕಾಶ ಸಿಕ್ಕಿದೆ. ನನಗೆ ಇಂತಹ ಅವಕಾಶ ನೀಡಿದ್ದಕ್ಕೆ ಚಿರಋಣಿಯಾಗಿರುತ್ತೇನೆ ಎಂದರು.