ಆಮ್ ಆದ್ಮಿ ಪಕ್ಷದ ವತಿಯಿಂದ ಮನೋಹರ್ ಗೌಡ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಬಿಜೆಪಿ ಶಾಸಕ ಮಾಡಲ ವಿರುಪಾಕ್ಷ ಸಾಕ್ಷಿ ಸಮೇತ ಮಾಡಿರುವ ಭ್ರಷ್ಟಾಚಾರವನ್ನು ಲೋಕಾಯುಕ್ತ ಅಧಿಕಾರಿಗಳು ಬಯಲಿಗೆ ತಂದು ಯಶಸ್ವಿಗೊಳಿಸಿದ್ದಾರೆ ಆದರೆ ಭ್ರಷ್ಟಾಚಾರವನ್ನು ಮಾಡಿರುವ ಶಾಸಕ ಮುಖ್ಯಮಂತ್ರಿಗಳ ಬಳಿ ಒಂದು ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಲು ಬಂದಾಗಲೇ ಬಂಧಿಸಬಹುದಾಗಿತ್ತು ಆದರೆ ತಲೆಮರಿಸಿಕೊಳ್ಳಲು ಸರ್ಕಾರವೇ ಅವಕಾಶ ಮಾಡಿಕೊಟ್ಟಿದೆ.
ಈ ಮೂಲಕ ಇಡೀ ರಾಜ್ಯ ಸರ್ಕಾರವೇ ಭ್ರಷ್ಟಾಚಾರದಲ್ಲಿ ಶಾಮಿಲಾ ಆಗಿರೋದು ಬಹಿರಂಗವಾಗಿದೆ ಆದ್ದರಿಂದ ಈ ಕೂಡಲೇ ರಾಜ್ಯ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೆ ಗೊಳಿಸಬೇಕೆಂದು ಈ ಮೂಲಕ ರಾಜ್ಯಪಾಲರಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಆಮ್ ಆದ್ಮಿ ಪಾರ್ಟಿ ಯ ಮುಖಂಡರು ಹಾಗೂ ಕಾರ್ಯಕರ್ತರು ಆಗ್ರಹ ಪಡಿಸಿದರು.