ಶಿವಮೊಗ್ಗ: ಬಿಜೆಪಿಯವರು ಜಾತಿ ಧರ್ಮದ ಮೇಲೆ ಸಮಾಜ ಒಡೆಯುತ್ತಾರೆ.ಇವರಿಗೆ ಮತ ನೀಡದೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುವಂತೆ ಎಐಸಿಸಿ ಸದಸ್ಯ ಮಧು ಬಂಗಾರಪ್ಪ ಹೇಳಿದರು.

ಹಸೂಡಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಗ್ಯಾರಂಟಿ ಕಾರ್ಡ್ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಚುನಾವಣಾ ಸಂದರ್ಭದಲ್ಲಿ ಎಲ್ಲ ಪಕ್ಷದವರು ಬಂದು ಮತ ಕೇಳುತ್ತಾರೆ.ಆದರೆ ಬಡವರ ಪರವಾಗಿ ನಿಲ್ಲುವ ಏಕೈಕ ಪಕ್ಷ ಕಾಂಗ್ರೆಸ್ ಮಾತ್ರ.ಹಾಗಾಗಿ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಬೇಕು ಎಂದರು.

ಬಂಗಾರಪ್ಪನವರು ಮುಖ್ಯಮಂತ್ರಿ ಆದ ಅವಧಿಯಲ್ಲಿ ಆಶ್ರಯ‌ ಮನೆ ನೀಡುವ ಮೂಲಕ ಬಡವರ ಕಲ್ಯಾಣ ಮಾಡಿದ್ದರು, ಆದರೆ ಬಿಜೆಪಿ ಸರ್ಕಾರದಲ್ಲಿ ಬಡವರಿಗೆ ಮನೆ ಹಂಚಿಕೆ ಮಾಡಿಲ್ಲ.ಯಾಕೆಂದರೆ 40% ಕಮಿಷನ್ ಸಿಗಲ್ಲ ಹಾಗಾಗಿ ಹಂಚಿಕೆ ಮಾಡಿಲ್ಲ ಎಂದು ಟೀಕಿಸಿದರು.

ಬಿಜೆಪಿ ಸರ್ಕಾರ ಗ್ರಾಮೀಣ ಪ್ರದೇಶಕ್ಕೆ 7 ತಾಸು ವಿದ್ಯುತ್ ನೀಡುತ್ತಿಲ್ಲ. ನರೇಂದ್ರ ಮೋದಿ 15 ಲಕ್ಷ ಹಾಕುತ್ತೇನೆ ಎಂದು ಹೇಳಿ ಮತ ಪಡೆದುಕೊಂಡ್ರು ಆದರೆ 15 ಪೈಸ್ ಕೊಟಿಲ್ಲ.ಬರೀ ಸುಳ್ಳು ಹೇಳುತ್ತಿದ್ದಾರೆ.ಬಿಜೆಪಿಯ ಸುಳ್ಳಿನ‌ ಖಜಾನೆ ಖಾಲಿಯಾಗಿದೆ ಎಂದರು.
ಬಿಜೆಪಿಯವರದು 40% ಸರ್ಕಾರ ಎಂಬುದು ಸಾಭೀತಾಗಿದೆ. ಸರ್ಕಾರದ ಮೇಲೆ 40% ಕಮಿಷನ್ ಆರೋಪ ಮಾಡಿದ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಯ್ಯಾವರನ್ನು ರಾತ್ರೋರಾತ್ರಿ ಬಂಧಿಸಿದ್ದರು.ಆದರೆ ಬಿಜೆಪಿ ಎಂಎಲ್ಎ ಮಾಡಾಳ್ ವಿರೂಪಾಕ್ಷಪ್ಪ ಮೇಲೆ ಕೋಟಿ‌ಕೋಟಿ ಹಣ ಸಿಕ್ಕಿದ್ದರೂ ಬಂಧಿಸಿಲ್ಲ.ಲೂಕ್ ಔಟ್ ನೋಟಿಸ್ ಕೊಟ್ಟರೂ ಅವರ ಬಂಧನ ಯಾಕಿಲ್ಲ.ಸರ್ಕಾರ ಅವರನ್ನು ರಕ್ಷಣೆ ಮಾಡುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಮುಖಂಡ ವಿಜಯ್ ಕುಮಾರ್ ಮಾತನಾಡಿ, ಗೃಹ ಲಕ್ಷ್ಮೀ ಯೋಜನೆಯಡಿ ಪ್ರತಿ ತಿಂಗಳು ಹೆಣ್ಣು ಮಕ್ಕಳ ಖಾತೆಗೆ ಎರಡು ಸಾವಿರ ಹಣ ಹಾಕುತ್ತೇವೆ.ಪ್ರತಿಯೊಬ್ಬರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಎನ್.ರಮೇಶ್ ಮಾತನಾಡಿ,ಹೆಣ್ಣು ಮಕ್ಕಳು ಕಾಂಗ್ರೆಸ್ ಪಕ್ಷದ ಭರವಸೆ.ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಬಡವರ ಕಾರ್ಯಕ್ರಮ ಕೊಡುವುದಾಗಿ ಭರವಸೆ ನೀಡಿದ್ದರು.ಆದರೆ ಬಡವರ ಕಾರ್ಯಕ್ರಮ‌ ನೀಡಿಲ್ಲ ಎಂದು ದೂರಿದರು.

