ಶಶಿಕುಮಾರ್ ಎಸ್ ಗೌಡ ರಾಜ್ಯ ಕಾರ್ಯದರ್ಶಿ ಸಂಯುಕ್ತ ಜನತಾದಳ ರವರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಏಕಾಂಗಿ ಪ್ರತಿಭಟನೆ ಮಾಡಿದರು.

ರಾಜ್ಯದಂತ ಎನ್ಎಚ್ಎಮ್ ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿ ಸರ್ಕಾರಿ ಆಸ್ಪತ್ರೆಗಳು ಮತ್ತು ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಆಗ ಗ್ರಾಮೀಣ ಭಾಗದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸುಮಾರ್ 22,000 ನೌಕರರು ಗುತ್ತಿಗೆ ಆಧಾರದಲ್ಲಿ ಫಾರ್ಮಸಿಸ್ಟ್ ಸ್ಟಾಫ್. ನರ್ಸ್. ಗ್ರೂಪ್ ಡಿ ಎಕ್ಸಲೆ ಟೆಕ್ನಿಷಿಯನ್ಸ್.ಲ್ಯಾಬ್ ಟೆಕ್ಸಿಯನ್. ಸೇರಿದಂತೆ ಅನೇಕ ಸಿಬ್ಬಂದಿಗಳು 15 ವರ್ಷಗಳಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದು ಇವರೆಲ್ಲ ಕೂಡ ಅತ್ಯಂತ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದು ಈ ಮೇಲ್ಕಂಡ ಎಲ್ಲರಿಗೂ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂದು ಆಗ್ರಹಿಸಿದ್ದರು.

ಸೇವೆಯನ್ನು ಕಾಯಂಗಗೊಳಿಸಕೊಡಬೇಕು ಹಾಗೂ ದೇಶದ ಹಲವು ರಾಜ್ಯಗಳಾದ ಹಿಮಾಚಲ ಪ್ರದೇಶ ಛತ್ತೀಸ್ಗಡ ಹರ್ಯಾಣ ಆಂಧ್ರಪ್ರದೇಶ ತೆಲಂಗಾಣ ಸೇರಿದಂತೆ ಹಲೋ ರಾಜ್ಯಗಳಲ್ಲಿ ಎನ್ ಹೆಚ್ ಎಂ ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವ. ಹ ನೇ. ಎಲ್ಲಾ ವೈದ್ಯಕೀಯ ಸಿಬ್ಬಂದಿಗಳನ್ನು ಅಲೆನಾ ರಾಜ್ಯ ಸರ್ಕಾರಗಳು ಕಾಯಂ ಮಾಡಬೇಕೆಂದು ಹೇಳಿದರು.ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ 25 ದಿನದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ರಾಜ್ಯವಿರುವ 22 ಸಾವಿರ ಎನ್ ಎಚ್ ಎಂ ನೌಕರರು ಸೇವನು ಕಾಯಂಗ ಗೊಳಿಸುವಂತೆ ಹಗಲು ರಾತ್ರಿ ಎನ್ನದೆ ಧರಣಿ ನಡೆಸುತ್ತಿದ್ದಾರೆ ರಾಜ್ಯ ಸರ್ಕಾರ ಸಹಕಾರ ನೀಡಬೇಕೆಂದು ಆಗ್ರಹಿಸಿದರು.

ಇದರಿಂದ ಎನ್ ಹೆಚ್ ಎಂ ನೌಕರರಿಗೆ ಯಾವುದೇ ಪ್ರಯೋಜನ ಆಗುವುದಿಲ್ಲ ಆಗ ಎನ್ ಹೆಚ್ ಎಂ ನೌಕರರು ನಡೆಸುತ್ತಿರುವ ಮುಷ್ಕರದಿಂದ ರಾಜ್ಯಾದ್ಯಂತ ಇರುವ ಸರ್ಕಾರ ಆಸ್ಪತ್ರೆಗಳಲ್ಲಿ ಮತ್ತು ಪ್ರಾಥಮಿಕ ಆರೋಗ್ಯ ಮತ್ತು ಗ್ರಾಮೀಣ ಗ್ರಾಮೀಣ ಅರೋಗ್ಯ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ನೀಡುತ್ತಿರುವ ಆರೋಗ್ಯ ಸೇವೆ ವ್ಯತ್ಯಾಸವಾಗಿರುತ್ತದೆ ಇದರಿಂದ ತಾವುಗಳು ರಾಜ್ಯದ ನಾಗರಿಕ ಹಿತ ದೃಷ್ಟಿಯಿಂದ ಎನ್ ಹೆಚ್ ಎಂ ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ವೈದ್ಯಕೀಯ ಸಿಬ್ಬಂದಿಗಳ ಬೇಡಿಕೆಗಳನ್ನು ಈಡೇರಿಸಿ ಸಮಾನ ವೇತನ ನೀಡಿ ಕೆಲಸ ಕಾಯಂಗಗೊಳಿಸಬೇಕೆಂದು ಹೇಳಿದರು.

ವರದಿ: ಸುರೇಶ್ ಬಿ ಎಸ್…