ಸಿದ್ದರಾಮಯ್ಯ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಕತ್ತರಿ ಹಾಕಿದ್ದಾರೆ ಎಂದ ಅವರು,ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಹತ್ತು ಕೆಜಿ ಅಕ್ಕಿ ವಿತರಣೆ ಮಾಡುತ್ತೇವೆ.ಗೃಹ ಲಕ್ಷ್ಮೀ ಯೋಜನೆಯಡಿ ಎರಡು ಸಾವಿರ ರೂಪಾಯಿ ವಿತರಣೆ ಆಗಲಿದೆ ಎಂದರು.

ನಾರಾಯಣ ಸ್ವಾಮಿ ಮಾತನಾಡಿ,ಸ್ವಾತಂತ್ರ ನಂತರ ಬಡವರ ಪರವಾಗಿ ರಚನಾತ್ಮಕವಾಗಿ ಕೆಲಸ‌ ಮಾಡಿದ್ದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ ಎಂದರು.

ಆಶ್ರಯ ನಿವೇಶನ,ಆರಾಧಾನ,ಗ್ರಾಮೀಣ ಕೃಪಾಂಕ‌‌ ಸೇರಿದಂತೆ ಬಡವರ ಪರವಾಗಿ ಸಾಕಷ್ಡು‌ ಕೆಲಸ ಮಾಡಿದೆ.ಈ ಭಾರಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುವಂತೆ ಮನವಿ ಮಾಡಿದರು.

ಆರ್.ಪ್ರಸನ್ನ ಕುಮಾರ್ ಮಾತನಾಡಿ,ಬಿಜೆಪಿ ಸರ್ಕಾರ ಬಡವರ ಬಗ್ಗೆ ಕಾಳಜಿ ಇಲ್ಲ. ಭ್ರಷ್ಟಾಚಾರ ಮಾಡುವುದರಲ್ಲೆ ಮುಳುಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ವಿ. ನಾರಾಯಣಸ್ವಾಮಿ ಡಾ
ಶ್ರೀನಿವಾಸ್ ಕರಿಯಣ್ಣ,ಎಸ್.ಪಿ ದಿನೇಶ್,ವೇದಾ ವಿಜಯಕುಮಾರ್,ಜಿ.ಡಿ ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತು.ಸಿರಿಗೆರೆ ನಾಗರಾಜ್ ಸೇರಿದಂತೆ ಹಲವರಿದ್ದರು.

ವರದಿ ಪ್ರಜಾ ಶಕ್ತಿ…